SRH Retention: ಘಟಾನುಘಟಿಗಳನ್ನು ಉಳಿಸಿಕೊಂಡ ಎಸ್‌ಆರ್‌ಹೆಚ್; ಅಭಿಷೇಕ್ ಶರ್ಮಾಗೆ ಜಾಕ್ ಪಾಟ್
ಬಿಸಿಸಿಐ ನೀಡಿದ ಗಡುವಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಪಿಎಲ್ 2025ರ ಟೂರ್ನಿಗಾಗಿ 5 ಆಟಗಾರರನ್ನು ಉಳಿಸಿಕೊಳ್ಳಲು ಕಾವ್ಯ ಮಾರನ್ ಒಡೆತನದ ಹೈದರಾಬಾದ್ ಫ್ರಾಂಚೈಸಿ ನಿರ್ಧರಿಸಿದೆ.
ಕಳೆದ ಬಾರಿ ಐಪಿಎಲ್‌ನಲ್ಲಿ ಫೈನಲ್ ತಲುಪಲು ಕಾರಣವಾಗಿದ್ದ ಘಟಾನುಘಟಿ ಆಟಗಾರರನ್ನು ಸನ್‌ರೈಸರ್ಸ್ ಹೈದರಾಬಾದ್ ಉಳಿಸಿಕೊಂಡಿದೆ. ಇದರಲ್ಲಿ ಹೆನ್ರಿಚ್ ಕ್ಲಾಸೆನ್, ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಹೆಸರುಗಳಿವೆ.

ಎಸ್‌ಆರ್‌ಹೆಚ್ ಫ್ರಾಂಚೈಸಿ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಿದೆ ಎಂಬುದು ಅಭಿಮಾನಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಎಸ್‌ಆರ್‌ಹೆಚ್ ರನ್ನರ್ ಆಪ್ ಆಗಲು ಪ್ಯಾಟ್ ಕಮ್ಮಿನ್ಸ್ ನಾಯಕತ್ವ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಮೊದಲ ಆಯ್ಕೆಯಾಗಿ 18 ಕೋಟಿ ರೂ.ಗಳಿಗೆ ಎಸ್‌ಆರ್‌ಹೆಚ್ ಉಳಿಸಿಕೊಂಡಿದೆ. ಇದರೊಂದಿಗೆ ಅವರು ಮುಂದಿನ ಆವೃತ್ತಿಯಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ.
ಎರಡನೇ ಆಯ್ಕೆಯಾಗಿ ಟೀಮ್ ಇಂಡಿಯಾದ ಯುವ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರಿಗೆ 14 ಕೋಟಿ ರೂ. ನೀಡಿ ಉಳಿಸಿಕೊಳ್ಳಲಾಗಿದೆ. ಅಭಿಷೇಕ್ ಆರಂಭಿಕ ಬ್ಯಾಟರ್ ಆಗಿದ್ದು, ಸ್ಪಿನ್ನರ್ ಬೌಲಿಂಗ್ ಕೂಡ ಮಾಡಬಲ್ಲರು. ಮೂರನೇ ಆಟಗಾರನಾಗಿ ದೇಶೀ ಯುವ ಸ್ಟಾರ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು 6 ಕೋಟಿ ರೂ.ಗೆ ಎಸ್‌ಆರ್‌ಹೆಚ್ ಉಳಿಸಿಕೊಂಡಿದೆ. ನಿತೀಶ್ ಕೂಡ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ವೇಗದ ಬೌಲರ್ ಕೂಡ ಮಾಡುತ್ತಾರೆ.
ನಾಲ್ಕನೇ ಆಯ್ಕೆಯಾಗಿ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ಗೆ ಬರೋಬ್ಬರಿ 23 ಕೋಟಿ ರೂ. ಗಳನ್ನು ನೀಡಲಾಗಿದೆ. ಕಳೆದ ಬಾರಿ ಐಪಿಎಲ್‌ನಲ್ಲಿ ಕ್ಲಾಸೆನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಕೊನೆಯ ಆಯ್ಕೆಯಾಗಿ ಮತ್ತೊಬ್ಬ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಅವರಿಗೆ 14 ಕೋಟಿ ರೂ. ಕೊಟ್ಟು ಎಸ್‌ಆರ್‌ಹೆಚ್ ಉಳಿಸಿಕೊಂಡಿದೆ.
ಎಸ್‌ಆರ್‌ಹೆಚ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ
ಭುವನೇಶ್ವರ್ ಕುಮಾರ್, ವಾಷಿಂಗ್ಟನ್ ಸುಂದರ್, ಐಡೆನ್ ಮರ್ಕ್ರಾಮ್, ಟಿ ನಟರಾಜನ್, ರಾಹುಲ್ ತ್ರಿಪಾಠಿ, ಅಬ್ದುಲ್ ಸಮದ್, ಗ್ಲೆನ್ ಫಿಲಿಪ್ಸ್, ಮಯಾಂಕ್ ಅಗರ್ವಾಲ್, ಮಾರ್ಕೊ ಜಾನ್ಸೆನ್, ಸನ್ವಿರ್ ಸಿಂಗ್, ವನಿಂದು ಹಸರಂಗ, ಆಕಾಶ್ ಸಿಂಗ್, ಶಹಬಾಜ್ ಅಹ್ಮದ್, ಫಜಲ್ಹಕ್ ಫಾರೂಕಿ, ಜಯದೇವ್ ಮಲಿಕನ್, ಉಮ್ರಾನ್ ಮರ್ಕಟ್ , ಜಾತವೇಧ್ ಸುಬ್ರಮಣ್ಯನ್, ವಿಜಯಕಾಂತ್ ವ್ಯಾಸಕಾಂತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications