IPL 2025: ಪಂಜಾಬ್‌ಗೆ ಶ್ರೇಯಸ್ ಅಯ್ಯರ್ ಕಿಂಗ್ ಆಗ್ತಾರಾ?
ಐಪಿಎಲ್ 2025ರ ಮೆಗಾ ಹರಾಜಿನ ಮೊದಲ ದಿನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಖಜಾನೆ ತೆರೆಯಿತು. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಪಂಜಾಬ್ ಸೇರಿದರು. ಪಂಜಾಬ್ ಫ್ರಾಂಚೈಸಿ ಅಯ್ಯರ್ ಅವರನ್ನು 26.75 ಕೋಟಿ ರೂ.ಗೆ ಖರೀದಿಸಿತು.
ಅಯ್ಯರ್ ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಅವರ ನಾಯಕತ್ವದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡ 2020 ರಲ್ಲಿ ಫೈನಲ್ ತಲುಪಿತು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಇದೀಗ ಐಪಿಎಲ್‌ನಲ್ಲಿ ಯಶಸ್ವಿ ನಾಯಕರ ಪಟ್ಟಿಯಲಿರುವ ಶ್ರೇಯಸ್ ಅಯ್ಯರ್ ಅವರಿಗೆ ಪಂಜಾಬ್ ಮಣೆ ಹಾಕಿದೆ. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ತಂಡಕ್ಕೆ ನಾಯಕತ್ವ ವಹಿಸುವ ಸಾಧ್ಯತೆಯಿದೆ.

ಐಪಿಎಲ್ 2025ರ ಆವೃತ್ತಿಗೆ ಪಂಜಾಬ್ ನಾಯಕನ ಹುಡುಕಾಟದಲ್ಲಿತ್ತು. ಈಗ ಪಂಜಾಬ್‌ಗೆ ಶ್ರೇಯಸ್ ಅಯ್ಯರ್ ಬೆಸ್ಟ್ ನಾಯಕನಾಗಿ ಸಿಕ್ಕಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ಅವರನ್ನು ತಮ್ಮ ಹೊಸ ನಾಯಕ ಎಂದು ಘೋಷಿಸುವ ನಿರೀಕ್ಷೆಯಿದೆ. ಏಕೆಂದರೆ ಪಂಜಾಬ್ ತಂಡಕ್ಕೆ ಹೊಸ ಹೆಡ್‌ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕಗೊಂಡಿದ್ದಾರೆ. ಪಾಂಟಿಂಗ್ ಮತ್ತು ಅಯ್ಯರ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಒಮ್ಮೆ ಡೆಲ್ಲಿ ಫೈನಲ್ ತಲುಪಿತ್ತು.
ಪಾಂಟಿಂಗ್ ಹೇಳಿದ್ದೇನು?
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಬಿಡ್ ಮಾಡುತ್ತಿದ್ದಂತೆ ರಿಕಿ ಪಾಂಟಿಂಗ್ ಮಾತನಾಡಿದ್ದಾರೆ. 'ನಾಯಕತ್ವದ ಬಗ್ಗೆ ನಾನು ಇನ್ನೂ ಶ್ರೇಯಸ್ ಅಯ್ಯರ್ ಅವರೊಂದಿಗೆ ಮಾತನಾಡಿಲ್ಲ. ಹರಾಜಿಗೂ ಮುನ್ನ ನಾನು ಅವರಿಗೆ ಕರೆ ಮಾಡಿದೆ, ಆದರೆ ಅವರು ಫೋನ್ ಪಿಕ್ ಮಾಡಿಲ್ಲ. ಅವರು ಯಶಸ್ವಿ ಐಪಿಎಲ್ ನಾಯಕರಾಗಿದ್ದಾರೆ. ಅವರೊಂದಿಗೆ ಮತ್ತೆ ಕೆಲಸ ಮಾಡಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications