RR Retention: ಸಂಜು ಸ್ಯಾಮ್ಸನ್ ಮೊದಲ ಆಯ್ಕೆ ಆಟಗಾರ; ಸ್ಟಾರ್ ಫ್ಲೇಯರ್ಸ್‌ಗೆ ಗೇಟ್ ಪಾಸ್!
ಐಪಿಎಲ್ 2025ರ ಟೂರ್ನಿಗಾಗಿ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ ಕೊನೆಯವಾರ ಅಥವಾ ಡಿಸೆಂಬರ್ ತಿಂಗಳ ಆರಂಭದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಐಪಿಎಲ್ ಎಲ್ಲಾ 10 ಫ್ರಾಂಚೈಸಿ ತಂಡಗಳು ತಮಗೆ ಬೇಕಾದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿವೆ. ರಾಜಸ್ಥಾನ್ ರಾಯಲ್ಸ್ ಕೂಡ ಭಾರೀ ಯೋಚಿಸಿ 5 ಆಟಗಾರರನ್ನು ಉಳಿಸಿಕೊಂಡಿದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಭರ್ಜರಿ ಪ್ರದರ್ಶನ ನೀಡಿತ್ತು. ಇದಕ್ಕೆ ಕಾರಣವಾಗಿದ್ದ ಸ್ಟಾರ್ ಆಟಗಾರರನ್ನು ಆರ್‌ಆರ್ ಫ್ರಾಂಚೈಸಿ ಕೈ ಬಿಟ್ಟಿದೆ. ಸ್ಟಾರ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಹಾಗೂ ಸ್ಪೋಟಕ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದು ಅಚ್ಚರಿ ಮೂಡಿಸಿದೆ.

ಆರ್‌ಆರ್ ಫ್ರಾಂಚೈಸಿ ಮೊದಲ ಆಯ್ಕೆ ಆಟಗಾರನಾಗಿ ನಾಯಕ ಸಂಜು ಸ್ಯಾಮ್ಸನ್ ಅವರನ್ನು 18 ಕೋಟಿ ರೂ.ಗೆ ಉಳಿಸಿಕೊಂಡಿದೆ. ಜೊತೆಗೆ ಯುವ ಸ್ಪೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನೂ ಆರ್‌ಆರ್ 18 ಕೋಟಿ ರೂ.ಗೆ ನೀಡಿ ಉಳಿಸಿಕೊಂಡಿದೆ. ಇದಲ್ಲದೆ, ಯುವ ಬ್ಯಾಟರ್ ರಿಯಾನ್ ಪರಾಗೆ 14 ಕೋಟಿ ರೂ. ಕೊಟ್ಟರೆ, ವಿಕೆಟ್‌ಕೀಪರ್-ಬ್ಯಾಟರ್ ಧ್ರುವ್ ಜುರೆಲ್‌ಗೂ 14 ಕೋಟಿ ರೂ. ನೀಡಿ ಆರ್‌ಆರ್ ತಂಡದಲ್ಲಿ ಉಳಿಸಿಕೊಂಡಿದೆ.
ವಿದೇಶಿ ಆಟಗಾರರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಸ್ಪೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಅವರನ್ನು 11 ಕೋಟಿ ರೂ.ಗೆ ಉಳಿಸಿಕೊಂಡಿದ್ದು, ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಸಂದೀಪ್ ಶರ್ಮಾ ಅವರನ್ನು 4 ಕೋಟಿ ರೂ.ಗೆ ಆರ್‌ಆರ್ ಉಳಿಸಿಕೊಂಡಿದೆ.
ಆರ್‌ಆರ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ
ಜೋಸ್ ಬಟ್ಲರ್, ಡೊನೊವನ್ ಫೆರೇರಾ, ಕುನಾಲ್ ರಾಥೋರ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ರೋವ್ಮನ್ ಪೊವೆಲ್, ಶುಭಂ ದುಬೆ, ಟಾಮ್ ಕೊಹ್ಲರ್-ಕಾಡ್ಮೋರ್, ಅಬಿದ್ ಮುಷ್ತಾಕ್, ನಾಂದ್ರೆ ಬರ್ಗರ್, ತನುಷ್ ಕೋಟ್ರಾಜ್, ಪ್ರಸಿದ್ಧ್ ಕೃಷ್ಣ, ಆಡಮ್ ಝಂಪಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications