IPL 2025: ಕೆಕೆಆರ್ ವಿರುದ್ದದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಎರಡು ಸವಾಲು
ಐಪಿಎಲ್ 2025ರ ಟೂರ್ನಿ ಇಂದು ಅಂದರೆ, ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಹಣಾಹಣಿಯೊಂದಿಗೆ ಪ್ರಾರಂಭವಾಗಲಿದೆ. ಉಭಯ ತಂಡಗಳು ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಐಪಿಎಲ್ 2020 ರಿಂದ ಉಭಯ ತಂಡಗಳ ನಡುವೆ ನಡೆದಿರುವ 8 ಪಂದ್ಯಗಳಲ್ಲಿ ಕೆಕೆಆರ್ 6 ರಲ್ಲಿ ಗೆದ್ದರೆ, ಆರ್‍ಸಿಬಿ 2 ರಲ್ಲಿ ಗೆಲುವು ಕಂಡಿದೆ. ಈ ಹೈವೋಲ್ಟೇಜ್ ಉದ್ಘಾಟನಾ ಪಂದ್ಯದಲ್ಲಿ ಆರ್‍ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಕೆಕೆಆರ್ ವಿರುದ್ಧದ ಪಂದ್ಯಕ್ಕೂ ವಿರಾಟ್ ಕೊಹ್ಲಿ ಅವರಿಗೆ ಎರಡು ಸವಾಲುಗಳು ಎದುರಾಗಿವೆ. ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಸ್ಪಿನ್ ಅಸ್ತ್ರಗಳಾಗಿದ್ದಾರೆ. ಹಾಗೆಯೇ ಆರ್‌ಸಿಬಿ ಪರ ಬಿಗ್ ಸ್ಕೋರ್ ಕಲೆ ಹಾಕುವ ಜವಾಬ್ದಾರಿ ವಿರಾಟ್ ಕೊಹ್ಲಿ ಅವರ ಹೆಗಲ ಮೇಲಿದೆ. ಆದರೆ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ವಿರುದ್ಧ ಕೊಹ್ಲಿ ಹೇಗೆ ಆಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ಹಲವು ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ. ಅಷ್ಟೊಂದು ಸುಲಭವಾಗಿ ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ರನ್ ಗಳಿಸಲು ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಅವರು ಸ್ಪಿನ್ನರ್ಸ್ ವಿರುದ್ಧ ರನ್ ಗಳಿಸಲು ಪರದಾಡಿದ್ದಾರೆ. ಈಗ ಕೆಕೆಆರ್ ಸ್ಪಿನ್ನರ್ಸ್ ಎದುರಿಸುವುದು ಕೊಹ್ಲಿಗೆ ಸವಾಲಾಗಿದೆ. ಇಬ್ಬರು ಟಾಪ್ ಕ್ವಾಲಿಟಿ ಸ್ಪಿನ್ನರ್ಸ್ ಅನ್ನು ಎದುರಿಸಬೇಕಾಗಿದೆ.
ಕೆಕೆಆರ್ ಮಿಸ್ಟರಿ ವರುಣ್ ಚಕ್ರವರ್ತಿ ವಿರುದ್ಧ ವಿರಾಟ್ ಕೊಹ್ಲಿ 7 ಇನ್ನಿಂಗ್ಸ್‌ಗಳಲ್ಲಿ 39 ಎಸೆತಗಳನ್ನು ಎದುರಿಸಿ 40 ರನ್ ಗಳಿಸಿದ್ದಾರೆ. ಒಮ್ಮೆ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಔಟ್ ಆಗಿದ್ದಾರೆ. ಇನ್ನೂ ಸುನಿಲ್ ನರೈನ್ ವಿರುದ್ಧ ಕೊಹ್ಲಿ ಆಡಿರುವ 20 ಇನ್ನಿಂಗ್ಸ್‌ಗಳಲ್ಲಿ 157 ಎಸೆತಗಳನ್ನು ಎದುರಿಸಿ 162 ರನ್ ಗಳಿಸಿದ್ದಾರೆ. ಕೊಹ್ಲಿ 4 ಬಾರಿ ಸುನಿಲ್ ನರೈನ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪವರ್ ಪ್ಲೇನಲ್ಲಿ ವಿರಾಟ್ ಕೊಹ್ಲಿ ವಿರುದ್ಧ ತನ್ನ ಸ್ಪಿನ್ ದಾಳಿಯನ್ನು ಪ್ರಯತ್ನಿಸಬಹುದು. ಅನ್ರಿಚ್ ನಾರ್ಟ್ಜೆ ವಿರುದ್ಧವೂ ವಿರಾಟ್ ಕೊಹ್ಲಿ ರನ್ ಗಳಿಸಲು ಸಾಕಷ್ಟು ಹೆಣಗಾಡಿದ್ದಾರೆ. ವಿರಾಟ್ ಕೊಹ್ಲಿ ಅನ್ರಿಚ್ ನಾರ್ಟ್ಜೆ ಎಸೆದ 42 ಎಸೆತಗಳಲ್ಲಿ 41 ರನ್ ಗಳಿಸಿದ್ದಾರೆ. ಅನ್ರಿಚ್ ನಾರ್ಟ್ಜೆ 9 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿಯನ್ನು ಎರಡು ಬಾರಿ ಔಟ್ ಮಾಡಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಅವರಿಗೆ ಕೆಕೆಆರ್ ಪಂದ್ಯಕ್ಕೂ ಮುನ್ನ ಎರಡು ಸವಾಲುಗಳು ಎದುರಾಗಿವೆ.
ಭುವಿ ದಾಖಲೆ
ಕೆಕೆಆರ್ ಸ್ಟಾರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಅಜಿಂಕ್ಯ ರಹಾನೆ ಅವರು ಆರ್‍ಸಿಬಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಬಗ್ಗೆ ಎಚ್ಚರದಿಂದಿರಬೇಕು. ಐಪಿಎಲ್ ಪವರ್‌ಪ್ಲೇನಲ್ಲಿ ಭುವನೇಶ್ವರ್ ಕುಮಾರ್ ಅತಿ ಹೆಚ್ಚು ವಿಕೆಟ್‌ಗಳನ್ನು (72) ಪಡೆದಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಅತಿ ಹೆಚ್ಚು ವಿಕೆಟ್‌ಗಳನ್ನು (32) ಪಡೆದ ಬೌಲರ್ ಕೂಡ ಆಗಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ ಅವರು 10 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂತಹ ಅದ್ಭುತ ಅಂಕಿ-ಅಂಶ ಹೊಂದಿರುವ ಭುವನೇಶ್ವರ್ ಕುಮಾರ್ ಅವರು ಕೆಕೆಆರ್ ತಂಡಕ್ಕೆ ಮಾರಕವಾಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications