Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kamindu Mendis: ಎರಡೂ ಕೈಯಿಂದ ಬೌಲ್ ಮಾಡುವ SRH ಬೌಲರ್ ಯಾರು?

ಸಾಮಾನ್ಯವಾಗಿ ಎರಡೂ ಕೈಗಳಿಂದ ನೀವು ಬರೆಯುವುದನ್ನು ನೋಡಿರಬಹುದು. ಅಥವಾ ಎರಡೂ ಕೈಯಿಂದ ಬ್ಯಾಟ್ ಮಾಡುವುದನ್ನು ನೋಡಿರುತ್ತಾರೆ. ಆದರೆ ಇಲ್ಲೊಬ್ಬ ಬೌಲರ್‌ ಎರಡೂ ಕೈಯಿಂದ ಬೌಲ್ ಮಾಡಿ ಗಮನ ಸೆಳೆದಿದ್ದಾರೆ. ಐಪಿಎಲ್‌ನ ಪದಾರ್ಪಣೆ ಪಂದ್ಯದಲ್ಲಿ ಇವರು ಬೌಲ್ ಮಾಡಿ ಎಲ್ಲರ ಗಮನ ಸೆಳೆದರು. ಈ ಬೌಲರ್ ಯಾರು ಇವರ ಸಾಧನೆ ಏನು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಗುರುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದನಾದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡದ ಪರ ಶ್ರೀಲಂಕಾ ಸ್ಪಿನ್ನರ್ ಕಮೆಂಡು ಮೆಂಡಿಸ್ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಇವರು ಮೊದಲ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದರು. ಇವರಲ್ಲಿರುವ ವಿಶೇಷ ಪ್ರತಿಭೆಗೆ ಮೈದಾನದಲ್ಲಿ ಅಭಿಮಾನಿಗಳು ಹಾಗೂ ಟಿವಿಯಲ್ಲಿ ಮ್ಯಾಚ್ ನೋಡ್ತಾ ಇದ್ದ ಅಭಿಮಾನಿಗಳು ಮನಸೋತರು.

IPL 2025 Sri Lanka s Kamindu Mendis Stuns with Ambidextrous Bowling on Debut for SRH

ಲಂಕಾ ಬೌಲರ್‌

26 ವರ್ಷದ ಶ್ರೀಲಂಕಾದ ಆಲ್‌ರೌಂಡರ್ ಕಾಮೆಂದು ಮೆಂಡಿಸ್ ಭರವಸೆಯ ಆಲ್‌ರೌಂಡರ್. ಇವರು ಬೇರೆ ಆಲ್‌ರೌಂಡರ್‌ಗಳಂತೆ ಅಲ್ಲ. ಆದರೆ ಇವರು ಎರಡೂ ಕೈಯಿಂದ ಬೌಲ್ ಮಾಡಬಲ್ಲ ಪ್ಲೇಯರ್. ಇವರು ಬಲಗೈ ಆಫ್‌ಬ್ರೇಕ್ ಮತ್ತು ಎಡಗೈ ನಿಧಾನಗತಿಯ ಆರ್ಥೊಡಾಕ್ಸ್ ಬೌಲಿಂಗ್ ಮಾಡುವ ಕಲೆಯನ್ನು ಕರಗತ ಮಾಡಿದ್ದಾರೆ. ಇವರು 2018ರಲ್ಲಿ ಶ್ರೀಲಂಕಾ ಪರ ಚೊಚ್ಚಲ ಪಂದ್ಯವನ್ನು ಆಡಿದ್ದರು. ಆದರೆ ಇವರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಗುರುವಾರ ಈ ಅವಕಾಶ ಅವರಿಗೆ ಲಭಿಸಿತು.

ಐಪಿಎಲ್ ಮೆಗಾ ಹರಾಜಿನಲ್ಲಿ ಎಸ್‌ಆರ್‌ಎಚ್‌ ಇವರಿಗೆ 75 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ನಾಯಕ ಪ್ಯಾಟ್ ಕಮ್ಮಿನ್ಸ್, ಮೆಂಡಿಸ್‌ ಅವರಿಗೆ ಮೊದಲ ಓವರ್ ಬೌಲ್ ಮಾಡಲು ಚೆಂಡು ನೀಡಿದರು. ನಾಯಕನ ವಿಶ್ವಾಸವನ್ನು ಇವರು ಉಳಿಸಿಕೊಂಡರು. ಇವರು ತಮ್ಮ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಅಂಗ್‌ಕ್ರಿಶ್ ಅವರಿಗೆ ಖೆಡ್ಡಾ ತೊಡಿದರು.

ಶ್ರೀಲಂಕಾ ಪರ ಕಮೆಂಡು ಆಡಿದ 12 ಟೆಸ್ಟ್‌ ಪಂದ್ಯಗಳಲ್ಲಿ 3 ವಿಕೆಟ್‌ ಪಡೆದರೆ, 19 ಏಕದಿನ ಪಂದ್ಯಗಳಲ್ಲಿ 2 ವಿಕೆಟ್‌ ಕಬಳಿಸಿದ್ದಾರೆ. ಇನ್ನು 2 ಟಿ20 ಪಂದ್ಯಗಳನ್ನು ಸಹ ಪಡೆದು ಬೀಗಿದ್ದಾರೆ. ಇವರು ಕೇವಲ ಒಂದು ಓವರ್ ಬೌಲ್ ಮಾಡಿ ಕೇವಲ 4 ರನ್‌ ನೀಡಿ 1 ವಿಕೆಟ್‌ ಕಬಳಿಸಿದರು.

ಪಂದ್ಯದ ಫಲಿತಾಂಶ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 200 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಸ್‌ಆರ್‌ಎಚ್‌ 16.4 ಓವರ್‌ಗಳಲ್ಲಿ 120 ರನ್‌ ಸೇರಿಸಿ ಹೀನಾಯ ಸೋಲು ಕಂಡಿತು. ಕೆಕೆಆರ್‌ ಗೆಲುವಿನಲ್ಲಿ ವೈಭವ್ ಆರೋರ್ ಹಾಗೂ ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್‌ ಕಬಳಿಸಿದ್ದಾರೆ. ಈ ಗೆಲುವಿನೊಂದಿಗೆ ಕೆಕೆಆರ್‌ ಟೂರ್ನಿಯಲ್ಲಿ 2 ಜಯ ದಾಖಲಿಸಿದೆ.

Story first published: Friday, April 4, 2025, 10:32 [IST]
Other articles published on Apr 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+