IPL 2025: ಐಪಿಎಲ್ ಮಾಲೀಕರಿಗೆ ರಿಟೆನ್ಷನ್ ಲೀಸ್ಟ್ ನೀಡಲು ಇಂದೇ ಡೆಡ್ ಲೈನ್
ಎಲ್ಲ ಕ್ರಿಕೆಟ್ ಅಭಿಮಾನಿಗಳ ಚಿತ್ತ ಈಗ ಬಿಸಿಸಿಐನತ್ತ ನೆಟ್ಟಿದೆ. ಏಕೆಂದರೆ ಐಪಿಎಲ್ ಮಾಲೀಕರು ತಮ್ಮ ರಿಟೇನ್ಷನ್ ಲೀಸ್ಟ್ ನೀಡಲು ಇಂದು ಕೊನೆಯ ದಿನ. ತಾವು ಉಳಿಸಿಕೊಂಡ ಹಾಗೂ ತಾವು ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್‌ನ 10 ತಂಡಗಳ ಮಾಲೀಕರು ಅಕ್ಟೋಬರ್ 31 ರೊಳಗೆ ನೀಡಬೇಕಿದೆ.
ಐಪಿಎಲ್ ರಿಟೇನ್ಷನ್ ಮೇಲೆ ಎಲ್ಲರೂ ಹದ್ದಿನ ಕಣ್ಣು ಇಟ್ಟಿದ್ದಾರೆ. ಯಾವ ತಂಡ ಯಾರನ್ನು ಉಳಿಸಿಕೊಂಡಿದೆ. ಯಾರನ್ನು ಕೈ ಬಿಟ್ಟಿದೆ ಎಂಬ ಪರ್ಫೆಕ್ಟ್ ಪಿಕ್ಚರ್ ಇಂದು ಸಿಗಲಿದೆ. ಅಂದಹಾಗೆ ಬಿಸಿಸಿಐ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ರಿಟೇನ್ಷನ್ ಪಾಲಿಸಿ ಕೆಲವು ತಂಡಗಳಿಗೆ ಕಬ್ಬಿಣದ ಕಡಲೆ ಆಗಿದೆ. ತಂಡದಲ್ಲಿ ಬಹುತೇಕ ಸ್ಟಾರ್ ಆಟಗಾರರು ಇದ್ದು ಕೇವಲ ಆರು ಜನರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.

ಆಟಗಾರರ ಆಯ್ಕೆ ಹೇಗಿರಲಿದೆ?
ಇನ್ನು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಈಗಾಗಲೇ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಅಂದರೆ ಆರು ಜನರನ್ನು ಉಳಿಸಿಕೊಳ್ಳುವ ತಂಡದಲ್ಲಿ ಗರಿಷ್ಠ ಇಬ್ಬರು ವಿದೇಶಿ ಆಟಗಾರನಿಗೆ ಉಳಿಸಿಕೊಳ್ಳುವ ಅವಕಾಶ ಇದ್ದು, ಇಬ್ಬರು ಅನ್ ಕ್ಯಾಪ್ಡ್ ಪ್ಲೇಯರ್‌ಗಳನ್ನು ತಂಡ ಉಳಿಸಿಕೊಳ್ಳಬಹುದು. ಅಲ್ಲದೆ ಮಾಲೀಕರು ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶದ ಲಾಭವನ್ನು ಸಹ ಐಪಿಎಲ್ ಹರಾಜಿನಲ್ಲಿ ಪಡೆಯಬಹುದು. ಆದರೆ ಅವರು ತಂಡದಲ್ಲಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಆರ್‌ಟಿಎಂ ನಿರ್ಧಾರವಾಗಲಿದೆ.
ಒಬ್ಬ ಪ್ಲೇಯರ್‌ಗೆ ಎಷ್ಟು ಹಣ?
ಬಿಸಿಸಿಐ ಆಟಗಾರರಿಗೆ ಎಷ್ಟು ಹಣವನ್ನು ನೀಡಬೇಕು ಎಂಬುದನ್ನು ಸಹ ಸ್ಪಷ್ಟವಾಗಿದೆ ತಿಳಿಸಿದೆ. ಮೊದಲ ಆಯ್ಕೆಯ ಆಟಗಾರನಿಗೆ 18 ಕೋಟಿ ರೂ. ನೀಡಬಹುದ. ಅಲ್ಲದೆ ಎರಡನೇ ಆಯ್ಕೆಯ ಆಟಗಾರನಿಗೆ 14 ಹಾಗೂ ಮೂರನೇ ಆಯ್ಕೆಯ ಆಟಗಾರನಿಗೆ 11 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅಲ್ಲದೆ ಅನ್ ಕ್ಯಾಪ್ಡ್ ಆಟಗಾರರಿಗೆ 4 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ.

ಪರ್ಸ್ ಸೈಜ್ ಎಷ್ಟು?
ಈ ಬಾರಿ ಬಿಸಿಸಿಐ ಪರ್ಸ್ ಸೈಜ್ ಇನ್ ಕ್ರೀಸ್ ಮಾಡಿದೆ. ಅಂದಹಾಗೆ ಈ ಬಾರಿ ಮಾಲೀಕರು 120 ಕೋಟಿ ರೂಪಾಯಿಯನ್ನು ತಮ್ಮ ಪರ್ಸ್‌ನಲ್ಲಿ ಹೊಂದಿರುತ್ತಾರೆ. ಅಲ್ಲದೆ ಈ ಹಣದ ಮೂಲಕವೇ ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರಿಗೆ ಗಾಳ ಹಾಕಲಾಗುತ್ತದೆ. ಇನ್ನು ಒಂದು ತಂಡ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶ ನೀಡಲಾಗಿದೆ.
ತಂಡಗಳು ತಮ್ಮ ತಂಡದಲ್ಲಿರುವ ಆಟಗಾರರನ್ನು ಹರಾಜು ಅಂಗಳಕ್ಕೆ ಬಿಟ್ಟು ಈಗ ಬಿಸಿಸಿಐ ಸೂಚಿಸಿದ ಬೆಲೆಗಿಂತ ಕಡಿಮೆ ಬೆಲೆ ನೀಡಿ ತಮ್ಮ ತಂಡದಲ್ಲಿಯೇ ಉಳಿಸಿಕೊಳ್ಳಲು ಪ್ಲ್ಯಾನ್ ನಡೆಸಿದ್ದಾರೆ. ಯಾವ ತಂಡ ಯಾರನ್ನು ಕೈ ಬಿಟ್ಟಿದೆ. ಯಾರಿಗೆ ರೆಡ್ ಕಾರ್ಪೆಟ್ ಹಾಕಿದೆ ಎಂಬೆಲ್ಲಾ ಪ್ರಶ್ನೆಗಳಿಗೆ ಇಂದು ರಾತ್ರಿಯ ವೇಳೆಗೆ ಉತ್ತರ ಸಿಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications