Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಟೀಮ್ ಇಂಡಿಯಾ ಆಲ್‌ರೌಂಡರ್ ಸೇರ್ಪಡೆ

ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವು ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಐಪಿಎಲ್ 2025 ರ ಟೂರ್ನಿಗಾಗಿ ಎಲ್‌ಎಸ್‌ಜಿ ಬಲಿಷ್ಠ ತಂಡವನ್ನು ಕಟ್ಟಿದೆ. ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರ ಸಂಯೋಜನೆ ಅದ್ಭುತವಾಗಿದೆ. ವರದಿಗಳ ಪ್ರಕಾರ, ಎಲ್‌ಎಸ್‌ಜಿ ತಂಡಕ್ಕೆ ಟೀಮ್ ಇಂಡಿಯಾದ ಮತ್ತೊಬ್ಬ ಅಪಾಯಕಾರಿ ಆಲ್‌ರೌಂಡರ್ ಸೇರಿಕೊಳ್ಳಲಿದ್ದಾರೆ.

ಐಪಿಎಲ್ 2025ರ ಟೂರ್ನಿ ಆರಂಭಕ್ಕೂ ಮುನ್ನ ಎಲ್‌ಎಸ್‌ಜಿ ತಂಡದ ವೇಗದ ಬೌಲರ್ ಮೊಹ್ಸಿನ್ ಖಾನ್ ಗಾಯಗೊಂಡು ಹೊರಗುಳಿದಿದ್ದಾರೆ. ಇವರ ಬದಲಿಗೆ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಸ್ಥಾನ ಪಡೆಯಲಿದ್ದಾರೆ.

IPL 2025 Shardul Thakur joins lucknow super giants team

ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಎಲ್‌ಎಸ್‌ಜಿ ಸೇರಿಸಿಕೊಳ್ಳಲು ಸಜ್ಜಾಗಿದೆ. ದುಬೈನಲ್ಲಿ ನಡೆದ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಯಾವುದೇ ಫ್ರಾಂಚೈಸಿ ಬಿಡ್ ಮಾಡಿರಲಿಲ್ಲ. ಆದರೆ ಈಗ ರಿಷಭ್ ಪಂತ್ ನೇತೃತ್ವದ ಎಲ್‌ಎಸ್‌ಜಿ ತಂಡದೊಂದಿಗೆ ಸಹಿ ಹಾಕಲು ಶಾರ್ದೂಲ್ ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಶಾರ್ದೂಲ್ ಸೇರ್ಪಡೆ ಬಗ್ಗೆ ಎಲ್‌ಎಸ್‌ಜಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಶಾರ್ದೂಲ್‌ಗೆ ಈ ನಿರ್ಧಾರದ ಬಗ್ಗೆ ತಿಳಿಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯಕ್ಕಾಗಿ ಎಲ್‌ಎಸ್‌ಜಿ ತಂಡದೊಂದಿಗೆ ವಿಶಾಖಪಟ್ಟಣಕ್ಕೆ ಪ್ರಯಾಣಿಸಲಿದ್ದಾರೆ. ಐಪಿಎಲ್ 2025 ರ ತಯಾರಿಯ ಸಮಯದಲ್ಲಿ ಠಾಕೂರ್ ಎಲ್ಎಸ್‌ಜಿ ತಂಡದೊಂದಿಗೆ ಕಾಣಿಸಿಕೊಂಡಿದ್ದರು. ಐಪಿಎಲ್ 18 ನೇ ಸೀಸನ್‌ನಲ್ಲಿ ಗಾಯಗೊಂಡಿರುವ ಮೊಹ್ಸಿನ್ ಖಾನ್ ಬದಲಿಗೆ ಅವರನ್ನು ಸೇರಿಕೊಳ್ಳಲಾಗಿದೆ.

