For Quick Alerts
ALLOW NOTIFICATIONS  
For Daily Alerts
 

IPL 2025: ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲಿರುವ ರಿಷಭ್ ಪಂತ್; ಈ ಫ್ರಾಂಚೈಸಿ ಸೇರುವ ಸಾಧ್ಯತೆ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಅತಿ ಹೆಚ್ಚು ಬಾರಿ ಆಡಿದ ಆಟಗಾರ ಮತ್ತು ಅತಿ ರನ್ ಸ್ಕೋರರ್ ಆಗಿರುವ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಮುಂದಿನ ವರ್ಷದ ಮೆಗಾ ಹರಾಜಿನ ಮೊದಲು ಫ್ರಾಂಚೈಸಿ ತೊರೆಯಲಿದ್ದಾರೆ ಎಂದು ವರದಿಯಾಗಿದೆ.

ಶನಿವಾರ, ಜುಲೈ 20ರಂದು ದೈನಿಕ್ ಜಾಗರಣ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಐಪಿಎಲ್ 2024ರಲ್ಲಿ ತಂಡವನ್ನು ಮುನ್ನಡೆಸಿದ ರಿಷಭ್ ಪಂತ್ ಅವರೊಂದಿಗೆ ಸಂತೋಷವಾಗಿಲ್ಲ ಮತ್ತು ಸ್ಟಾರ್ ಕ್ರಿಕೆಟಿಗನನ್ನು ಉಳಿಸಿಕೊಳ್ಳಬೇಕೆ ಅಥವಾ ಕೈ ಬಿಡಬೇಕೆ ಎಂಬ ನಿರ್ಧಾರದ ಬಗ್ಗೆ ಇನ್ನೂ ಯೋಚಿಸುತ್ತಿದೆ.

IPL 2025 Rishabh Pant to Quit Delhi Capitals Possibility of Joining CSK Franchise

ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುಂಚಿತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೊರೆಯಬಹುದು ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.

ಆದಾಗ್ಯೂ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರ ಬೆಂಬಲದ ಹೊರತಾಗಿಯೂ, ಮುಂಬರುವ ಮೆಗಾ ಹರಾಜಿಗೆ ಮುಂಚಿತವಾಗಿ ರಿಷಭ್ ಪಂತ್‌ರನ್ನು ಉಳಿಸಿಕೊಳ್ಳುವುದಿಲ್ಲ ಎಂದು ವರದಿ ಹೇಳಿದೆ.

IPL 2025 Rishabh Pant to Quit Delhi Capitals Possibility of Joining CSK Franchise

ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದರೆ, ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಸೇರಬಹುದು ಎನ್ನಲಾಗುತ್ತಿದೆ.

ಎಂಎಸ್ ಧೋನಿ ಮುಂದಿನ ದಿನಗಳಲ್ಲಿ ಐಪಿಎಲ್‌ನಿಂದ ನಿವೃತ್ತಿ ಹೊಂದಲಿರುವುದರಿಂದ, ಸಿಎಸ್‌ಕೆ ಫ್ರಾಂಚೈಸಿಯು ಭಾರತೀಯ ವಿಕೆಟ್-ಕೀಪರ್-ಬ್ಯಾಟರ್‌ನ ಹುಡುಕಾಟದಲ್ಲಿದೆ ಮತ್ತು ರಿಷಭ್ ಪಂತ್‌ನಂತಹ ಪ್ರತಿಭಾವಂತ ಆಟಗಾರನೊಂದಿಗೆ ಸಹಿ ಮಾಡಲು ಹೆಚ್ಚು ಆಸಕ್ತಿ ವಹಿಸಿದ್ದಾರೆ.

ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ ನಿರ್ಧರಿಸಿದರೆ, 2024ರ ಟಿ20 ವಿಶ್ವಕಪ್‌ನ ಎಲ್ಲಾ ಎಂಟು ಪಂದ್ಯಗಳಲ್ಲಿ ಭಾರತ ತಂಡಕ್ಕಾಗಿ ನಂ.3 ಬ್ಯಾಟರ್ ಆಗಿ ಆಡಿದ 26 ವರ್ಷದ ಎಡಗೈ ವಿಕೆಟ್ ಕೀಪರ್-ಬ್ಯಾಟರ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರುವ ನಿರೀಕ್ಷೆ ಇದೆ.

IPL 2025 Rishabh Pant to Quit Delhi Capitals Possibility of Joining CSK Franchise

43 ವರ್ಷದ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಆಟಗಾರ ಮತ್ತು ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್‌ನ 2025ರ ಆವೃತ್ತಿಯಲ್ಲಿ ಅವರು ಆಡದಿರುವ ಹೆಚ್ಚಿನ ಅವಕಾಶಗಳಿವೆ.

ಈ ಹಿಂದೆ ಭಾರತದ ಆಲ್‌ರೌಂಡರ್ ಶಿವಂ ದುಬೆ ಅವರು 2024ರ ಯಶಸ್ವಿ ಋತುವಿನ ನಂತರ, ಟೀಮ್ ಇಂಡಿಯಾದಲ್ಲಿ ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಆತ್ಮವಿಶ್ವಾಸವನ್ನು ಗಳಿಸಿದ್ದಕ್ಕಾಗಿ ಐಪಿಎಲ್ ಮತ್ತು ಸಿಎಸ್‌ಕೆಗೆ ಮನ್ನಣೆ ನೀಡಿದ್ದಾರೆ.

ಇನ್ನು ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಕೂಡ ಲಕ್ನೋ ಸೂಪರ್ ಜೈಂಟ್ಸ್ ಜೊತೆಗಿನ ತನ್ನ ಮೂರು ವರ್ಷಗಳ ಒಡನಾಟವನ್ನು ಕೊನೆಗೊಳಿಸಬಹುದು ಎಂದು ವರದಿಯಾಗಿದೆ.

ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ಕೆಎಲ್ ರಾಹುಲ್ ಅವರನ್ನು ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲೇ ತೀವ್ರವಾಗಿ ಟೀಕಿಸಿದರು ಮತ್ತು ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಐಪಿಎಲ್ 2022ರ ಮೆಗಾ ಹರಾಜಿನ ಮೊದಲು 17 ಕೋಟಿ ರೂಪಾಯಿಗೆ ಎಲ್‌ಎಸ್‌ಜಿ ಸೇರಿದ ಕರ್ನಾಟಕ ಮೂಲದ ಆಟಗಾರ ಕೆಎಲ್ ರಾಹುಲ್, ತವರಿನ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಬಹುದು.

31 ವರ್ಷದ ಕೆಎಲ್ ರಾಹುಲ್ ಈ ಹಿಂದೆಯೂ ಆರ್‌ಸಿಬಿ ಪರ ಆಡಿದ್ದಾರೆ. ಅವರು 2013 ಮತ್ತು 2016ರ ಐಪಿಎಲ್‌ನಲ್ಲಿ ಆರ್‌ಸಿಬಿ ಫ್ರಾಂಚೈಸಿಯ ಭಾಗವಾಗಿದ್ದರು. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ರಾಜ್ಯ ತಂಡಕ್ಕೆ ಮತ್ತೊಮ್ಮೆ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

2024ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡವು ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆಡಿತು ಮತ್ತು ಪ್ಲೇಆಫ್‌ಗೆ ಅರ್ಹತೆ ಗಳಿಸಿತು. ಆದರೆ, ಇದೀಗ ಭಾರತೀಯ ಆಟಗಾರನನ್ನು ನಾಯಕನಾಗಿ ನೇಮಿಸಲು ಆರ್‌ಸಿಬಿ ಎದುರು ನೋಡುತ್ತಿದೆ ಎಂದು ಹೇಳಲಾಗಿದೆ.

ಆರ್‌ಸಿಬಿ ಫ್ರಾಂಚೈಸಿಯು ಕೆಎಲ್ ರಾಹುಲ್ ಅವರನ್ನು ಪಡೆದುಕೊಳ್ಳಲು ಯಶಸ್ವಿಯಾದರೆ, ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್, ಐಪಿಎಲ್ 2025ರಲ್ಲಿ ಆರ್‌ಸಿಬಿ ನಾಯಕನ ಅಧಿಕಾರ ವಹಿಸಿಕೊಳ್ಳುವುದನ್ನು ನೋಡಬಹುದು.

Story first published: Saturday, July 20, 2024, 13:34 [IST]
Other articles published on Jul 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+