IPL 2025: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗರಿಷ್ಠ ರನ್ ಬಾರಿಸಿದ ಬ್ಯಾಟರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಎಲ್ಲ ತಂಡಗಳು ಅಂಗಳ ಪ್ರವೇಶಿಸಿವೆ. ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಶುಕ್ರವಾರ ಕಾದಾಟ ನಡೆಸಲಿವೆ. ಈ ಹೈವೋಲ್ಟೇಜ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಮುಖಾಮುಖಿ ಆಗಲಿದ್ದಾರೆ. ಈ ಪಂದ್ಯ ನಿಜಕ್ಕೂ ಹೌಸ್ ಫುಲ್ ಆಗಿರಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಕಪ್ ಗೆದ್ದಿರುವ ದಾಖಲೆ ಹೊಂದಿದೆ. ಆರ್‌ಸಿಬಿ ಕಪ್ ಗೆಲ್ಲದೇ ಇದ್ದರೂ ಸಹ ಅತಿ ಹೆಚ್ಚು ಜನಪ್ರೀಯತೆ ಹೊಂದಿರುವ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ. ಚೆನ್ನೈ ವಿರುದ್ಧ ತವರಿನಲ್ಲಿ ಯಾವುದೇ ತಂಡ ಆಡಿದ್ರೂ ಜಿದ್ದು ಇದ್ದೇ ಇರುತ್ತದೆ. ಈ ವರದಿಯಲ್ಲಿ ಚೆನ್ನೈ ವಿರುದ್ಧ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಐದು ಆಟಗಾರರ ಬಗ್ಗೆ ವರದಿ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ಟೀಮ್ ಇಂಡಿಯಾದ ಗಬ್ಬರ್ ಖ್ಯಾತಿಯ ಶಿಖರ್ ಧವನ್ ಅವರಿಗೆ ಸಲ್ಲುತ್ತದೆ. ಇವರು ಚೆನ್ನೈ ವಿರುದ್ಧ ಆಡಿದ 29 ಪಂದ್ಯಗಳಲ್ಲಿ 44.04ರ ಸರಾಸರಿಯಲ್ಲಿ 1057 ರನ್ ಕಲೆ ಹಾಕಿದ್ದಾರೆ. ಇವರು ಚೆನ್ನೈ ವಿರುದ್ಧ ಶತಕ ಬಾರಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ. ಈ ರನ್‌ಗಳನ್ನು ಇವರು ಡೆಕ್ಕನ್ ಚಾರ್ಜಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಪರ ಆಡುವಾಗ ಕಲೆ ಹಾಕಿದ್ದಾರೆ.
ವಿರಾಟ್ ಕೊಹ್ಲಿ 1053 ರನ್
ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲೆಬು ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಸಿಎಸ್‌ಕೆ ವಿರುದ್ಧ ಆಡಿದ 33 ಪಂದ್ಯಗಳಲ್ಲಿ 1053 ರನ್ ಸಿಡಿಸಿದ್ದಾರೆ. ಈ ಎಲ್ಲ ರನ್‌ಗಳನ್ನು ಇವರು ಆರ್‌ಸಿಬಿ ಪರ ಆಡಿದಾಗಲೇ ಬಾರಿಸಿದ್ದಾರೆ. ಚೆನ್ನೈ ವಿರುದ್ಧ ಅಜೇಯ 90 ರನ್‌ಗಳ ಇನಿಂಗ್ಸ್ ಕಟ್ಟಿದ್ದು ದೊಡ್ಡ ಸಾಧನೆ. ಈ ವೇಳೆ ಇವರ ಸರಾಸರಿ 37.60 ಆಗಿದೆ.
ರೋಹಿತ್ ಶರ್ಮಾ 896 ರನ್
ಪವರ್ ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿರುವ ರೋಹಿತ್ ಶರ್ಮಾ ಸಹ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವೀರಾವೇಶದ ಆಟವನ್ನು ಆಡಿದ್ದಾರೆ. ಇವರು ಯೆಲ್ಲೋ ಆರ್ಮಿ ವಿರುದ್ಧ ಆಡಿದ 34 ಪಂದ್ಯಗಳಲ್ಲಿ 29.86ರ ಸರಾಸರಿಯಲ್ಲಿ 896 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು ಡೆಕ್ಕನ್ ಚಾರ್ಜಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪರ ಬ್ಯಾಟ್ ಮಾಡಿದ್ದಾರೆ. ಇನ್ನು ಈ ವೇಳೆ ರೋಹಿತ್ 83 ಬೌಂಡರಿ, 32 ಸಿಕ್ಸರ್ ಸಿಡಿಸಿದ್ದಾರೆ.
ದಿನೇಶ್ ಕಾರ್ತಿಕ್ 727 ರನ್
ದಿನೇಶ್ ಕಾರ್ತಿಕ್ ಸಹ ಚೆನ್ನೈ ವಿರುದ್ಧ ಆರ್ಭಟಿಸಿರುವ ಆಟಗಾರ. ಇವರು ಆಡಿರುವ 33 ಪಂದ್ಯಗಳಲ್ಲಿ 727 ಪಂದ್ಯಗಳನ್ನು ಬಾರಿಸಿದ್ದಾರೆ. ಈ ವೇಳೆ 78 ಬೌಂಡರಿ, 22 ಸಿಕ್ಸರ್‌ಗಳು ಸೇರಿವೆ. ಚೆನ್ನೈ ವಿರುದ್ಧ ದಿನೇಶ್ 52 ರನ್‌ಗಳ ಇನಿಂಗ್ಸ್ ಕಟ್ಟಿರುವುದು ಗರಿಷ್ಠ ರನ್.
ಡೇವಿಡ್ ವಾರ್ನರ್ 696 ರನ್
ಡೇವಿಡ್ ವಾರ್ನರ್ ಸಹ ಚೆನ್ನೈ ಪರ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಆಡಿದ 21 ಇನಿಂಗ್ಸ್‌ಗಳಲ್ಲಿ 33.14ರ ಸರಾಸರಿಯಲ್ಲಿ 696 ರನ್ ಸಿಡಿಸಿದ್ದಾರೆ. ಇವರು ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬ್ಯಾಟ್ ಮಾಡುವಾಗ ಈ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications