ಇಂಡಿಯನ್ ಪ್ರೀಮಿಯರ್ ಲೀಗ್ ಲೀಗ್ ಹಂತದ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಲೀಗ್‌ನ ಅಗ್ರ ಸ್ಥಾನವನ್ನು ಪಡೆಯವುದು ಯಾರು ಎಂಬ ಪ್ರಶ್ನೆಗೆ ಇನ್ನು ಖಚಿತ ಉತ್ತರ ಸಿಕ್ಕಿಲ್ಲ. ಪ್ಲೇ ಆಫ್‌ಗೆ ಪ್ರವೇಶಿಸಿರುವ ನಾಲ್ಕು ತಂಡಗಳು ಸಹ ಅಗ್ರ ಸ್ಥಾನದ ಮೇಲೆ ಕಣ್ಣು ನೆಟ್ಟಿವೆ. ಈ ವೇಳೆ ಹಲವು ಆಟಗಾರರು ತಮ್ಮ ಸ್ಥಿರ ಪ್ರದರ್ಶನದಿಂದ ತಂಡದ ಜಯದಲ್ಲಿ ಮಿಂಚುತ್ತಿದ್ದಾರೆ. ಈ ವೇಳೆ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಪಡೆದು ಬೀಗಿದ್ದಾರೆ. ಹಾಗಿದ್ದರೆ ಯಾರ ಬಳಿ ಯಾವ ಕ್ಯಾಪ್ ಇದೆ ಇಲ್ಲಿದೆ ವರದಿ.
ಸೋಮವಾರ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ಸುರ್ಯಕುಮಾರ್ ಯಾದವ್ ಬಿಗ್ ಇನಿಂಗ್ಸ್ ಕಟ್ಟಿ ಆರೆಂಜ್ ಕ್ಯಾಪ್ ಪಡೆಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರು ಈ ಸಾಧನೆ ಮಾಡಲು 97 ರನ್ ಬಾರಿಸುವುದು ಅವಶ್ಯಕ. ಸದ್ಯ ಈ ರೇಸ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ ಅಗ್ರ ಸ್ಥಾನದಲ್ಲಿದ್ದಾರೆ.

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿರುವ ಸಾಯಿ ಸುದರ್ಶನ್, ಇಂಗ್ಲೆಂಡ್ ವಿರುದ್ಧದದ ಟೆಸ್ಟ್ ತಂಡಕ್ಕೂ ಆಯ್ಕೆ ಆಗಿದ್ದಾರೆ. ಇವರು ಪ್ರಸಕ್ತ ಲೀಗ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 52ರ ಸರಾಸರಿಯಲ್ಲಿ 679 ರನ್ ಸಿಡಿಸಿದ್ದಾರೆ. ಈ ವೇಳೆ ಸಾಯಿ 1 ಶತಕ, 5 ಅರ್ಧಶತಕ ಸಿಡಿಸಿದ್ದಾರೆ. ಇದರಲ್ಲಿ 78 ಬೌಂಡರಿ, 20 ಸಿಕ್ಸರ್ ಸೇರಿವೆ.
ಸಾಯಿ ಸುದರ್ಶನ್, ಗುಜರಾತ್ ಟೈಟಾನ್ಸ್, 14 ಪಂದ್ಯ, 679 ರನ್
ಶುಭಮನ್ ಗಿಲ್, ಗುಜರಾತ್ ಟೈಟಾನ್ಸ್, 14 ಪಂದ್ಯ, 649 ರನ್
ಸೂರ್ಯಕುಮಾರ್ ಯಾದವ್, 13 ಪಂದ್ಯ, ಮುಂಬೈ ಇಂಡಿಯನ್ಸ್, 583 ರನ್
ಮಿಚೆಲ್ ಮಾರ್ಷ್, ಎಲ್‌ಎಸ್‌ಜಿ, 12 ಪಂದ್ಯ, 560 ರನ್
ಯಶಸ್ವಿ ಜೈಸ್ವಾಲ್, 14 ಪಂದ್ಯ, 559 ರನ್
ವಿರಾಟ್ ಕೊಹ್ಲಿ, ಆರ್‌ಸಿಬಿ, 12 ಪಂದ್ಯ, 548 ರನ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂರ್ ಅಹ್ಮದ್ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಆಡಿರುವ 14 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ್ದಾರೆ. ಇವರಿಗಿಂತ ಒಂದು ವಿಕೆಟ್ ಕಡಿಮೆ ಪಡೆದಿರುವ ಗುಜರಾತ್ ಟೈಟಾನ್ಸ್ ತಂಡದ ಕನ್ನಡಿಗ ಪ್ರಸಿದ್ಧ್ ಕೃಷ್ಣಾ 23 ವಿಕೆಟ್ ಪಡೆದಿದ್ದಾರೆ.
ನೂರ್ ಅಹ್ಮದ್, ಸಿಎಸ್‌ಕೆ, 14 ಪಂದ್ಯ, 24 ವಿಕೆಟ್
ಪ್ರಸಿದ್ಧ್ ಕೃಷ್ಣ, 14 ಪಂದ್ಯ, 23 ವಿಕೆಟ್
ಟ್ರೆಂಟ್ ಬೌಲ್ಟ್, 13 ಪಂದ್ಯ, 19 ವಿಕೆಟ್
ಜೋಶ್ ಹ್ಯಾಜಲ್‌ವುಡ್, 10 ಪಂದ್ಯ, 18 ವಿಕೆಟ್
ಸಾಯಿ ಕಿಶೋರ್, 14 ಪಂದ್ಯ, 17 ವಿಕೆಟ್