For Quick Alerts
ALLOW NOTIFICATIONS  
For Daily Alerts
 

IPL 2025: ಗುಜರಾತ್ ಟೈಟಾನ್ಸ್ ತಂಡಕ್ಕೆ ಸ್ಟಾರ್ ಆಲ್‌ರೌಂಡರ್ ಸೇರ್ಪಡೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಮಧ್ಯೆ ಗುಜರಾತ್ ಟೈಟಾನ್ಸ್ (ಜಿಟಿ) ತಮ್ಮ ತಂಡದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಐಪಿಎಲ್ 2025 ರ ಉಳಿದ ಪಂದ್ಯಗಳಿಗೆ ಗ್ಲೆನ್ ಫಿಲಿಪ್ಸ್ ಬದಲಿಗೆ ಹೊಸ ಸ್ಟಾರ್ ಆಲ್‌ರೌಂಡರ್ ಅನ್ನು ಸೇರಿಸಿಕೊಂಡಿದೆ. ಗಾಯದ ಕಾರಣದಿಂದಾಗಿ ಫಿಲಿಪ್ಸ್ ಐಪಿಎಲ್ 2025 ರ ಸೀಸನ್‌ನಿಂದ ಹೊರಗುಳಿದಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡವು ಶ್ರೀಲಂಕಾ ತಂಡದ ಸ್ಟಾರ್ ಆಲ್‌ರೌಂಡರ್ ದಾಸುನ್ ಶನಕ ಅವರನ್ನು ಆಯ್ಕೆ ಮಾಡಿಕೊಂಡಿದೆ. ಈ ಬಗ್ಗೆ ಗುರುವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಗುಜರಾತ್ ಟೈಟಾನ್ಸ್ ಮಾಹಿತಿ ಹಂಚಿಕೊಂಡಿದೆ.

IPL 2025 Star all-rounder Dasun Shanaka joins Gujarat Titans

ದಾಸುನ್ ಶನಕ ಶ್ರೀಲಂಕಾ ಪರ 102 ಟಿ20 ಪಂದ್ಯಗಳಲ್ಲಿ 1456 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 33 ಟಿ20 ವಿಕೆಟ್‌ಗಳಿವೆ. ಅವರು ಶ್ರೀಲಂಕಾ ಪರ 71 ಏಕದಿನ ಮತ್ತು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಈ ಹಿಂದೆ 2023 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದು, 3 ಪಂದ್ಯಗಳನ್ನು ಆಡಿದ್ದರು. ಶನಕ ಅವರನ್ನು 75 ಲಕ್ಷ ರೂ.ಗೆ ಜಿಟಿ ಸೇರಿಸಿಕೊಂಡಿದೆ.

ಶನಕ ಬಲಗೈ ಬ್ಯಾಟರ್ ಆಗಿದ್ದು, ಅವರು ಸಾಮಾನ್ಯವಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಜೊತೆಗೆ ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದಾರೆ. ಇದು ಶನಕ ಅವರ ಐಪಿಎಲ್‌ನ ಎರಡನೇ ಸೀಸನ್ ಆಗಿದ್ದು, ಎರಡೂ ಬಾರಿ ಗುಜರಾತ್ ಟೈಟಾನ್ಸ್‌ ಪರ ಕಾಣಿಸಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನೇತೃತ್ವದ 2023 ರ ಕೊನೆಯ ಐಪಿಎಲ್ ಸೀಸನ್‌ನಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದಾಗ್ಯೂ, ಶನಕ ಈ ಬಾರಿ ಹೊಸ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಲ್ಲಿದ್ದಾರೆ.

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ 2 ಕೋಟಿ ರೂ.ಗೆ ನ್ಯೂಜಿಲೆಂಡ್ ಸ್ಟಾರ್ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಅವರನ್ನು ಗುಜರಾತ್ ಟೈಟಾನ್ಸ್ ಬಿಡ್ ಮಾಡಿತು. ಐಪಿಎಲ್ 2025 ರಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ನಂತರ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಫೀಲ್ಡಿಂಗ್ ಮಾಡುವಾಗ ಅವರ ಬೆನ್ನಿಗೆ ಗಾಯವಾಗಿತ್ತು.

ಜಿಟಿ ಪ್ರದರ್ಶನ

ಪ್ರಸ್ತುತ ಐಪಿಎಲ್ 2025 ರಲ್ಲಿ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು +1.081 ನಿವ್ವಳ ರನ್ ರೇಟ್ ಹೊಂದಿದೆ. ಈ ಮೂಲಕ ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 5 ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಏಪ್ರಿಲ್ 19 ರ ಶನಿವಾರದಂದು ತವರು ಮೈದಾನವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ ಎದುರಿಸಲಿದೆ.

Story first published: Friday, April 18, 2025, 9:20 [IST]
Other articles published on Apr 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+