ಮುಂದಿನವಾರ IPL 2025 ವೇಳಾಪಟ್ಟಿ ಬಿಡುಗಡೆ?
ವಿಶ್ವದ ಶ್ರೀಮಂತ ಲೀಗ್ ಎಂದೇ ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾ ಪಟ್ಟಿ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಹಲವು ಪ್ರಶ್ನೆಗಳು ಇದ್ದವು. ಈಗ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಈ ಟೂರ್ನಿಯ ಆರಂಭಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಮೆಗಾ ಆವೃತ್ತಿ ಮಾರ್ಚ್ 21 ರಂದು ಆರಂಭವಾಗಲಿದೆ. ಆದರೆ ಬಿಸಿಸಿಐನಿಂದ ಇನ್ನು ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈ ಮೆಗಾ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈ ಟೂರ್ನಿಯ ಮೆಗಾ ಇವೆಂಟ್ ಅಭಿಮಾನಿಗಳ ಚಿತ್ತ ಕದ್ದಿದೆ.
18ನೇ ಆವೃತ್ತಿಯ ಐಪಿಎಲ್ ವೇಳಾ ಪಟ್ಟಿ ಇನ್ನು ಒಂದು ವಾರದಲ್ಲಿ ಪ್ರಕಟವಾಗಲಿದೆ ಎಂದು ಸ್ಪೋರ್ಟ್ಸ್ ತಕ್ ವರದಿ ಮಾಡಿತ್ತು. ಈಗ ಬಿಸಿಸಿಐ 18 ನೇ ಋತುವಿನ ಪಂದ್ಯಾವಳಿಯ ವೇಳಾಪಟ್ಟಿಯನ್ನು ಯಾವಾಗ ಪ್ರಕಟಿಸುತ್ತದೆ ಎಂಬುದನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಲೀಗ್‌ನ ಸಂಪೂರ್ಣ ವೇಳಾ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಐಪಿಎಲ್ ಫೈನಲ್ ಎಲ್ಲಿ?
ಇನ್ನು ಈ ಬಾರಿಯ ಐಪಿಎಲ್ 18ರ ಮೆಗಾ ಲೀಗ್ ಫೈನಲ್ ಈಡನ್ ಗಾರ್ಡನ್ಸ್‌ನಲ್ಲಿ ಫೈನಲ್ ನಡೆಯಬಹುದು. ಉಳಿದಂತೆ ಪ್ಲೇ ಆಫ್ ಪಂದ್ಯಗಳು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ. ನಂತರ ಎರಡನೇ ಪ್ಲೇಆಫ್ ಹಾಗೂ ಪ್ರಶಸ್ತಿ ಸುತ್ತಿನ ಕದಾಟ ಭಾರತದ ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ.
18ನೇ ಆವೃತ್ತಿಯ ಐಪಿಎಲ್‌ನ ಮೆಗಾ ಹರಾಜು ಇತ್ತೀಚಿಗೆ ಸೌದಿಯಲ್ಲಿ ನಡೆದಿತ್ತು. ಈ ವೇಳೆ ದೇಶೀಯ ಹಾಗೂ ವಿದೇಶಿ ಆಟಗಾರರು ಸಹ ಈ ಹರಾಜಿನಲ್ಲಿ ಭಾಗವಹಿಸಿದ್ದರು. ಈ ಹರಾಜಿನಲ್ಲಿ ಭಾಗವಹಿಸಿದ್ದು, ಆಟಗಾರರಲ್ಲಿ ಇಟ್ಟು 182 ಆಟಗಾರರನ್ನು 10 ತಂಡಗಳ ಮಾಲೀಕರು ಖರೀದಿ ಮಾಡಿದ್ದಾರೆ. ಈ ಆಟಗಾರರನ್ನು ಕೊಂಡು ಕೊಳ್ಳಲು ಎರಡು ದಿನಗಳ ಕಾಲ ನಡೆಯಿತು. ಈ ವೇಳೆ ಒಟ್ಟು 639.15 ಕೋಟಿ ರೂ. ಖರ್ಚಾಗಿದೆ.

ಡಬ್ಲ್ಯುಪಿಎಲ್ ಮೂರನೇ ಆವೃತ್ತಿ ಆರಂಭ
ಇನ್ನೇನು ಕೆಲವೇ ದಿನಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಭಾಗವಹಿಸುತ್ತಿವೆ. ಆರ್‌ಸಿಬಿ ಹಾಲಿ ಚಾಂಪಿಯನ್ ಎಂಬ ಹಿರಿಮೆಯೊಂದಿಗೆ ಕಣಕ್ಕೆ ಇಳಿಯಲಿದೆ. ಇನ್ನು ಆರ್‌ಸಿಬಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಕನಸಿನಲ್ಲಿ ಇದೆ. ಸ್ಮೃತಿ ಮಂಧನಾ ಮುಂದಾಳತ್ವದ ಆರ್‌ಸಿಬಿ ಬಲಿಷ್ಠವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications