IPL 2025: ಉಳಿದ ಪಂದ್ಯಗಳಿಗಾಗಿ RCB ತಂಡವನ್ನು ಸೇರಿದ ಇಬ್ಬರು ವಿದೇಶಿ ಆಟಗಾರರು
ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ ಒಂದು ವಾರಗಳ ಕಾಲ ಸ್ಥಗಿತಗೊಂಡಿದ್ದ ಐಪಿಎಲ್ ಮತ್ತೆ ಆರಂಭವಾಗಲಿದೆ. ಈ ಲೀಗ್ ಮೇ 17 ರಂದು ಪುನರಾರಂಭವಾಗಲಿದೆ. ಇನ್ನು ಈ ಲೀಗ್‌ನಲ್ಲಿ ಒಟ್ಟು 17 ಪಂದ್ಯಗಳು ಬಾಕಿ ಇವೆ. ಇದರಲ್ಲಿ 13 ಲೀಗ್ ಹಂತದ ಪಂದ್ಯಗಳು ಹಾಗೂ 4 ಪ್ಲೇ ಆಫ್ ಪಂದ್ಯಗಳು ಸೇರಿವೆ. ಐಪಿಎಲ್ ಒಂದುವಾರ ಸ್ಥಗಿತಗೊಂಡಿದ್ದರಿಂದ ದೇಶೀಯ ಹಾಗೂ ವಿದೇಶಿ ಆಟಗಾರರು ತಮ್ಮ ತಮ್ಮ ತವರಿನತ್ತ ಮುಖ ಮಾಡಿದ್ದರು. ಈಗ ಈ ಪ್ಲೇಯರ್ಸ್ ಮತ್ತೆ ಭಾರತದತ್ತ ಮುಖ ಮಾಡಿದ್ದಾರೆ.
ಇನ್ನು ಈ ವೇಳೆ ಹಲವು ದೇಶದ ಆಟಗಾರರು ಬರುವ ಬಗ್ಗೆ ಅನುಮಾನಗಳು ಇವೆ. ಅಂತಾರಾಷ್ಟ್ರೀಯ ಪಂದ್ಯಗಳು ಆರಂಭವಾಗುವುದರಿಂದ ವಿದೇಶಿ ಆಟಗಾರರು ಮತ್ತೆ ತಮ್ಮ ತಮ್ಮ ತಂಡವನ್ನು ಸೇರಿದ್ದಾರೆ. ಇದೇ ವೇಳೆ ಆರ್‍ಸಿಬಿ ತಂಡಕ್ಕೆ ದೊಡ್ಡ ಸುದ್ದಿ ಸಿಕ್ಕಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಫುಲ್ ಖುಷ್ ಆಗಿದ್ದಾರೆ.

ಪ್ರಸಕ್ತ ಐಪಿಎಲ್ ಲೀಗ್‌ನಲ್ಲಿ ಬೆಂಗಳೂರು ತಂಡದ ಪ್ರದರ್ಶನ ಉತ್ತಮವಾಗಿದೆ. ಆಡಿದ 11 ಪಂದ್ಯಗಳಲ್ಲಿ ಬೆಂಗಳೂರು 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಪ್ಲೇ ಆಫ್‌ಗೆ ತುಂಬ ಹತ್ತಿರ ನಿಂತಿದೆ. ಇನ್ನು ಆರ್‍ಸಿಬಿ ಪ್ಲೇ ಆಫ್ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಉಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಮುಂದಿನ ಹಂತಕ್ಕೆ ಸುಲಭವಾಗಿ ಪ್ರವೇಶ ಪಡೆಯಬಹುದಾಗಿದೆ. ಆರ್‍ಸಿಬಿ ತಂಡದ ಸ್ಫೋಟಕ ಆಟಗಾರರು ಇಬ್ಬರ ತಂಡಕ್ಕೆ ವಾಪಸ್ ಆಗಿದ್ದಾರೆ.
ತಂಡ ಸೇರಿದ ಸ್ಟಾರ್ಸ್
ವೆಸ್ಟ್ ಇಂಡೀಸ್ ತಂಡದ ರೊಮಾರಿಯೊ ಶೆಫರ್ಡ್ ಮತ್ತು ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಆರ್‍ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ರೊಮಾರಿಯೊ ಶೆಫರ್ಡ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಇವರ ಆಗಮನ ತಂಡಕ್ಕೆ ದೊಡ್ಡ ಬಲವನ್ನು ನೀಡಿದೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುವ ಸುನಿಲ್ ನರೈನ್ ಮತ್ತು ಅವರ ಮಾರ್ಗದರ್ಶಕ ಡ್ವೇನ್ ಬ್ರಾವೋ ಕೂಡ ತಂಡಕ್ಕೆ ಮರಳಿದ್ದಾರೆ.

ಐಪಿಎಲ್ ಪ್ಲೇ ಆಫ್ ಪಂದ್ಯಗಳು ಮೇ 29 ರಂದು ಆರಂಭವಾಗಲಿವೆ. ಇದೇ ಸಮಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಈ ವೇಳೆ ವೆಸ್ಟ್ ಇಂಡೀಸ್ ತನ್ನ ಆಟಗಾರರು ಐಪಿಎಲ್ ಅನ್ನು ಮಧ್ಯದಲ್ಲಿ ಬಿಟ್ಟು ಹಿಂತಿರುಗುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ.
ಆರ್‍ಸಿಬಿ ಮುಂದಿನ ಪಂದ್ಯಗಳು
ಆರ್‌ಸಿಬಿ ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೆಕೆಆರ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಎದುರಿಸಲಿದೆ. ಮೇ 17 ರಂದು ಕೆಕೆಆರ್ ವಿರುದ್ಧ, ಮೇ 23 ರಂದು ಎಸ್‌ಆರ್‌ಎಚ್ ವಿರುದ್ಧ, ಮೇ 27 ರಂದು ಎಲ್‌ಎಸ್‌ಜಿ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಆರ್‌ಸಿಬಿ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications