IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸಂಭಾವ್ಯ 3 ನಿಯಮಗಳ ಬದಲಾವಣೆ?
2025ರ ಆವೃತ್ತಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಜ್ಜಾಗುತ್ತಿದ್ದಂತೆಯೇ, ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸಿಗಳು ಪ್ರತಿತಂತ್ರ ಮತ್ತು ಲೀಗ್‌ನ ಹೊಸ ಸ್ವರೂಪಕ್ಕೆ ಬದಲಾವಣೆಯಾಗಲು ಸಿದ್ಧತೆ ನಡೆಸಿವೆ.
ಇತ್ತೀಚಿಗೆ ಮುಂಬೈನಲ್ಲಿ ನಡೆದ ಬಿಸಿಸಿಐ ಮತ್ತು ಪ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಆಟಗಾರರ ಉಳಿಸಿಕೊಳ್ಳುವಿಕೆಯಿಂದ ಹಿಡಿದು ಮೆಗಾ ಹರಾಜಿನ ನಿಯಮಗಳವರೆಗೆ ಚರ್ಚೆಯಾಗಿದೆ.

ಮುಂಬರುವ 2025ರ ಐಪಿಎಲ್‌ಗಾಗಿ ನಡೆಯುವ ಮೆಗಾ ಹರಾಜಿಗೂ ಮುನ್ನ ನಿಯಮಗಳಲ್ಲಿ ಸಂಭಾವ್ಯ ಮೂರು ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು.
ಮೊದಲ ನಿಯಮ: ನಿವೃತ್ತ ಆಟಗಾರರ ಮರುವರ್ಗೀಕರಣ
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್, 2021ರಲ್ಲಿ ತಿರಸ್ಕರಿಸಿದ ನಿಯಮವನ್ನು ಮರುಪರಿಶೀಲಿಸಲು ಪ್ರಸ್ತಾಪಿಸಿದ್ದಾರೆ.
ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ಆಟಗಾರರಾಗಿ ಮರುವರ್ಗೀಕರಣ ಮಾಡುವಂತೆ ಕಾಶಿ ವಿಶ್ವನಾಥನ್ ಒತ್ತಾಯಿಸಿದ್ದಾರೆ.

ಈ ನಡೆಯು ಸಿಎಸ್‌ಕೆ ತಂಡದ ಅನುಭವಿ ಆಟಗಾರ ಎಂಎಸ್ ಧೋನಿಯನ್ನು ನಿಯಮಗಳ ಅಡಿಯಲ್ಲಿ ಉಳಿಸಿಕೊಳ್ಳುವ ತಂತ್ರವೆಂದು ಪರಿಗಣಿಸಲಾಗಿದೆ. ಸಿಎಸ್‌ಕೆ ತಮ್ಮ ಅನುಭವಿ ಆಟಗಾರನನ್ನು ಉಳಿಸಿಕೊಳ್ಳಲು ಹಿಂಬಾಗಿಲಿನ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಐಪಿಎಲ್ ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿವೆ.
ಎರಡನೇ ನಿಯಮ: ಮೂಲ ಬೆಲೆ ಕಡಿಮೆಗೊಳಿಸುವುದು
ಸ್ಟಾರ್ ಆಟಗಾರರು ಹೆಚ್ಚಿನ ಮೂಲ ಬೆಲೆಗಳಿಂದ ಹರಾಜಿನಲ್ಲಿ ಮಾರಾಟವಾಗದೆ ಉಳಿಯಬಹುದು ಎಂಬ ಉದ್ದೇಶದಿಂದ, ಐಪಿಎಲ್ ಸಿಇಒ ಹೇಮಂಗ್ ಅಮೀನ್ ಅವರು ಕ್ಯಾಪ್ಡ್ ಆಟಗಾರರ ಮೂಲ ಬೆಲೆಯನ್ನು ಕಡಿಮೆ ಮಾಡಲು ಅವಕಾಶ ನೀಡಲು ಸಲಹೆ ನೀಡಿದರು.
ಇದು ಮೆಗಾ ಹರಾಜಿನ ಅವಧಿಯನ್ನು ವಿಸ್ತರಿಸುವತ್ತ ಚರ್ಚೆ ಮಾಡುವಂತೆ ಆರಂಭಿಸಿದೆ. ಹಲವು ಫ್ರಾಂಚೈಸಿಗಳು ದೀರ್ಘಕಾಲದವರೆಗೆ ತಮ್ಮ ತಂಡದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅಗತ್ಯ ನಡೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕ ಪಾರ್ಥ್ ಜಿಂದಾಲ್ ಅವರು ಏಕಾಂಗಿಯಾಗಿ ಭಿನ್ನ ವ್ಯಕ್ತಪಡಿಸಿದರು. 2025ರಲ್ಲಿ ಮೆಗಾ ಹರಾಜಿನ ಅಗತ್ಯವನ್ನು ಪ್ರಶ್ನಿಸಿದ್ದಾರೆ.
ಮೂರನೇ ನಿಯಮ: ಉಳಿಸಿಕೊಳ್ಳುವ ಆಟಗಾರರ ಹೆಚ್ಚಳ
ಐಪಿಎಲ್‌ನಲ್ಲಿ ರೀಟೆನ್ಶನ್ ನಿಯಮವು ತಂಡಗಳ ಕಾರ್ಯತಂತ್ರದ ಯೋಜನೆಗಳ ಭಾಗವಾಗಿದೆ. ಪ್ರಸ್ತುತ ನೀತಿಯು ಮೂರು ಭಾರತೀಯ ಮತ್ತು ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡುತ್ತದೆ.
ಆದರೆ, ಕೆಲವು ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು 7 ಅಥವಾ 8ಕ್ಕೆ ಹೆಚ್ಚಿಸುವಂತೆ ಧ್ವನಿ ಎತ್ತಿದ್ದಾರೆ. ಈ ಬದಲಾವಣೆಯು ತಂಡಗಳನ್ನು ಗಮನಾರ್ಹವಾಗಿ ಬದಲಾಯಿಸಬಹುದು. ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡವನ್ನು ನಿರ್ಮಿಸಿಕೊಳ್ಳಲು ಹಾಗೂ ನಿರಂತರತೆ ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.a
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications