ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಇಂದು ಅಂದರೆ ಗುರುವಾರ ಐಪಿಎಲ್ 2025ರ ಏಳನೇ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ಎದುರಿಸಲಿದೆ. ಇಶಾನ್ ಕಿಶನ್ ಅವರ ಚೊಚ್ಚಲ ಐಪಿಎಲ್ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡವನ್ನು ಮೊದಲ ಪಂದ್ಯದಲ್ಲಿ ಹೈದರಾಬಾದ್ 44 ರನ್‌ಗಳಿಂದ ಸೋಲಿಸಿತು. ಮತ್ತೊಂದೆಡೆ, 210 ರನ್‌ಗಳ ಬೃಹತ್ ಗುರಿಯನ್ನು ನೀಡಿದ್ದರೂ, ಎಲ್‌ಎಸ್‌ಜಿಯ ದುರ್ಬಲ ಬೌಲಿಂಗ್ ಡಿಸಿ ತಂಡವನ್ನು ನಿಯಂತ್ರಿಸುವಲ್ಲಿ ವಿಫಲವಾಯಿತು.
ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ರನ್ ರೇಟ್ ಮೂಲಕ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗ ಎಲ್‌ಎಸ್‌ಜಿ ವಿರುದ್ಧವೂ ಗೆದ್ದು ತನ್ನ ಪ್ರಾಬಲ್ಯವನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿದೆ. ಹೀಗಾಗಿ ಹೈದರಾಬಾದ್ ತಂಡವನ್ನು ಸೋಲಿಸುವುದು ಎಲ್‌ಎಸ್‌ಜಿ ತಂಡಕ್ಕೆ ದೊಡ್ಡ ಸವಾಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ಕಳಪೆ ಆಗಿತ್ತು. ಲಕ್ನೋ ಅನುಭವಿ ಬೌಲರ್‍ಗಳ ಕೊರತೆಯನ್ನು ಎದುರಿಸುತ್ತಿದೆ. ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಹೊರತುಪಡಿಸಿ, ಬೇರೆ ಯಾವುದೇ ಬೌಲರ್ ಇಷ್ಟು ಪರಿಣಾಮಕಾರಿಯಾಗಿಲ್ಲ. ಲಕ್ನೋ ತಂಡದ ಬೌಲರ್‍ಗಳು ಮಧ್ಯಮ ಓವರ್‌ನಲ್ಲಿ ಹೆಚ್ಚು ರನ್ ನೀಡಿರುವುದು ದೊಡ್ಡ ಸಮಸ್ಯೆಯಾಗಿದೆ. ಕೊನೆಯ ಎಂಟು ಓವರ್‌ಗಳಲ್ಲಿ ಬೌಲರ್‍ಗಳು 76 ರನ್‌ಗಳನ್ನು ನೀಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಎಸ್‌ಆರ್‍ಹೆಚ್ ತಂಡದ ಬಲಿಷ್ಠ ಬ್ಯಾಟಿಂಗ್ ಎದುರು ಎಲ್‌ಎಸ್‌ಜಿ ಸುಧಾರಿತ ಬೌಲಿಂಗ್ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ಇಲ್ಲದಿದ್ದರೆ ಎಸ್‌ಆರ್‍ಹೆಚ್ 300 ರನ್‌ಗಳ ಗಡಿ ದಾಟುವ ಸಾಧ್ಯತೆ ಹೆಚ್ಚಿದೆ. ಲಕ್ನೋದ ಸಂಪೂರ್ಣ ಬೌಲಿಂಗ್ ತಂಡವು ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಶಾರ್ದೂಲ್ ಠಾಕೂರ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಗಾಯಗೊಂಡು ಟೂರ್ನಿಯಿಂದ ಹೊರಗುಳಿದ ಮೊಹ್ಸಿನ್ ಖಾನ್ ಬದಲಿಗೆ ಆನ್‌ಸೋಲ್ಡ್ ಆಟಗಾರ ಶಾರ್ದೂಲ್ ಠಾಕೂರ್ ತಂಡವನ್ನು ಸೇರಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಇಲ್ಲಿವರೆಗೆ ಕೇವಲ 4 ಪಂದ್ಯಗಳು ನಡೆದಿವೆ. ಲಕ್ನೋ ಸೂಪರ್ ಜೈಂಟ್ಸ್ ತಂಡ 3 ರಲ್ಲಿ ಗೆದ್ದರೆ, ಸನ್‌ರೈಸರ್ಸ್ ಹೈದರಾಬಾದ್ 1 ರಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಹೈದರಾಬಾದ್ ಎದುರು ಲಕ್ನೋ ಪ್ರಾಬಲ್ಯ ಸಾಧಿಸಿದೆ.
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ಕೀಪರ್), ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಆಡಮ್ ಜಂಪಾ, ಮೊಹಮ್ಮದ್ ಶಮಿ, ಸಿಮರ್ಜೀತ್ ಸಿಂಗ್.
ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ- ವಿಕೆಟ್‌ಕೀಪರ್), ಡೇವಿಡ್ ಮಿಲ್ಲರ್, ಶಾರ್ದುಲ್ ಠಾಕೂರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ದಿಗ್ವೇಶ್ ರಥಿ, ಆವೇಶ್ ಖಾನ್, ಪ್ರಿನ್ಸ್ ಯಾದವ್.