Vaibhav Suryavanshi: ಐಪಿಎಲ್‌ನಲ್ಲಿ "ವೈಭವ್' ಆರಂಭ; ಮೈದಾನದಲ್ಲಿ ಭಾವುಕರಾದ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಶನಿವಾರ ಐಪಿಎಲ್‌ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್‌ಗೆ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಿದರು. ಕೇವಲ 14 ವರ್ಷ 23 ದಿನಗಳ ವಯಸ್ಸಿನಲ್ಲಿ, ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ ಜೊತೆಗೆ ಆರಂಭಿಕರಾಗಿ ಮಿಂಚಿದರು. ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಚಿತ್ತ ಕದ್ದರು.
ವೈಭವ್ ಸೂರ್ಯವಂಶಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಭರ್ಜರಿ ಸಿಕ್ಸರ್‌ನೊಂದಿಗೆ ಪ್ರಾರಂಭಿಸಿದರು. ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರ ಮೊದಲ ಎಸೆತದಲ್ಲೇ ಸೂರ್ಯವಂಶಿ ಸಿಕ್ಸರ್ ಬಾರಿಸಿದರು.

ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಸೊಗಸದ ಬ್ಯಾಟಿಂಗ್ ಮಾಡಿದರು. ಆದರೆ ಐಡೆನ್ ಮಾರ್ಕ್ರಾಮ್ ಅವರೆಸೆದ ಒಂಬತ್ತನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸೂರ್ಯವಂಶಿ ಸ್ಟಂಪ್ ಔಟ್ ಆದರು. ಈ ವೇಳೆ ಅವರು ಕಣ್ಣೀರು ಹಾಕಿದರು. ಅದ್ಭುತವಾಗಿ ಆಡುತ್ತಿದ್ದ ಅವರು ವಿಕೆಟ್ ಕಳೆದುಕೊಂಡಾಗ ಭಾವುಕರಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈಭವ್ ಸೂರ್ಯವಂಶಿ 170 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರು ಕೇವಲ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 34 ರನ್ ಗಳಿಸಿ ಔಟಾದರು. ವೈಭವ್ ಸೂರ್ಯವಂಶಿ ಔಟ್ ಆದಾಗ, ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮೈದಾನದ ಮಧ್ಯದಲ್ಲಿ ಅಳಲು ಪ್ರಾರಂಭಿಸಿದರು. ವೈಭವ್ ಸೂರ್ಯವಂಶಿ ಅವರ ಕಣ್ಣುಗಳಿಂದ ಕಣ್ಣೀರು ಹರಿಯಲು ಪ್ರಾರಂಭಿಸಿತು. ಕ್ಯಾಮೆರಾ ತಕ್ಷಣವೇ ಈ ಭಾವನಾತ್ಮಕ ಕ್ಷಣವನ್ನು ಸೆರೆಹಿಡಿಯಿತು. ಇದಾದ ನಂತರ, ವೈಭವ್ ಸೂರ್ಯವಂಶಿ ಕಣ್ಣೀರು ಒರೆಸಿಕೊಂಡು ಮೈದಾನದಿಂದ ಹೊರನಡೆದರು. ವೈಭವ್ ಸೂರ್ಯವಂಶಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ವೈಭವ್ ಸೂರ್ಯವಂಶಿ ಯಾರು?
ವೈಭವ್ ಸೂರ್ಯವಂಶಿ ಭಾರತದ ಯುವ ಕ್ರಿಕೆಟಿಗ. ವೈಭವ್ ಸೂರ್ಯವಂಶಿ ಮಾರ್ಚ್ 27, 2011 ರಂದು ಜನಿಸಿದರು. ಅಂದರೆ ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿಗೆ ಕೆಲವು ದಿನಗಳ ಮೊದಲು. ವೈಭವ್ ಸೂರ್ಯವಂಶಿ ಅವರು ಬಿಹಾರದ ಸಮಸ್ತಿಪುರ್ ಜಿಲ್ಲೆಯ ತಾಜ್ಪುರ್ ಗ್ರಾಮದಲ್ಲಿ ಜನಿಸಿದರು. ವೈಭವ್ ಸೂರ್ಯವಂಶಿ ಎಡಗೈ ಬ್ಯಾಟರ್ ಆಗಿದ್ದ, ಎಡಗೈ ಸ್ಪಿನ್ ಕೂಡ ಮಾಡುತ್ತಾರೆ. ವೈಭವ್ ಸೂರ್ಯವಂಶಿ ಬಿಹಾರ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ.
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಅವರನ್ನು 1.10 ಕೋಟಿ ರೂ.ಗೆ ಖರೀದಿಸಿತು. ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ. ವೈಭವ್ ಸೂರ್ಯವಂಶಿ 2024 ರಲ್ಲಿ 12 ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಯಲ್ಲಿ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ವೈಭವ್ ಸೂರ್ಯವಂಶಿಯ ತಂದೆಯ ಹೆಸರು ಸಂಜೀವ್ ಸೂರ್ಯವಂಶಿ. ಸಂಜೀವ್ ಸೂರ್ಯವಂಶಿ ಕೂಡ ಒಬ್ಬ ಕ್ರಿಕೆಟಿಗರಾಗಿದ್ದರು. ವೈಭವ್ ಸೂರ್ಯವಂಶಿ ಬ್ರಿಯಾನ್ ಲಾರಾ ಅವರನ್ನು ರೂಲ್ ಮಾಡೆಲ್ ಮಾಡಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ತಮ್ಮ ಆಟದ ಬಗ್ಗೆ ಕಾಲಕಾಲಕ್ಕೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ವಾಸಿಂ ಜಾಫರ್ ಅವರಿಂದ ಸಲಹೆ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications