Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಈ ತಂಡಗಳ ಕ್ಯಾಪ್ಟನ್ಸ್ ಫೈನಲ್‌: 4 ತಂಡಗಳ ಹುಡುಕಾಟ

ಇಂಡಿಯನ್ ಪ್ರೀಮಿಯರ್‌ ಲೀಗ್‌ ಹವಾ ಈಗಲೇ ಕ್ರಿಯೇಟ್ ಆಗಿದೆ. 18ನೇ ಆವೃತ್ತಿಯ ಐಪಿಎಲ್‌ ಮಾರ್ಚ್‌ 21 ರಿಂದ ಆರಂಭವಾಗಲಿದೆ. ಆದರೆ ಈ ಲೀಗ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನು ಫೈನಲ್ ಮಾಡಿಲ್ಲ. ಈಗಾಗಲೇ ತಂಡಗಳು ತಮ್ಮ ಸಿದ್ಧತೆಗಳನ್ನು ಆರಂಭಿಸಿವೆ. ಈಗಾಗಲೇ ಹಲವು ತಂಡಗಳು ನಾಯಕರನ್ನು ಫೈನಲ್ ಮಾಡಿವೆ. ಇನ್ನು ಕೆಲವು ತಂಡಗಳ ನಾಯಕರು ಇನ್ನು ಘೋಷಿಸಬೇಕಿದೆ. ಹೊಸ ನಾಯಕರ ಹುಡುಕಾಟ ಬಹಳ ತಂಡಗಳಲ್ಲಿ ನಡೆದಿದೆ.

ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್‍‌ ಅವರನ್ನು ದಾಖಲೆಯ ಮೊತ್ತ ನೀಡಿ ಖರೀದಿಸಿತ್ತು. ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ್ದ ಶ್ರೇಯಸ್ ಅಯ್ಯರ್ ಉಳಿಸಿಕೊಳ್ಳುವಲ್ಲಿ ಕೆಕೆಆರ್ ವಿಫಲವಾಗಿತ್ತು. ಇವರಲ್ಲಿನ ಕ್ಷಮತೆಯನ್ನು ಗುರುತಿಸಿದ ಪಂಜಾಬ್ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಅಲ್ಲದೆ ತಂಡದ ಕೋಚ್‌ ರಿಕ್ಕಿ ಪಾಂಟಿಂಗ್ ಹಾಗೂ ಇವರ ನಡುವಿನ ಸಂಬಂಧ ಚೆನ್ನಾಗಿದೆ.

IPL 2025 Shreyas Iyer Named Punjab Kings Captain Other Teams to Announce Soon

ಇತ್ತೀಚಿಗೆ ನಡೆದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಂಜಾಬ್ ಕಿಂಗ್ಸ್‌ ಶ್ರೇಯಸ್ ಅಯ್ಯರ್ ತಮ್ಮ ಮುಂದಿನ ನಾಯಕ ಎಂದು ಘೋಷಿಸಿದೆ. ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡವನ್ನು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುನ್ನಡೆಸಲಿದ್ದಾರೆ. ಇವರು ಮುಂದಾಳತ್ವದಲ್ಲಿ ಪಂಜಾಬ್‌ ಕಪ್ ಗೆಲುವಿನ ಆಸೆ ಫಲಿಸುತ್ತದಾ ಕಾದು ನೋಡಬೇಕಿದೆ.

ಆರು ತಂಡಗಳ ನಾಯಕರು ಫೈನಲ್

18ನೇ ಆವೃತ್ತಿಯ ಐಪಿಎಲ್‌ಗೆ ಈಗಾಗಲೇ 6 ತಂಡಗಳು ತಮ್ಮ ನಾಯಕರನ್ನು ಫೈನಲ್ ಮಾಡಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರುತುರಾಜ್ ಗಾಯಕ್ವಾಡ್ ವಹಿಸಿಕೊಳ್ಳಲಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ, ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಈ ಬಾರಿಯೂ ಪ್ಯಾಟ್ ಕಮಿನ್ಸ್‌ ಮುನ್ನಡೆಸಲಿದ್ದಾರೆ. ಇವರ ನಾಯಕತ್ವದಲ್ಲಿ ಸನ್ ತಂಡ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿತ್ತು. ಇನ್ನು ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್‌ ಹಾಗೂ ಗುಜರಾತ್ ಟೈಟನ್ಸ್ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

IPL 2025 Shreyas Iyer Named Punjab Kings Captain Other Teams to Announce Soon

ನಾಲ್ಕು ತಂಡಗಳ ಹುಡುಕಾಟ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಲವು ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಡೆಲ್ಲಿ ತಂಡವನ್ನು ಕಳೆದ ಆವೃತ್ತಿಯಲ್ಲಿ ರಿಷಭ್ ಪಂತ್ ಅವರು ಮುನ್ನಡೆಸಿದ್ದರು. ಆದರೆ ಇವರನ್ನು ಉಳಿಸಿಕೊಳ್ಳುವಲ್ಲಿ ತಂಡ ವಿಫಲವಾಗಿತ್ತು. ಅಲ್ಲದೆ ಇವರು ಲಕ್ನೋ ತಂಡ ಸೇರಿದರು. ಹೀಗಾಗಿ ಡೆಲ್ಲಿ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಮನೆ ಮಾಡಿದೆ. ಇನ್ನು ಎಲ್‌ಎಸ್‌ಜಿ ತಂಡದಲ್ಲೂ ಈ ಬಾರಿ ಬದಲಾವಣೆಯ ಗಾಳಿ ಬೀಸುವುದು ಪಕ್ಕಾ ಆಗಿದೆ. ಈ ತಂಡ ರಿಷಭ್ ಪಂತ್ ಅಥವಾ ತಮ್ಮದೇ ತಂಡದ ಹಳೆಯ ಆಟಗಾರರಿಗೆ ಪಟ್ಟ ಕಟ್ಟಬಹುದು ಎಂದು ಅಂದಾಜಿಸಲಾಗಿದೆ.

ಕೆಕೆಆರ್‍‌ ಸಹ ನಾಯಕನ ಹುಡುಕಾಟದಲ್ಲಿದೆ. ಆದರೆ ಈ ಬಾರಿಯ ಹರಾಜಿನಲ್ಲಿ ಕೆಕೆಆರ್‍‌ ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರನ್ನು ಹರಾಜಿನಲ್ಲಿ ಪಿಕ್ ಮಾಡುವಲ್ಲಿ ಎಡವಿದೆ. ಹೀಗಾಗಿ ತಮ್ಮ ತಂಡದಲ್ಲಿ ಈಗಿರುವ ಆಟಗಾರರಲ್ಲೇ ತಂಡ ಒಬ್ಬರಿಗೆ ನಾಯಕತ್ವ ನೀಡುವ ಅನಿವಾರ್ಯತೆ ಇದೆ. ಮೇಲ್ನೋಟಕ್ಕಂತು ವೆಂಕಟೇಶ್ ಅಯ್ಯರ್ ಅಥವಾ ರಿಂಕು ಸಿಂಗ್‌ಗೆ ಪಟ್ಟ ಕಟ್ಟಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಆರ್‍‌ಸಿಬಿ ತಂಡದ ನಾಯಕ ಯಾರು ಎಂಬ ಪ್ರಶ್ನೆ ಸಹ ಅಭಿಮಾನಿಗಳಲ್ಲಿದೆ. ಈ ಬಾರಿ ನಾಯಕನ ರೇಸ್‌ನಲ್ಲಿ ವಿರಾಟ್ ಕೊಹ್ಲಿ, ರಜತ್‌ ಪಟೀದಾರ್‍‌ ಅವರ ಹೆಸರುಗಳು ಕೇಳಿ ಬರುತ್ತಿವೆ. ಅಲ್ಲದೆ ಕೃಣಾಲ್ ಪಾಂಡ್ಯ ಅವರನ್ನು ಸಹ ಪರಿಗಣಿಸುವ ಸಾಧ್ಯತೆ ಇದೆ.

Story first published: Monday, January 13, 2025, 18:11 [IST]
Other articles published on Jan 13, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+