For Quick Alerts
ALLOW NOTIFICATIONS  
For Daily Alerts
 

IPL 2025: ಎಸ್‌ಆರ್‌ಹೆಚ್‌ನ ಪ್ಲೇಯಿಂಗ್-11 ರಿಂದ ಕೈಬಿಡಬಹುದಾದ 2 ಆಟಗಾರರು

ಐಪಿಎಲ್ 2025 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಅಭಿಮಾನಿಗಳು ನಿರೀಕ್ಷಿಸಿದ ರೀತಿಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 80 ರನ್‌ಗಳಿಂದ ಸೋಲು ಕಂಡಿತು. ಇದು ಐಪಿಎಲ್ 2025 ರಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆಗೆ ಎದುರಾದ ಅತಿದೊಡ್ಡ ಸೋಲು.

ಐಪಿಎಲ್ 2025 ರಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ಸನ್‌ ರೈಸರ್ಸ್ ಹೈದರಾಬಾದ್ ಗೆಲುವಿನ ಹುಡುಕಾಟದಲ್ಲಿದೆ. ತಂಡಕ್ಕೆ ಆಸರೆಯಾಗಬೇಕಿದ್ದ ಟಾಪ್ ಆರ್ಡರ್ ಬ್ಯಾಟರ್‍‌ಗಳು ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾಗುತ್ತಿದ್ದಾರೆ.

IPL 2025 Two Players Who Could Be Dropped From Sunrisers Hyderabad Playing-11

ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಟಡರ್ಸ್ ತಂಡ ನಿಗದಿತ 20 ಓವರ್‍‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಕೇವಲ 16.5 ಓವರ್‍‌ಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡದ ಬಹುತೇಕ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಈಗ ಏಪ್ರಿಲ್ 6 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಸನ್‌ ರೈಸರ್ಸ್ ಹೈದರಾಬಾದ್ ತಂಡದ ಮುಂದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಯಿದೆ. ಸನ್‌ ರೈಸರ್ಸ್ ಹೈದರಾಬಾದ್ ತನ್ನ ಆಡುವ ಹನ್ನೊಂದರ ಬಳಗದಿಂದ ಕೈ ಬಿಡಬಹುದಾದ ಆ ಇಬ್ಬರು ಆಟಗಾರರು ಯಾರು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಸಿಮರ್‍‌ಜೀತ್ ಸಿಂಗ್

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿತು. ಶ್ರೀಲಂಕಾ ಕಾಮಿಂಡು ಮೆಂಡಿಸ್ ಜೊತೆಗೆ ಸಿಮರ್‍‌ಜೀತ್‌ ಸಿಂಗ್ ಕೂಡ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರು. ಆದರೆ ಸಿಮಿರ್‍‌ಜೀತ್ ಸಿಂಗ್ ಅವರಿಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ತಮ್ಮ 4 ಓವರ್‍‌ಗಳಲ್ಲಿ 47 ರನ್‌ಗಳನ್ನು ಬಿಟ್ಟುಕೊಟ್ಟು ವಿಕೆಟ್ ಪಡೆಯುವಲ್ಲಿ ವಿಫಲವಾದರು.

ಇಲ್ಲಿವರೆಗೆ ಹೈದರಾಬಾದ್ ಪರ ಸಿಮರ್‍‌ಜೀತ್ ಸಿಂಗ್ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಮಾತ್ರ ಪಡೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸಿಮರ್‍‌ಜೀತ್ ಸಿಂಗ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈ ಬಿಡಬಹುದು. ಅವರ ಬದಲಿಗೆ ವೇಗಿ ಜಯದೇವ್ ಉನದ್ಕತ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಹರ್ಷಲ್ ಪಟೇಲ್

ಮತ್ತೊಂದೆಡೆ ಈ ಪಟ್ಟಿಯಲ್ಲಿ ಮಾಜಿ ಆರ್‍‌ಸಿಬಿ ವೇಗಿ ಹರ್ಷಲ್ ಪಟೇಲ್ ಕೂಡ ಸೇರಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು 4 ಓವರ್‍‌ಗಳಲ್ಲಿ 43 ರನ್‌ಗಳನ್ನು ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹರ್ಷಲ್ ಪಟೇಲ್ ತಮ್ಮ ಕೊನೆಯ ಓವರ್‍‌ನಲ್ಲಿ ವೆಂಕಟೇಶ್ ಅಯ್ಯರ್ ಅವರ ವಿಕೆಟ್ ಸಿಕ್ಕಿತು. ಹರ್ಷಲ್ ಅವರ ಬೌಲಿಂಗ್ ಈ ಬಾರಿ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಸನ್‌ ರೈಸರ್ಸ್ ಹೈದರಾಬಾದ್ ಪರ ಆಡಿರುವ 4 ಪಂದ್ಯಗಳಲ್ಲಿ 4 ವಿಕೆಟ್ ಮಾತ್ರ ಪಡೆದಿದ್ದಾರೆ. ಹೀಗಾಗಿ ಜಿಟಿ ವಿರುದ್ಧದ ಪಂದ್ಯಕ್ಕೆ ಹರ್ಷಲ್ ಪಟೇಲ್ ಅವರನ್ನು ಹೊರಗಿಟ್ಟು ಭಾರತೀಯ ಬೌಲರ್‍‌ಗೆ ಅವಕಾಶ ನೀಡಿದರೆ ಅಶ್ಚರ್ಯವೇನಿಲ್ಲ.

Story first published: Friday, April 4, 2025, 14:04 [IST]
Other articles published on Apr 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+