ಇತ್ತೀಚಿಗೆ ಸೌದಿಯಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಟೀಮ್ ಇಂಡಿಯಾದ ಒಬ್ಬ ಪ್ಲೇಯರ್, ಕೊನೆಯ ಕ್ಷಣದಲ್ಲಿ ಒಂದು ತಂಡಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಒಂದು ಟೈಮ್‌ನಲ್ಲಿ ತಮ್ಮ ಬಿಗುವಿನ ದಾಳಿಯಿಂದ ಹೆಸರುವಾಸಿಯಾಗಿದ್ದ ಈ ಆಲ್‌ರೌಂಡರ್‌ನನ್ನು ಹರಾಜಿನಲ್ಲಿ ಮಾಲೀಕರು ಖರೀದಿಸುವಲ್ಲಿ ವಿಫಲರಾಗಿದ್ದರು. ಆದರೆ ಇವರು ಧೃತಿ ಗೆಡದೆ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ವೇಗಿ ಮೊಹ್ಸಿನ್ ಖಾನ್ ಗಾಯಕ್ಕೆ ತುತ್ತಾಗಿದ್ದಾರೆ. ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯನ್ನು ಆಡುವಾಗ ಇವರು ಗಾಯಕ್ಕೆ ತುತ್ತಾಗಿದ್ದರು. ಅಲ್ಲಿಂದ ಇವರು ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಇವರು ತಂಡದೊಂದಿಗೆ ಟ್ರ್ಯಾವಲ್ ಸಹ ಮಾಡುತ್ತಿಲ್ಲ ಎಂದು ಕ್ರಿಕ್‌ಇನ್ಫೋ ವರದಿಯನ್ನು ಮಾಡಿದೆ. ಇಷ್ಟೇ ಅಲ್ಲದೆ ಈಗಾಗಲೇ ಟೀಮ್ ಇಂಡಿಯಾದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ತಂಡದೊಂದಿಗೆ ಇದ್ದಾರೆ ಎಂಬ ಮಾಹಿತಿಗಳು ಬರುತ್ತಿವೆ.

ಶಾರ್ದೂಲ್ ಠಾಕೂರ್ ಲಕ್ನೋ ಸೂಪರ್ ಜೈಂಟ್ಸ್ ಜೊತೆ ತರಬೇತಿಯ ವೇಳೆ ಕಾಣಿಸಿಕೊಂಡಿದ್ದಾರೆ. ಫ್ರಾಂಚೈಸಿ ತನ್ನ ತರಬೇತಿ ಶಿಬಿರವನ್ನು ಲಕ್ನೋದಲ್ಲಿ ಪ್ರಾರಂಭಿಸಿತ್ತು. ಈ ವೇಳೆ ಶಾರ್ದೂಲ್ ಬೌಲಿಂಗ್ ಮಾಡುತ್ತಿರುವುದು ಕಂಡು ಬಂದಿತ್ತು. ಅಲ್ಲದೆ ಈ ಚಿತ್ರಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಇವರು ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಹರಾಜಾಗದ ಹಿನ್ನೆಲೆ ಕೌಂಟಿ ಕ್ರಿಕೆಟ್ ಎಸೆಕ್ಸ್ ಜೊತೆ ಒಪ್ಪಂದ ಸಹ ಮಾಡಿಕೊಂಡಿದ್ದರು. ಇದೇ ವೇಳೆ ತಮಗೆ ಐಪಿಎಲ್‌ನಲ್ಲಿ ಆಡುವ ಅವಕಾಶಗಳು ಸಿಕ್ಕರೆ ತಾನು ಹೋಗುವುದಾಗಿ ಈ ಮೊದಲೇ ತಿಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಅನುಭವಿ ಬೌಲರ್‌ಗಳಿಗೆ ಗಾಯ ಬಹುವಾಗಿ ಕಾಡುತ್ತಿದೆ. ಮೊಹ್ಸಿನ್ ಖಾನ್ ಸೇರಿದಂತೆ ಮಯಾಂಕ್ ಯಾದವ್, ಆಕಾಶ್ ದೀಪ್ ಹಾಗೂ ಆವೇಶ್ ಖಾನ್ ಸಹ ಗಾಯದಿಂದ ಬಳಲುತ್ತಿದ್ದಾರೆ. ಈ ಆಟಗಾರರು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾರ್ದೂಲ್ ಠಾಕೂರ್ ಐಪಿಎಲ್‌ನಲ್ಲಿ 95 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದು 307 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ. ಇನ್ನು ಬೌಲಿಂಗ್ 67 ವಿಕೆಟ್ ಪಡೆದಿದ್ದಾರೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನು ಹರಾಜಿಗೆ ಬಿಟ್ಟಿದ್ದರು.

ರಿಷಭ್ ಪಂತ್ (ನಾಯಕ), ಡೇವಿಡ್ ಮಿಲ್ಲರ್, ಐಡೆನ್ ಮರ್ಕ್ರಾಮ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಅವೇಶ್ ಖಾನ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ರವಿ ಬಿಸ್ನೋಯ್, ಅಬ್ದುಲ್ ಸಮದ್, ಆರ್ಯನ್ ಜುಯಲ್, ಆಕಾಶ್ ದೀಪ್, ಹಿಮ್ಮತ್ ಸಿಂಗ್, ಎಂ ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಷಹಬಾಜ್ ಸಿಂಗ್, ಯು ಸಿದ್ಧಾರ್ಥ್, ದಿಗ್ವೇಶ್ ಅಹ್ಮದ್ ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ, ಮ್ಯಾಥ್ಯೂ ಬಿ.