For Quick Alerts
ALLOW NOTIFICATIONS  
For Daily Alerts
 

IPL 2025: ಉತ್ತಮ ಆರಂಭ ಪಡೆಯದ ಮೂವರು ಸ್ಟಾರ್ ಸ್ಪಿನ್ನರ್ಸ್

ಟಿ20 ಕ್ರಿಕೆಟ್‌ನಲ್ಲಿ ಸ್ಪಿನ್ನರ್‍‌ಗಳ ಪಾತ್ರ ಬಹಳ ಮುಖ್ಯ. ಐಪಿಎಲ್ 2025 ರಲ್ಲಿ ಹಲವು ಫ್ರಾಂಚೈಸಿ ತಂಡಗಳು ಸ್ಪಿನ್ನರ್‍‌ಗಳ ಮೇಲೆ ಹೆಚ್ಚಿನ ವಿಶ್ವಾಸವನ್ನು ತೋರಿಸಿವೆ. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಕೆಲವು ಫ್ರಾಂಚೈಸಿಗಳು ಸ್ಪಿನ್ನರ್‍‌ಗಳನ್ನು ಬಿಡ್ ಮಾಡಲು ಭಾರಿ ಮೊತ್ತವನ್ನು ಖರ್ಚು ಮಾಡಿದರೆ, ಇನ್ನು ಕೆಲವು ಫ್ರಾಂಚೈಸಿ ತಂಡಗಳು ಹೆಚ್ಚಿನ ಮೊತ್ತಕ್ಕೆ ಸ್ಪಿನ್ನರ್‍‌ಗಳನ್ನು ಉಳಿಸಿಕೊಂಡಿವೆ. ಈ ಸ್ಟಾರ್ ಸ್ಪಿನ್ನರ್‍‌ಗಳು ಐಪಿಎಲ್ 2025 ರಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ.

ಐಪಿಎಲ್ 2025 ರಲ್ಲಿ ಈ ಸ್ಟಾರ್ ಸ್ಪಿನ್ನರ್‍‌ಗಳಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಿತ್ತು. ಆದರೆ ಇದುವರೆಗೂ ಈ ಸ್ಟಾರ್ ಸ್ಪಿನ್ನರ್‍‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಅಂತಹ ಮೂವರು ಸ್ಪಿನ್ನರ್‍‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

IPL 2025 Three star spinners who didn t get off to a good start

ರಶೀದ್ ಖಾನ್

ಗುಜರಾತ್ ಟೈಟಾನ್ಸ್ ಐಪಿಎಲ್ 2025 ರ ಸೀಸನ್‌ಗಾಗಿ ಅಫ್ಘಾನಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರಿಗೆ 18 ರೂ. ನೀಡಿ ಉಳಿಸಿಕೊಂಡಿತ್ತು. ಆದರೆ, ಅವರು ಗುಜರಾತ್ ಟೈಟಾನ್ಸ್ ತಂಡವನ್ನು ನಿರಾಸೆಗೊಳಿಸಿದ್ದಾರೆ. ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಆತ್ಯುತ್ತಮ ಸ್ಪಿನ್ನರ್‍‌ಗಳಲ್ಲಿ ರಶೀದ್ ಖಾನ್ ಕೂಡ ಒಬ್ಬರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡಕ್ಕೆ ವಿಕೆಟ್ ಟೇಕರ್ ಬೌಲರ್ ಎನಿಸಿಕೊಳ್ಳಬೇಕಿತ್ತು. ಆದರೆ ಅವರು ವಿಕೆಟ್ ಪಡೆಯಲು ಪರದಾಟ ನಡೆಸುತ್ತಿದ್ದಾರೆ.

ರವಿ ಬಿಷ್ಣೋಯಿ

ಟೀಮ್ ಇಂಡಿಯಾ ಸ್ಟಾರ್ ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಐಪಿಎಲ್‌ನಲ್ಲಿ ಪರಿಣಾಮಕಾರಿಯಾಗಿದ್ದಾರೆ. ಐಪಿಎಲ್ 2024 ರಲ್ಲಿ ಅವರು ಆಡಿದ 14 ಪಂದ್ಯಗಳಲ್ಲಿ ಕೇವಲ 10 ವಿಕೆಟ್‌ಗಳಬ್ಬು ಪಡೆದಿದ್ದರೂ ಸಹ, ಲಕ್ನೋ ಸೂಪರ್ ಜೈಂಟ್ಸ್ ತಂಡ ಅವರನ್ನು 11 ಕೋಟಿ ರೂ.ಗಳಿಗೆ ಉಳಿಸಿಕೊಂಡಿತ್ತು. ಆದಾಗ್ಯೂ ಅವರು ಐಪಿಎಲ್ 2025 ರಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಮೂರು ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. ಜೊತೆಗೆ ಹೆಚ್ಚು ರನ್‌ಗಳನ್ನು ನೀಡುತ್ತಿರುವುದು ಲಕ್ನೋ ತಂಡಕ್ಕೆ ಟೆಕ್ಷನ್ ಹೆಚ್ಚಿಸಿದೆ.

ರವಿಚಂದ್ರನ್ ಅಶ್ವಿನ್

ಭಾರತ ತಂಡದ ಮಾಜಿ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 9.75 ಕೋಟಿ ರೂ. ಗೆ ಬಿಡ್ ಮಾಡಿತ್ತು. ಆದರೆ ಅವರ ಪ್ರದರ್ಶನ ಇದುವರೆಗೆ ಹೇಳಿಕೊಳ್ಳುವಂತಿಲ್ಲ. ಸಿಎಸ್‌ಕೆ ಪರ ಅಶ್ವಿನ್ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ 3 ವಿಕೆಟ್ ಪಡೆದಿದ್ದಾರೆ. ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿತೀಶ್ ರಾಣಾ ಅವರು ಅಶ್ವಿನ್ ಓವರ್‍‌ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ರನ್ ಗಳಿಸಿದ್ದರು. ಇದಾದ ನಂತರ ಅವರ ಪ್ರದರ್ಶನದ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ.

Story first published: Thursday, April 3, 2025, 18:57 [IST]
Other articles published on Apr 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+