For Quick Alerts
ALLOW NOTIFICATIONS  
For Daily Alerts
 

IPL 2025 Schedule: ಕ್ರಿಕೆಟ್ ಫ್ಯಾನ್ಸ್‌ಗೆ ಖುಷಿ ಸುದ್ದಿ; ಈ ಬಾರಿ ಎರಡು ಉದ್ಘಾಟನಾ ಪಂದ್ಯಗಳು

ಕ್ರಿಕೆಟ್ ಅಭಿಮಾನಿಗಳು ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಆವೃತ್ತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಫೆಬ್ರವರಿ 19 ರಿಂದ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾದರೂ, ಐಪಿಎಲ್‌ನ ಕ್ರೇಜ್ ಕೂಡ ಇದೆ. ಫೆಬ್ರವರಿ 13 ರಿಂದ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ 2025ರ ಸದ್ದು ಜೋರಾಗಿದೆ. ಏಕೆಂದರೆ ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಹೊಸ ನಾಯಕನಾಗಿ ರಜತ್ ಪಾಟಿದಾರ್ ಅವರನ್ನು ನೇಮಿಸಿದೆ. ಮತ್ತೊಂದೆಡೆ, ಐಪಿಎಲ್ 2025 ರ ವೇಳಾಪಟ್ಟಿಯ ಬಗ್ಗೆಯೂ ದೊಡ್ಡ ಅಪ್ಡೇಟ್ ಸಿಕ್ಕಿದೆ.

ಐಪಿಎಲ್ 2025ರ ಸಂಪೂರ್ಣ ವೇಳಾಪಟ್ಟಿಯನ್ನು ಯಾವುದೇ ಸಮಯದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿ) ಬಿಡುಗಡೆ ಮಾಡಬಹುದು. ಮಾರ್ಚ್ ತಿಂಗಳಲ್ಲಿ ಐಪಿಎಲ್ 2025ರ ಆವೃತ್ತಿ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯಗಳು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

IPL 2025 Schedule RCB vs KKR and SRH vs RR Opening Match

ಮಾರ್ಚ್ 22 ರಿಂದ ಐಪಿಎಲ್ 2025ರ ಆವೃತ್ತಿ ಆರಂಭವಾಗಲಿದ್ದು, ಅಭಿಮಾನಿಗಳು ವಾರಾಂತ್ಯದಲ್ಲಿ ಎರಡು ರೋಚಕ ಉದ್ಘಾಟನಾ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ವರದಿಗಳ ಪ್ರಕಾರ, ಮೊದಲ ಉದ್ಘಾಟನಾ ಪಂದ್ಯವೂ ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಈ ಮೈದಾನವೂ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಕೆಕೆಆರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಹಣಾಹಣಿಗೆ ಸಾಕ್ಷಿಯಾಗಲಿದೆ. ಆರ್‌ಸಿಬಿ ತಂಡದ ಹೊಸ ನಾಯಕ ರಜತ್ ಪಾಟಿದಾರ್ ಅವರನ್ನು ನೇಮಕ ಮಾಡಲಾಗಿದ್ದು, ಕೆಕೆಆರ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ಕೆಕೆಆರ್ ನಾಯಕ ಯಾರು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ.

ಮಾರ್ಚ್ 22 ರಂದು ಎರಡು ಪಂದ್ಯಗಳಲ್ಲಿ ನಡೆಯಲಿವೆ. ಎರಡನೇ ಪಂದ್ಯದಲ್ಲಿ ಕಳೆದ ವರ್ಷದ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವೂ ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಮಾರ್ಚ್ 22 ರ ಮಧ್ಯಾಹ್ನ ನಡೆಯಲಿದೆ. ಬಿಸಿಸಿಐ ಪ್ರಮುಖ ಪಂದ್ಯಗಳ ದಿನಾಂಕಗಳನ್ನು ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡಿದೆ. ಐಪಿಎಲ್ 2025 ರ ಫೈನಲ್ ಪಂದ್ಯವು ಮೇ 25 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ ವರದಿ ಆಗಿದೆ.

ವರದಿಗಳ ಪ್ರಕಾರ, ಐಪಿಎಲ್ ಪಂದ್ಯಗಳ ದಿನಾಂಕಗಳಲ್ಲಿ ಬದಲಾವಣೆಯಾಗಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಮಾರ್ಚ್ 23 ರಂದು ಐಪಿಎಲ್ ಆರಂಭವಾಗಲಿದೆ ಎಂದು ಸುಳಿವು ನೀಡಿದ್ದರು. ಆದರೆ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ಟೂರ್ನಿಯ ವೇಳಾಪಟ್ಟಿಯೂ ಒಂದು ಅಥವಾ ಎರಡು ದಿನಗಳಲ್ಲಿ ಬರುವ ನಿರೀಕ್ಷೆಯಿದೆ.

Story first published: Friday, February 14, 2025, 8:05 [IST]
Other articles published on Feb 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+