ಐಪಿಎಲ್ 2025 ಆರಂಭವಾಗುವ ಮೊದಲು, ಎಲ್‌ಎಸ್‌ಜಿ ತಂಡದ ಆಟಗಾರರ ಗಾಯಗಳಿಂದ ಬಳಲುತ್ತಿದ್ದಾರೆ. ವೇಗದ ಬೌಲರ್ ಮಾಯಾಂಕ್ ಯಾದವ್ ಸೇರಿದಂತೆ ತಂಡದ ಪ್ರಮುಖ ವೇಗದ ಬೌಲರ್‌ಗಳು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ಚೇತರಿಕೆಗೆ ಒಳಗಾಗುತ್ತಿದ್ದಾರೆ. ಗಾಯದಿಂದ ಬಳಲುತ್ತಿದ್ದ ಮೊಹ್ಸಿನ್ 3 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದಾದ ನಂತರ ಎಲ್‌ಎಸ್‌ಜಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದರು. ಆದರೆ ಕಾಲಿನ ಸ್ನಾಯು ಸೆಳೆತದಿಂದ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ.

ಶಾರ್ದೂಲ್ ಠಾಕೂರ್ ಐಪಿಎಲ್ ವೃತ್ತಿಜೀವನ

ಶಾರ್ದೂಲ್ ಠಾಕೂರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 94 ವಿಕೆಟ್‌ಗಳನ್ನು ಪಡೆದಿದ್ದು, 307 ರನ್‌ಗಳನ್ನು ಗಳಿಸಿದ್ದಾರೆ. ಈ ಸ್ಟಾರ್ ಆಲ್‌ರೌಂಡರ್ ಪ್ರಸ್ತುತ ತಮ್ಮ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 2024-25ರ ರಣಜಿ ಟ್ರೋಫಿಯಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರ ಪ್ರದರ್ಶನ ನೀಡಿದ್ದರು. ಅವರು ಎಲ್‌ಎಸ್‌ಜಿ ಜೊತೆ ಸೇರುವುದರಿಂದ ತಂಡ ಮತ್ತಷ್ಟು ಬಲಗೊಳ್ಳಲಿದೆ. ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಿಂದ ಬಿಡುಗಡೆಯಾದ ಶಾರ್ದೂಲ್ ಅವರನ್ನು ಯಾವುದೇ ಫ್ರಾಂಚೈಸಿ ಬಿಡ್ ಮಾಡಲು ಮುಂದಾಗಿರಲಿಲ್ಲ.

ಪಂದ್ಯ ಸ್ಥಳಾಂತರ

ಐಪಿಎಲ್‌ನ ಅಧಿಕೃತ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್ 6 ರಂದು ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ () ನಡುವೆ ನಡೆಯಬೇಕಿತ್ತು. ಭದ್ರತಾ ಕಾರಣಗಳಿಂದಾಗಿ ಈ ಪಂದ್ಯವನ್ನು ಕೋಲ್ಕತ್ತಾದಿಂದ ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ಈ ಪಂದ್ಯದ ಸ್ಥಳವನ್ನು ಮಾತ್ರ ಬದಲಾಯಿಸಲಾಗಿದೆ. ಉಭಯ ತಂಡಗಳ ನಡುವಿನ ಉಳಿದ ಪಂದ್ಯವು ಏಪ್ರಿಲ್ 6 ರಂದು ನಿಗದಿತ ಸಮಯದಲ್ಲಿ ನಡೆಯಲಿದೆ. ಏಪ್ರಿಲ್ 6 ರಂದು ರಾಮ ನವಮಿ ಇರುವುದರಿಂದ ಈ ಪಂದ್ಯವನ್ನು ಮರು ನಿಗದಿಪಡಿಸಲಾಗಿದೆ.

ರಾಮ ನವಮಿಯ ಕಾರ್ಯನಿರತ ವೇಳಾಪಟ್ಟಿಯಿಂದಾಗಿ ಕೆಕೆಆರ್ ಮತ್ತು ಎಲ್‌ಎಸ್‌ಜಿ ಪಂದ್ಯಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಕೋಲ್ಕತ್ತಾ ಪೊಲೀಸರು ಈಗಾಗಲೇ ಕೆಕೆಆರ್ ಅಧಿಕಾರಿಗಳಿಗೆ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಿಳಿಸಿದ್ದರು. ಏಪ್ರಿಲ್ 6 ರಂದು ರಾಮ ನವಮಿ ದಿನದಂದು ಈಡನ್ ಗಾರ್ಡನ್ಸ್‌ಗೆ ಭೇಟಿ ನೀಡುವ ನಿರೀಕ್ಷೆಯಿರುವ 65000 ಪ್ರೇಕ್ಷಕರಿಗೆ ಸಾಕಷ್ಟು ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಬುಧವಾರ ಪೊಲೀಸರು ಮತ್ತೊಮ್ಮೆ ಹೇಳಿದ್ದರು. ಇದಾದ ನಂತರ ಪಂದ್ಯದ ಸ್ಥಳವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಏಪ್ರಿಲ್ 6 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲು ಗುವಾಹಟಿಗೆ ಪ್ರಯಾಣ ಬೆಳೆಸಲಿದೆ. ಇದಕ್ಕೂ ಮುನ್ನ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍‌ಸಿಬಿ) ತಂಡವನ್ನು ಕೆಕೆಆರ್ ಎದುರಿಸಲಿದೆ. ಐಪಿಎಲ್ 2025ರ ನಾಳೆ ಅಂದರೆ ಮಾರ್ಚ್‌ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಶುರುವಾಗಲಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ: ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಾಯಾಂಕ್ ಯಾದವ್, ಮೊಹ್ಸಿನ್ ಖಾನ್, ಆಯುಷ್ ಬದೋನಿ, ರಿಷಭ್ ಪಂತ್, ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ಆವೇಶ್ ಖಾನ್, ಅಬ್ದುಲ್ ಸಮದ್, ಆರ್ಯನ್ ಜುಯಾಲ್, ಆಕಾಶ್ ದೀಪ್, ಶಹಬಾಜ್ ಅಹ್ಮದ್, ಎಂ. ಸಿದ್ಧಾರ್ಥ್, ಆಕಾಶ್ ಸಿಂಗ್, ದಿಗ್ವೇಶ್ ಸಿಂಗ್, ಹಿಮ್ಮತ್ ಸಿಂಗ್, ಆರ್ಯನ್ ಜುಯಾಲ್, ಶಮರ್ ಜೋಸೆಫ್, ಯುವರಾಜ್ ಚೌಧರಿ, ಪ್ರಿನ್ಸ್ ಯಾದವ್, ಮ್ಯಾಥ್ಯೂ ಬ್ರೀಟ್ಜ್ಕೆ, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ/ ಶಾರ್ದೂಲ್ ಠಾಕೂರ್.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಮನೀಶ್ ಪಾಂಡೆ, ಅಂಗ್ಕ್ರಿಶ್ ರಘುವಂಶಿ, ರಿಂಕು ಸಿಂಗ್, ಲವನಿತ್ ಸಿಸೋಡಿಯಾ, ಕ್ವಿಂಟನ್ ಡಿ ಕಾಕ್, ರಹಮಾನಲ್ಲಾ ಗುರ್ಬಾಜ್, ಸುನಿಲ್ ನಾರಾಯಣ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ರೋವ್ಮನ್ ಪೊವೆಲ್, ವೆಂಕಟೇಶ್ ಅಯ್ಯರ್, ಮೊಯೀನ್ ಅಲಿ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವೈಭವ್ ಅರೋರಾ, ಮಾಯಾಂಕ್ ಮಾರ್ಕಂಡೆ, ಚೇತನ್ ಸಕರಿಯಾ, ಅನ್ರಿಚ್ ನಾರ್ಟ್ಜೆ, ಸ್ಪೆನ್ಸರ್ ಜಾನ್ಸನ್.

Story first published: Friday, March 21, 2025, 18:01 [IST]
Other articles published on Mar 21, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+