For Quick Alerts
ALLOW NOTIFICATIONS  
For Daily Alerts
 

IPL 2025: ಲಕ್ನೋಗೆ 191 ರನ್‌ಗಳ ಸವಾಲಿನ ಗುರಿ; ಹೈದರಾಬಾದ್ ಗೌರವ ಉಳಿಸಿದ ಹೆಡ್-ಅನಿಕೇತ್

ಐಪಿಎಲ್ 2025 ರ 7 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಲಕ್ನೋ ತಂಡ ಇನ್ನೂ ಗೆಲುವಿನ ಹುಡುಕಾಟದಲ್ಲಿದ್ದು, ಹೈದರಾಬಾದ್ ತಂಡವು ಐಪಿಎಲ್ 2025ರ ಸೀಸನ್‌ ಅನ್ನು ಗೆಲುವಿನೊಂದಿಗೆ ಆರಂಭಿಸಿದೆ. ಟಾಸ್ ಗೆದ್ದ ಲಕ್ನೋ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕಳೆದ ಪಂದ್ಯದಲ್ಲಿ ಲಕ್ನೋ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಆದರೆ, ಹೈದರಾಬಾದ್ ಕಳೆದ ಪಂದ್ಯದಲ್ಲಿ ರಾಜಸ್ಥಾನವನ್ನು ಸೋಲಿಸಿತ್ತು.

ತವರಿನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಲಕ್ನೋಗೆ 191 ರನ್ ಗಳ ಗುರಿ ನೀಡಿದೆ. ಹೈದರಾಬಾದ್ ಪರ ಟ್ರಾವಿಸ್ ಹೆಡ್ 47 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಅನಿಕೇತ್ ವರ್ಮಾ 36 ರನ್ ಕೆಲ ಹಾಕಿದರು. ಈ ಇಬ್ಬರ ಜವಾಬ್ದಾರಿಯುವ ಇನ್ನಿಂಗ್ಸ್ ನೆರವಿನಿಂದ ಹೈದರಾಬಾದ್ ತಂಡ ಸವಾಲಿನ ಗುರಿ ಕಲೆ ಹಾಕಿತು.

IPL 2025 Sunrisers Hyderabad vs Lucknow Super giants Match First Innings Report

ಶಾರ್ದೂಲ್ ಶಾಕ್

ಲಕ್ನೋ ವಿರುದ್ಧದ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಲೆಕ್ಕಾಚಾರವನ್ನು ಶಾರ್ದೂಲ್ ಠಾಕೂರ್ ಉಲ್ಟಾ ಮಾಡಿದರು. ಆರಂಭದಲ್ಲೇ ಅಭಿಷೇಕ್ ಶರ್ಮಾ (6) ಮತ್ತು ಇಶಾನ್ ಕಿಶನ್ (0) ಇಬ್ಬರನ್ನು ಔಟ್ ಮಾಡಿದರು. ನಂತರ ಒಂದಾದ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆದ್ ಮತ್ತು ನಿತೀಶ್‌ಕುಮಾರ್ ರೆಡ್ಡಿ ಹೈದರಾಬಾದ್ ತಂಡಕ್ಕೆ ನೆರವಾದರು.

ಟ್ರಾವಿಸ್ ಹೆಡ್ 28 ಎಸೆತದಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 47 ರನ್ ಬಾರಿಸಿ ವಿಕೆಟ್ ಕಳೆದುಕೊಂಡರೆ, ನಿತೀಶ್‌ಕುಮಾರ್ ಕೂಡ 32 ರನ್‌ಗಳಿಗೆ ಔಟಾದರು. ಹೆನ್ರಿಕ್ ಕ್ಲಾಸೆನ್ (26) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಸಂದರ್ಭದಲ್ಲಿ ಅನಿಕೇತ್ ವರ್ಮಾ ಕೇವಲ 13 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ನೆರವಿನಿಂದ 36 ರನ್ ಗಳಿಸಿ ಹೈದರಾಬಾದ್ ತಂಡದ ಗೌರವ ಉಳಿಸಿದರು. ನಾಯಕ ಪ್ಯಾಟ್ ಕಮ್ಮಿನ್ಸ್ ಕೇವಲ 4 ಎಸೆತಗಳಲ್ಲಿ 18 ಬಾರಿಸಿದರು. ಪರಿಣಾಮ 191 ರನ್ ಗಳಿಸಲು ಸಾಧ್ಯವಾಯಿತು.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆನ್‌ಸ್ಡೋಲ್ ಆಗಿದ್ದ ಶಾರ್ದೂಲ್ ಠಾಕೂರ್ ಲಕ್ನೋ ತಂಡಕ್ಕೆ ಬದಲಿ ಆಟಗಾರನಾಗಿ ಸೇರುವ ಮೂಲಕ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎಸ್‌ಆರ್‍‌ಹೆಚ್ ವಿರುದ್ಧವೂ ಶಾರ್ದೂಲ್ ಠಾಕೂರ್ ಪ್ರಮುಖ 4 ವಿಕೆಟ್ ಕಬಳಿಸಿ ರನ್ ವೇಗಕ್ಕೆ ಬ್ರೇಕ್ ಹಾಕಿದರು. ರವಿ ಬಿಷ್ಣೋಯ್, ಅವೇಶ್ ಖಾನ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಹೀಗಾಗಿ ಹೈದರಾಬಾದ್ 200 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

Story first published: Thursday, March 27, 2025, 21:36 [IST]
Other articles published on Mar 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+