IPL 2025: ಜೋಫ್ರಾ ಆರ್ಚರ್‌ಗೆ ಬೆವರಿಳಿಸಿದ ಟ್ರಾವಿಸ್ ಹೆಡ್ ಸ್ಪೋಟಕ ಬ್ಯಾಟಿಂಗ್
ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಗಳಿಸಿದೆ. ಇಂದು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಐಪಿಎಲ್ 2025 ರ ಎರಡನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಕಲೆ ಹಾಕಿದೆ.
ಹೈದರಾಬಾದ್ ಗಳಿಸಿದ 286 ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಹೈದರಾಬಾದ್ ತಂಡ ಗಳಿಸಿದ 287 ರನ್‌ಗಳು ಅತ್ಯಧಿಕ ಮೊತ್ತವಾಗಿದೆ. ಹೈದರಾಬಾದ್ ತಂಡ ಈ ದಾಖಲೆ ಮಾಡುವ ಹಂತಕ್ಕೆ ಕೊಂಡೊಯ್ಯುವಲ್ಲಿ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಪ್ರಮುಖ ಪಾತ್ರ ವಹಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಇಶಾನ್ 45 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಪೂರ್ಣಗೊಳಿಸಿದರು.

ಇಶಾನ್ ಕಿಶನ್ ಗಿಂತ ಮೊದಲು ಆರಂಭಿಕ ಬ್ಯಾಟರ್‍ಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಇಬ್ಬರೂ ಹೈದರಾಬಾದ್ ತಂಡಕ್ಕೆ ಅದ್ಭುತ ಆರಂಭವನ್ನು ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 45 ರನ್‌ಗಳ ಜೊತೆಯಾಟ ಆಡಿದರು. ಅಭಿಷೇಕ್ 11 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 24 ರನ್ ಗಳಿಸಿ ಔಟಾದರು. ಇನ್ನೊಂದು ತುದಿಯಿಂದ ಹೆಡ್ ರಾಜಸ್ಥಾನ ಬೌಲರ್‌ಗಳನ್ನು ಬೆಂಡೆತ್ತಿದರು. ವಿಶ್ವದ ಅಪಾಯಕಾರಿ ವೇಗದ ಬೌಲರ್‍ಗಳಲ್ಲಿ ಒಬ್ಬರಾದ ಜೋಫ್ರಾ ಆರ್ಚರ್ ಅವರ ಒಂದು ಓವರ್‍ನಲ್ಲಿ ಹೆಡ್ ಸ್ಪೋಟಕ ಬ್ಯಾಟಿಂಗ್ ಮಾಡಿದರು.
ಜೋಫ್ರಾ ಆರ್ಚರ್‍ಗೆ ಹೆಡ್ ಒಂದೇ ಓವರ್‍ನಲ್ಲಿ 23 ರನ್ ಕಲೆ ಹಾಕಿದರು. ಇದರಲ್ಲಿ ಒಂದು ಸಿಕ್ಸ್ ಮತ್ತು ನಾಲ್ಕು ಬೌಂಡರಿಗಳನ್ನು ಹೆಡ್ ಬಾರಿಸಿದರು. ಆದರೆ ಒಂದು ರನ್ ವೈಡ್ ನಿಂದ ಬಂದಿತು. ಹೆಡ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹೆಡ್ 31 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳು ನೆರವಿನಿಂದ 67 ರನ್‌ಗಳ ಇನ್ನಿಂಗ್ಸ್ ಆಡಿದರು. ಜೋಫ್ರಾ ಆರ್ಚರ್ ಎಸೆತದಲ್ಲಿ ಹೆಡ್ 105 ಮೀಟರ್ ಸಿಕ್ಸರ್ ಸಿಡಿಸಿದರು.
ಕಳೆದ ವರ್ಷವೂ ಟ್ರಾವಿಸ್ ಹೆಡ್ ಸ್ಪೋಟಕ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದರು. ಐಪಿಎಲ್ 2024ರ ಟೂರ್ನಿಯುದ್ದಕ್ಕೂ ಹೆಡ್ ಅಬ್ಬರಿಸುವ ಮೂಲಕ ಹೈದರಾಬಾದ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದರು. ಐಪಿಎಲ್ 2024 ರಲ್ಲಿ ಅವರು ಹೈದರಾಬಾದ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರು ಆಡಿದ 15 ಪಂದ್ಯಗಳಲ್ಲಿ 567 ರನ್ ಗಳಿಸಿದ್ದರು.
ಈ ಪಂದ್ಯ ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ 24, ಟ್ರಾವಿಸ್ ಹೆಡ್ 67, ನಿತೀಶ್ ಕುಮಾರ್ ರೆಡ್ಡಿ 30, ಹೆನ್ರಿಕ್ ಕ್ಲಾಸೆನ್ 34 ಮತ್ತು ಅನಿಕೇತ್ ವರ್ಮಾ 7 ರನ್ ಗಳಿಸಿದರು. ಇಶಾನ್ ಕಿಶನ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರು 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 106 ರನ್ ಗಳಿಸಿ ಅಜೇಯರಾಗುಳಿದರು. ರಾಜಸ್ಥಾನ ಪರ ತುಷಾರ್ ದೇಶಪಾಂಡೆ 3 ವಿಕೆಟ್ ಪಡೆದರೆ, ಮಹೇಶ್ ತೀಕ್ಷಣ 2 ಮತ್ತು ಸಂದೀಪ್ ಶರ್ಮಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications