RR vs KKR IPL 2025: ರಾಜಸ್ಥಾನ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿ ಹಾಕಿದ ಕೆಕೆಆರ್
ಭರವಸೆಯ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದ ಕಾರಣ ರಾಜಸ್ಥಾನ ರಾಯಲ್ಸ್ ಬುಧವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ. ಕೆಕೆಆರ್ ತಂಡದ ಸ್ಪಿನ್ ಬೌಲರ್‌ಗಳಾದ ಮೋಯಿನ್ ಅಲಿ ಹಾಗೂ ವರುಣ್ ಚಕ್ರವರ್ತಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಈ ಇಬ್ಬರೂ ಬೌಲರ್‌ಗಳ ಸ್ಪಿನ್ ಪಿರ್ಕಿಯನ್ನು ಅರಿಯುವಲ್ಲಿ ರಾಜಸ್ಥಾನ ವಿಫಲವಾಯಿತು.
18ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಟಾಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬೌಲಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತವರಿನ ಅಂಗಳದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ತಂಡಕ್ಕೆ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿತು. ಸಂಜು 13 ರನ್ ಬಾರಿಸಿದ್ದಾಗ ವೈಭವ್ ಆರೋರ್ ಎಸೆತದಲ್ಲಿ ಔಟ್ ಆದರು. ಆಗ ತಂಡದ ಮೊತ್ತ 33 ರನ್‌ಗಳಾಗಿತ್ತು.

ಬಾರದ ಜೊತೆಯಾಟಗಳು
ಎರಡನೇ ವಿಕೆಟ್‌ಗೆ ರಿಯಾನ್ ಪರಾಗ್ ಹಾಗೂ ಆರಂಭಿಕ ಯಶಸ್ವಿ ಜೈಸ್ವಾಲ್ ಜೋಡಿ ಸ್ಥಿರ ಪ್ರದರ್ಶನ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಈ ಜೋಡಿ 24 ಎಸೆತಗಳಲ್ಲಿ 34 ರನ್ ಸಿಡಿಸಿತು. ನಾಯಕ ರಿಯಾನ್ ಪರಾಗ್ 25 ರನ್‌ಗಳಿಗೆ ಆಟ ಮುಗಿಸಿದರು. ನಂತರ 15 ರನ್ ಆಗುವಷ್ಟರಲ್ಲಿ ರಾಜಸ್ಥಾನ ಪಟಪಟನೇ 4 ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿ ಔಟ್ ಆದರು.
ನಿತೀಶ್ ರಾಣಾ (8), ವನಿಂದು ಹಸರಂಗಾ (4), ಶುಭಂ ದುಬೆ (9), ಶಿಮ್ರೋನ್ ಹೆಟ್ಮೆಯರ್ (7), ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೇಲ್ ನೆಲಕಚ್ಚಿನಿಂತು ಬ್ಯಾಟ್ ಮಾಡುವ ಸೂಚನೆ ನೀಡಿದರು. ಇವರು 28 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 33 ರನ್ ಸಿಡಿಸಿ ಹರ್ಷಿತ್ ರಾಣಾ ಎಸೆತದಲ್ಲಿ ಔಟ್ ಆದರು.
ಕೊನೆಯಲ್ಲಿ ಬ್ಯಾಟ್ ಮಾಡಿದ ಜೋಫ್ರಾ ಆರ್ಚರ್ 7 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 16 ರನ್ ಸಿಡಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಸ್ಪಿನ್ ಬೌಲರ್‌ಗಳ ಕಮಾಲ್
ಕೆಕೆಆರ್ ಪರ ಬುಧವಾರದ ಪಂದ್ಯದಲ್ಲಿ ಸುನಿಲ್ ನರೈನ್ ಅವರ ಬದಲಿಗೆ ತಂಡವನ್ನು ಸೇರಿದ್ದ ಮೋಯಿನ್ ಅಲಿ ಸೊಗಸಾದ ದಾಳಿಯನ್ನು ಸಂಘಟಿಸಿದರು. ಇವರು ಪಂದ್ಯದ ಯಾವುದೇ ಹಂತದಲ್ಲೂ ನರೈನ್ ಅನುಪಸ್ಥಿತಿ ಕಾಡಲು ಬಿಡಲಿಲ್ಲ. ಇವರು 23 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಮಿಸ್ಟ್ರಿ ಸ್ಪಿನ್ ಬೌಲರ್ ಖ್ಯಾತಿಯ ವರುಣ್ ಚಕ್ರವರ್ತಿ 17 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಹರ್ಷಿತ್ ರಾಣಾ, ವೈಭವ್ ಆರೋರ್ ತಲಾ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications