For Quick Alerts
ALLOW NOTIFICATIONS  
For Daily Alerts
 

RCB IPL 2025: ಹರಾಜಿನಲ್ಲಿ ಈ ವೇಗಿಗಳೇ ಆರ್‌ಸಿಬಿ ಫಸ್ಟ್‌ ಚಾಯ್ಸ್‌

ಐಪಿಎಲ್‌ ರಿಟೇನ್ಷನ್‌ ಲೀಸ್ಟ್‌ನ್ನು ಮಾಲೀಕರು ನೀಡಿ ಆಗಿದೆ. ಈಗ ಐಪಿಎಲ್ ಮೆಗಾ ಹರಾಜಿನಲ್ಲಿ ಇರುವ ಪ್ಲೇಯರ್ಸ್‌ಗಳ ಲೀಸ್ಟ್‌ಗಳನ್ನು ಮಾಡುವ ಕಾರ್ಯವನ್ನು ಬಿಸಿಸಿಐ ಮಾಡಬೇಕಿದೆ. ಅಲ್ಲದೆ ಮೆಗಾ ಹರಾಜು ನಡೆಯುವ ಸ್ಥಳ ಹಾಗೂ ದಿನಂಕಗಳು ಇನ್ನು ಫೈನಲ್ ಆಗಬೇಕಿದೆ. ಈ ವೇಳೆ ಐಪಿಎಲ್‌ ಫ್ರಾಂಚೈಸಿಗಳು ಈ ಬಾರಿಯ ಹರಾಜಿನಲ್ಲಿ ಯಾವ ಪ್ಲೇಯರ್‌ಗೆ ಗಾಳ ಹಾಕಬೇಕು ಎಂಬ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಆರ್‌ಸಿಬಿ ಸಹ ಭರವಸೆಯ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಮೊದಲ ಆಯ್ಕೆಯ ಆಟಗಾರನಾಗಿ ಉಳಿಸಿಕೊಂಡಿದ್ದು, ರಜತ್‌ ಪಟೀದಾರ್ ಅವರನ್ನು ಮೂರನೇ ಆಯ್ಕೆಯ ಆಟಗಾನಾಗಿ ಉಳಿಸಿಕೊಂಡಿದೆ. ಅಲ್ಲದೆ ಅನ್‌ ಕ್ಯಾಪ್ಡ್ ಪ್ಲೇಯರ್‌ ಯಶ್ ದಯಾಳ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ. ಇನ್ನು ಉಳಿದ ಸ್ಥಾನಗಳಿಗೆ ಐಪಿಎಲ್‌ ಮೆಗಾ ಹರಾಜಿನಲ್ಲಿ ಆಟಗಾರರ ಹುಡಕಾಟ ನಡೆಯಲಿದೆ.

IPL 2025 Top 3 Fast Bowlers RCB Could Target in the Mega Auction

ಆರ್‌ಸಿಬಿ ಕಳೆದ ಕೆಲವು ಆವೃತ್ತಿಗಳಲ್ಲಿ ತಂಡದ ಚಿಂತೆಯನ್ನು ಹೆಚ್ಚಿಸಿದ ಬೌಲಿಂಗ್ ವಿಭಾಗವನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಮೂವರು ಸ್ಟಾರ್ ವೇಗಿಗಳಿಗೆ ತಂಡದ ಜೆರ್ಸಿ ನೀಡಲು ಸಿದ್ಧತೆ ನಡೆಸಿದೆ.

ಬಿಗ್ ಮ್ಯಾಚ್‌ ಪ್ಲೇಯರ್‌

ಐಪಿಎಲ್‌ 2024ರ ಚಾಂಪಿಯನ್‌ ತಂಡದ ಸದಸ್ಯ ಮಿಚೆಲ್ ಸ್ಟಾರ್ಕ್‌ ಅವರನ್ನು ಕೆಕೆಆರ್‌ ರಿಲೀಸ್ ಮಾಡಿದೆ. ವಿಶ್ವದ ಖ್ಯಾತ ಬೌಲರ್‌ಗೆ ಗಾಳ ಹಾಕಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಇವರು ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ರನ್‌ ವೇಗಕ್ಕೆ ಕಡಿವಾಣ ಹಾಕಬಲ್ಲರು. ಆರ್‌ಸಿಬಿ ತಂಡದಲ್ಲಿ ಈ ಮೊದಲೇ ಸ್ಟಾರ್ಕ್‌ ಇದ್ದಿದ್ದರಿಂದ ತಂಡದ ಬಗ್ಗೆ ಚೆನ್ನಾಗಿ ಅರಿವಿದೆ.

IPL 2025 Top 3 Fast Bowlers RCB Could Target in the Mega Auction

ಮಿಚೆಲ್‌ ಸ್ಟಾರ್ಕ್ ಒಬ್ಬ ಬಿಗ್ ಮ್ಯಾಚ್‌ ಪ್ಲೇಯರ್‌. ಇವರನ್ನು ಕೊಂಡರೆ ಆರ್‌ಸಿಬಿಗೆ ಮಹತ್ವದ ಪಂದ್ಯಗಳಲ್ಲಿ ನೆರವಾಗುತ್ತದೆ ಎಂಬ ಲೆಕ್ಕಾಚಾರ ಆರ್‌ಸಿಬಿಯದ್ದಾಗಿದೆ. ಅಲ್ಲದೆ ಕೆಲವು ಪಂದ್ಯಗಳಲ್ಲಿ ಸ್ಟಾರ್ಕ್‌ ತಮ್ಮ ಬಿಗ್‌ ಹಿಟ್ಟಿಂಗ್ ಶಾಟ್‌ಗಳ ಮೂಲಕವೂ ನೆರವಾಗಬಲ್ಲರು.

ವಿಶ್ವ ವಿಜೇತ ತಂಡದ ಬೌಲರ್

ಟೀಮ್ ಇಂಡಿಯಾದ ಯುವ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್ ಆರ್‌ಸಿಬಿಯ ಟಾರ್ಗೆಟ್‌ ಬಕೆಟ್‌ನಲ್ಲಿರುವ ಎರಡನೇ ಪೇಸ್‌ ಬೌಲರ್. ಇವರು ಡೆತ್‌ ಓವರ್‌ಗಳಲ್ಲಿ ಬೌಲ್‌ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅರ್ಷದೀಪ್‌ ಅವರು ತಮ್ಮಲ್ಲಿರುವ ಕ್ಷಮತೆಯನ್ನು ಟಿ20 ವಿಶ್ವಕಪ್‌ ವೇಳೆ ತೋರಿಸಿದ್ದರಿಂದ ಇವರಿಗೆ ಆರ್‌ಸಿಬಿ ಬಾಜಿ ಕಟ್ಟಬಹುದು. ಇವರು ಆರ್‌ಸಿಬಿ ತಂಡವನ್ನು ಸೇರಿದರೆ, ಬೌಲಿಂಗ್ ವಿಭಾಗ ಬಲವಾಗುತ್ತದೆ. ಇವರನ್ನು ಪಂಜಾಬ್‌ ಹರಾಜಿಗೆ ಬಿಟ್ಟಿದೆ.

IPL 2025 Top 3 Fast Bowlers RCB Could Target in the Mega Auction

ಕೆಕೆಆರ್‌ ಬೌಲರ್‌ ಮೇಲೆ ಕಣ್ಣು

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದಿಂದ ಕೈ ಬಿಡಲಾಗಿರುವ ವೈಭವ್ ಆರೋರ್‌ ಅವರಿಗೆ ಆರ್‌ಸಿಬಿ ಗಾಳ ಹಾಕುವ ಸಾಧ್ಯತೆ ಹೆಚ್ಚಿದೆ. ಇವರು ಹೊಸ ಚೆಂಡಿನಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಆರ್‌ಸಿಬಿ ಪಂದ್ಯದ ಯಾವುದೇ ಹಂತದಲ್ಲಾದರೂ ಬೌಲ್ ಮಾಡಬಲ್ಲ ಬೌಲರ್‌ ಹುಡುಕಾಟ ನಡೆಸಲಿದೆ. ಆರ್‌ಸಿಬಿ ಈ ಪ್ಲೇಯರ್‌ ಅವರನ್ನು ಟಾರ್ಗೆಟ್‌ ಮಾಡಿ ತನ್ನ ಬೌಲಿಂಗ್‌ ವಿಭಾಗವನ್ನು ಸಮನಾಗಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ.

Story first published: Wednesday, November 6, 2024, 8:45 [IST]
Other articles published on Nov 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+