For Quick Alerts
ALLOW NOTIFICATIONS  
For Daily Alerts
 

IPL 2025: ಈ ಐದು ಆಟಗಾರರಿಗೆ ಇದೇ ಕೊನೆಯ ಐಪಿಎಲ್‌

ಭಾರತದಲ್ಲಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಈ ಲೀಗ್ ನಲ್ಲಿ ವಿಶ್ವದ ಹಾಗೂ ಭಾರತದ ಸ್ಟಾರ್ ಆಟಗಾರರು ಆಡುತ್ತಿದ್ದಾರೆ. ಈಗಾಗಲೇ ಈ ಲೀಗ್ ನಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನ ನೀಡಿರುವ ಅನುಭವಿಗಳು ಅಭಿಮಾನಿಗಳ ಚಿತ್ತ ಕದ್ದಿದ್ದಾರೆ. ಈ ಬಾರಿಯ ಐಪಿಎಲ್ ವೇಳೆ ಅನುಭವಿಗಳ ಅನುಭವ ತಂಡಕ್ಕೆ ವರವಾಗುತ್ತಿದೆ. ಪ್ರತಿ ಬಾರಿ ಐಪಿಎಲ್ ಸಮಯದಲ್ಲಿ ಹಿರಿಯ ಆಟಗಾರರ ಮೇಲೆ ಒಂದು ಕಣ್ಣು ನೆಟ್ಟಿರುತ್ತದೆ. ಇದಕ್ಕೆ ಕಾರಣ ಈ ಅನುಭವಿಗಳು ಇನ್ನು ಎಷ್ಟು ವರ್ಷ ಆಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಈ ಬಾರಿಯ ಐಪಿಎಲ್ ವೇಳೆಯೂ ಇಂತಹದ್ದೇ ಪ್ರಶ್ನೆ ಎದ್ದಿದೆ. ಈ ಬಾರಿಯ ಐಪಿಎಲ್ ಆಡುತ್ತಿರುವ ಅನುಭವಿಗಳಲ್ಲಿ ಎಷ್ಟು ಆಟಗಾರರು ಈ ಬಾರಿ ಐಪಿಎಲ್ ಬಳಿಕ ನಿವೃತ್ತಿ ಪಡೆಯಬಹುದು ಎಂಬ ಚರ್ಚೆ ಆರಂಭವಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಹಲವು ಅನುಭವಿ ಹಾಗೂ ಹಿರಿಯ ಆಟಗಾರರು ಕಣಕ್ಕೆ ಇಳಿದಿದ್ದು, ಐದು ಆಟಗಾರರಿಗೆ ಇದು ಕೊನೆಯ ಐಪಿಎಲ್‌ ಆಗಬಹುದು ಎಂದು ಅಂದಾಜಿಸಲಾಗಿದೆ.

IPL 2025 These 5 Senior Players Might Retire After This Season

ಫಾಫ್‌ ಡುಪ್ಲೇಸಿಸ್‌

41 ವರ್ಷಗಳ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಫ್ ಡುಪ್ಲೇಸಿಸ್ ಅವರಿಗೆ ಇದು ಕೊನೆಯ ಐಪಿಎಲ್‌ ಆಗಬಹುದು ಎಂದು ಅಂದಾಜಿಸಲಾಗಿದೆ. ಈಗ ಫಾಫ್‌ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಫಾಫ್‌ ಆರ್‌ಸಿಬಿ ಪರ ನಾಯಕನಾಗಿ ಕಾಣಿಸಿಕೊಂಡಿದ್ದರು. ಒಟ್ಟಾರೆ ಫಾಫ್‌ 152 ಪಂದ್ಯಗಳಲ್ಲಿ 4739 ರನ್‌ ಸಿಡಿಸಿದ್ದಾರೆ. ಇವರು 38 ಅರ್ಧಶತಕ ಸಿಡಿಸಿದ್ದಾರೆ.

ಇಶಾಂತ್ ಶರ್ಮಾ

ಭಾರತದ ಅನುಭವಿ ವೇಗದ ಬೌಲರ್‌ ಇಶಾಂತ್‌ ಶರ್ಮಾ ಈಗ 37 ವರ್ಷ. ಸದ್ಯ ಇವರು ಗುಜರಾತ್ ಟೈಟಾನ್ಸ್ ಪರ 18ನೇ ಆವೃತ್ತಿಯಲ್ಲಿ ಗುಜರಾತ್‌ ಟೈಟನ್ಸ್‌ ಪರ ವೇಗದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಇವರು ಆಡಿದ 113 ಪಂದ್ಯಗಳಲ್ಲಿ 94 ವಿಕೆಟ್‌ ಪಡೆದಿದ್ದಾರೆ.

ಗ್ಲೇನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಟಿ20 ಕ್ರಿಕೆಟ್‌ನ ಅತ್ಯಂತ ಪರಿಣಾಮ ಕಾರಿ ಬ್ಯಾಟರ್‌ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಇವರು ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 141 ಪಂದ್ಯಗಳಲ್ಲಿ 2819 ರನ್ ಸಿಡಿಸಿದ್ದು, 41 ವಿಕೆಟ್‌ ಪಡೆದಿದ್ದಾರೆ. ಕಳೆದ ಋತುವಿನಲ್ಲಿ ಅವರು 10 ಪಂದ್ಯಗಳಲ್ಲಿ ಕೇವಲ 52 ರನ್ ಗಳಿಸಲು ಸಾಧ್ಯವಾಗಿದ್ದು, ನಿರಾಸೆ ಅನುಭವಿಸಿದ್ದಾರೆ. ಇನ್ನು ಈ ಋತುವಿನಲ್ಲೂ ಇವರು ಬ್ಯಾಟ್‌ ಅಬ್ಬರಿಸುತ್ತಿಲ್ಲ.

ಮಹೇಂದ್ರ ಸಿಂಗ್ ಧೋನಿ

2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಾಹಿ ಈಗ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇವರು 18 ಆವೃತ್ತಿಗಳನ್ನು ಆಡಿದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಮಾಹಿ ಈ ವರೆಗೆ ಐಪಿಎಲ್‌ನಲ್ಲಿ 276 ಪಂದ್ಯಗಳನ್ನು ಆಡಿದ್ದು, 39ರ ಸರಾಸರಿಯಲ್ಲಿ 5423 ರನ್‌ ಕಲೆಹಾಕಿದ್ದಾರೆ. ಇನ್ನು ವಿಕೆಟ್‌ ಕೀಪರ್‌ ಆಗಿ 200ಕ್ಕೂ ಹೆಚ್ಚು ವಿಕೆಟ್‌ ಕಬಳಿಸಿದ್ದಾರೆ.

ಆರ್‌ ಅಶ್ವಿನ್‌

ಟೀಮ್ ಇಂಡಿಯಾದಿಂದ ನಿವೃತ್ತಿಯನ್ನು ಇತ್ತೀಚಿಗೆ ಪಡೆದಿರುವ ರವಿಚಂದ್ರನ್‌ ಅಶ್ವಿನ್‌, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಇವರು ಕಮಾಲ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಆಡಿದ 220 ಪಂದ್ಯಗಳಲ್ಲಿ 185 ವಿಕೆಟ್‌ ಪಡೆದಿದ್ದು, 820 ರನ್‌ ಸಿಡಿಸಿದ್ದಾರೆ. ಸದ್ಯ ಇವರಿಗೆ 38 ವರ್ಷ ವಯಸ್ಸಾಗಿದ್ದು, ಇವರು ಮುಂದಿನ ಐಪಿಎಲ್‌ನಲ್ಲಿ ಆಡುವುದು ಡೌಟ್ ಎಂದು ಅಂದಾಜಿಸಲಾಗುತ್ತಿದೆ.

Story first published: Sunday, May 11, 2025, 14:22 [IST]
Other articles published on May 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+