Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಜೋಸ್ ಬಟ್ಲರ್ ಕೈಬಿಟ್ಟ ಬಗ್ಗೆ ಮೌನ ಮುರಿದ ಸಂಜು ಸ್ಯಾಮ್ಸನ್

ಇಂಡಿಯನ್ಸ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆರಂಭಕ್ಕೆ ಎರಡು ವಾರಗಳಿಗಿಂತ ಕಡಿಮೆ ಸಮಯ ಉಳಿದಿದೆ. ಮಾರ್ಚ್ 22 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಐಪಿಎಲ್ ಆರಂಭವಾಗಲಿದೆ. ಇದಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಆಪ್ತ ಸ್ನೇಹಿತ ವಿಕೆಟ್ ಕೀಪರ್-ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಕೈಬಿಡುವುದು ತಮಗೆ ಅತ್ಯಂತ ಕಠಿಣ ವಿಷಯವಾಗಿತ್ತು ಎಂದು ಹೇಳಿದ್ದಾರೆ.

ಐಪಿಎಲ್ 2025ರ ಮೆಗಾ-ಹರಾಜಿಗೆ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಜೋಸ್ ಬಟ್ಲರ್ ಅವರನ್ನು ಬಿಡುಗಡೆ ಮಾಡಿತು. ನಂತರ ಫ್ರಾಂಚೈಸಿ ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಸಂದೀಪ್ ಶರ್ಮಾ ಮತ್ತು ಶಿಮ್ರಾನ್ ಹೆಟ್ಮೈರ್ ಅವರನ್ನು ಉಳಿಸಿಕೊಂಡಿತು. ಬಟ್ಲರ್ ಅವರಿಗೆ ಮೆಗಾ ಹರಾಜಿನಲ್ಲಿ ಗಾಳ ಹಾಕಿದ ಗುಜರಾತ್ ಟೈಟಾನ್ಸ್ (ಜಿಟಿ) 15.75 ಕೋಟಿ ರೂ.ಗೆ ಖರೀದಿಸಿತು.

IPL 2025 Sanju Samson breaks his silence on Jos Buttler departure from Rajasthan Royals

ಸಂದರ್ಶನವೊಂದರಲ್ಲಿ ರಾಜಸ್ಥಾನ ರಾಯಲ್ಸ್‌ನಿಂದ ಜೋಸ್ ಬಟ್ಲರ್ ನಿರ್ಗಮಿಸಿದ ಬಗ್ಗೆ ಸಂಜು ಸ್ಯಾಮ್ಸನ್ ಅವರನ್ನು ಕೇಳಲಾಯಿತು. ಈ ವೇಳೆ ಮಾತಮನಾಡಿದ ಅವರು, ಬಟ್ಲರ್ ನನ್ನ ಆಪ್ತ ಸ್ನೇಹಿತ ಮತ್ತು ಹಿರಿಯ ಸಹೋದರನಂತೆ ಎಂದು ಹೇಳಿದ್ದಾರೆ. ಐಪಿಎಲ್ ನಿಮಗೆ ತಂಡವನ್ನು ಮುನ್ನಡೆಸಲು ಮತ್ತು ಉನ್ನತ ಮಟ್ಟದಲ್ಲಿ ಆಡಲು ಅವಕಾಶವನ್ನು ನೀಡುತ್ತದೆ. ಆದರೆ ಇದು ನಿಮಗೆ ಉತ್ತಮ ಸ್ನೇಹವನ್ನು ಮಾಡಿಕೊಳ್ಳುವ ಅವಕಾಶವನ್ನೂ ನೀಡುತ್ತದೆ. ಜೋಸ್ ಬಟ್ಲರ್ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ನಾವು 7 ವರ್ಷಗಳ ಕಾಲ ಒಟ್ಟಿಗೆ ಆಡಿದೆವು, ಹಲವು ಉತ್ತಮ ಜೊತೆಯಾಟವಾಡಿದ್ದೇವೆ. ನಾವು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದು, ಯಾವಾಗಲೂ ಸಂಪರ್ಕದಲ್ಲಿದ್ದೆವು. ಅವರು ನನಗೆ ಅಣ್ಣನಂತೆ ಇದ್ದರು ಎಂದು ಹೇಳಿದ್ದಾರೆ.

ನಾನು ನಾಯಕನಾದಾಗ, ಅವರು ನನ್ನ ಉಪನಾಯಕರಾಗಿದ್ದರು. ತಂಡವನ್ನು ಮುನ್ನಡೆಸಲು ನನಗೆ ಸಹಾಯ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದರು. ಅವರನ್ನು ಹೋಗಲು ಬಿಡುವುದು ನನಗೆ ಅತ್ಯಂತ ಸವಾಲಿನ ವಿಷಯಗಳಲ್ಲಿ ಒಂದಾಗಿತು. ಇಂಗ್ಲೆಂಡ್ ಸರಣಿಯ ಸಮಯದಲ್ಲೂ, ನಾನು ಇನ್ನೂ ಆ ನೋವಿನಿಂದ ಹೊರಬರಲಿಲ್ಲ ಎಂದು ಊಟದ ಸಮಯದಲ್ಲಿ ಅವರಿಗೆ ಹೇಳಿದೆ ಎಂದು ಜೋಸ್ ಬಟ್ಲರ್ ಅವರನ್ನು ಹೊಗಳಿದ್ದಾರೆ.

ಐಪಿಎಲ್‌ನಲ್ಲಿ ನಾನು ಒಂದು ವಿಷಯವನ್ನು ಬದಲಾಯಿಸಲು ಸಾಧ್ಯವಾದರೆ, ಆಟಗಾರರನ್ನು ಬಿಡುಗಡೆ ಮಾಡುವ ನಿಯಮವನ್ನು ಬದಲಾಯಿಸುತ್ತೇನೆ. ಇದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಇಲ್ಲದಿದ್ದರೆ, ನೀವು ವರ್ಷಗಳಿಂದ ಸಂಪಾದಿಸಿರುವ ಸಂಬಂಧಗಳನ್ನು ಕಳೆದುಕೊಳ್ಳುತ್ತೀರಿ. ಇದು ನನಗೆ, ಇಡೀ ಫ್ರಾಂಚೈಸಿಗೆ, ಮಾಲೀಕರಿಗೆ, ತರಬೇತುದಾರರಿಗೆ ಮತ್ತು ತಂಡಕ್ಕೆ ಸಂಬಂಧಿಸಿದ ಎಲ್ಲರಿಗೂ ಕಷ್ಟಕರವಾಗಿದೆ. ಜೋಸ್ ನಮಗೆ ಕುಟುಂಬದವರಂತೆ ಇದ್ದರು ಎಂದು ಸಂಜು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜುರೆಲ್, ಪರಾಗ್ ಮತ್ತು ಹೆಟ್ಮೆಯರ್ ಅವರಂತಹ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವುದರ ಬಗ್ಗೆಯೂ ಸ್ಯಾಮ್ಸನ್ ಮಾತನಾಡಿದ್ದಾರೆ. ಈಗಾಗಲೇ ತಂಡದ ಭಾಗವಾಗಿರುವ ಆಟಗಾರರನ್ನು ಹೊಂದಿರುವುದು ಉತ್ತಮ ಬಾಂಧವ್ಯವನ್ನು ಸೃಷ್ಟಿಸುತ್ತದೆ. ಇದು ನನ್ನ ಕೆಲಸವನ್ನು ಸುಲಭಗೊಳಿಸುತ್ತದೆ. ಏಕೆಂದರೆ ನಾವು ಮೈದಾನದ ಒಳಗೆ ಮತ್ತು ಹೊರಗೆ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿದ್ದೇವೆ. ತಂಡದೊಳಗೆ ಉತ್ತಮ ಸಮನ್ವಯಕ್ಕೆ ಸಹಾಯ ಮಾಡುತ್ತದೆ ಎಂದು ಸಂಜು ಹೇಳಿದ್ದಾರೆ.

Story first published: Wednesday, March 12, 2025, 16:58 [IST]
Other articles published on Mar 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+