IPL 2025: ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ನಿರ್ಧಾರ; ಸಿಎಸ್‌ಕೆ ಫ್ಯಾನ್ಸ್‌ಗೆ ಶಾಕ್
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಟೂರ್ನಿಗೆ ಎಲ್ಲಾ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಮೆಗಾ ಹರಾಜಿನ ನಿಯಮಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಬಿಡುಗಡೆ ಮಾಡಿಲ್ಲ.
ತಮ್ಮ ನೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ಅಭಿಮಾನಿಗಳು ಚಿಂತಿತರಾಗಿದ್ದಾರೆ. ಇದರ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ ಫ್ರಾಂಚೈಸಿ ತನ್ನ ನಾಯಕ ರಿಷಬ್ ಪಂತ್ ಅವರನ್ನು ತಂಡದಿಂದ ಕೈ ಬಿಡಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಪಂತ್ ಅವರನ್ನು ಡೆಲ್ಲಿ ಫ್ರಾಂಚೈಸಿ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಡೆಲ್ಲಿ ತಂಡದಲ್ಲೇ ಉಳಿಯಲಿರುವ ಪಂತ್
ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ರಿಷಬ್ ಪಂತ್ ಅದ್ಭುತ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದಿನ ವರ್ಷವೂ ಡೆಲ್ಲಿ ಕ್ಯಾಪಿಟಲ್ಸ್ ಪರ ಪಂತ್ ಆಡುವುದು ಖಚಿತವಾಗಿದ್ದು, ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ಬಂದಿದೆ. ಈ ಬಗ್ಗೆ ಅಧಿಕೃತವಾಗಿ ಡೆಲ್ಲಿ ಫ್ರಾಂಚೈಸಿ ಬಹಿರಂಗಪಡಿಸಿಲ್ಲ. ಆದರೆ ಐಪಿಎಲ್ ಮೂಲಗಳ ಪ್ರಕಾರ ಡೆಲ್ಲಿ ತಂಡದಲ್ಲಿ ಪಂತ್ ಉಳಿಯಲಿದ್ದಾರೆ.
ಮತ್ತೊಂದೆಡೆ ಈ ಸುದ್ದಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಅಘಾತವಾಗಿದೆ. ಡೆಲ್ಲಿ ತಂಡವನ್ನು ತೊರೆದರೆ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ಸೇರಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಪಂತ್ ಡೆಲ್ಲಿಯಲ್ಲಿ ಉಳಿಲಿಯುವುದು ಫಿಕ್ಸ್ ಆಗುತ್ತಿದ್ದಂತೆ ಸಿಎಸ್‌ಕೆ ಫ್ಯಾನ್ಸ್ ಶಾಕ್ ಆಗಿದ್ದಾರೆ. ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ಮುಂಬರುವ ಐಪಿಎಲ್ ಆಡುವುದು ಅನುಮಾನ ಎನ್ನಲಾಗುತ್ತಿದೆ. ಅವರ ಸ್ಥಾನಕ್ಕೆ ರಿಷಬ್ ಪಂತ್ ಅವರನ್ನು ನೋಡಲಾಗುತ್ತಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಮೂಲಗಳು ಕ್ರಿಕ್‌ಬಜ್‌ಗೆ ನೀಡಿರುವ ಮಾಹಿತಿಗಳ ಪ್ರಕಾರ, ಪಂತ್ ಫ್ರಾಂಚೈಸಿಯ ಮೊದಲ ಆಯ್ಕೆಯಾಗಿದ್ದಾರೆ ಎಂದು ತಿಳಿಸಿವೆ. ಮುಂಬೈನಲ್ಲಿ ಪಂತ್ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್ ನಡುವೆ ಇತ್ತೀಚೆಗೆ ನಡೆದ ಸಭೆಯ ನಂತರ ಈ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ. ಪಂತ್ ಅವರ ಪ್ರಸ್ತುತ ಐಪಿಎಲ್ ಸಂಭಾವನೆಯು 16 ಕೋಟಿ ರೂಪಾಯಿಗಳು. ಆದರೆ ಮುಂದಿನ ಆವೃತ್ತಿಗೆ ಸಂಭಾವನೆ ಹೆಚ್ಚಾಗುವ ಸಾಧ್ಯತೆಯಿದೆ.
ಡೆಲ್ಲಿ ಟಾಪ್ ಸ್ಕೋರರ್
ಭೀಕರ ರಸ್ತೆ ಅಪಘಾತದ ನಂತರ 2023ರ ಐಪಎಲ್ ಆವೃತ್ತಿಯಿಂದ ಪಂತ್ ಹೊರಗುಳಿದಿದ್ದರು. ಇದಾದ ಬಳಿಕ ಈ ಬಾರಿ ಅವರು ಐಪಿಎಲ್‌ಗೆ ಮರಳುವ ಮೂಲಕ ಡೆಲ್ಲಿ ತಂಡದ ನಾಯಕರಾಗಿದ್ದರು. ಟೂರ್ನಿಯುದಕ್ಕೂ ಉತ್ತಮ ಪ್ರದರ್ಶನ ನೀಡಿದ ಅವರು 13 ಪಂದ್ಯಗಳಲ್ಲಿ 155 ಸ್ಟ್ರೈಕ್ ರೇಟ್‌ನೊಂದಿಗೆ 446 ರನ್ ಗಳಿಸಿದ್ದರು. ಸದ್ಯ ಅವರು 3284 ರನ್‌ಗಳೊಂದಿಗೆ ಡೆಲ್ಲಿ ಫ್ರಾಂಚೈಸಿಯ ಅಗ್ರ ರನ್ ಸ್ಕೋರರ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications