For Quick Alerts
ALLOW NOTIFICATIONS  
For Daily Alerts
 

IPL 2025 MVP: ಕೋಲ್ಕತ್ತಾದಲ್ಲಿ ಹೈದರಾಬಾದ್‌ಗೆ ವೆಂಕಟೇಶ ವಿಶ್ವರೂಪ ದರ್ಶನ

ಕೋಲ್ಕತ್ತಾ ತಂಡದ ಅಭಿಮಾನಿಗಳ ಮನದಲ್ಲಿ ಒಂದೇ ಪ್ರಶ್ನೆ ಮೂಡಿತ್ತು. ವೆಂಕಟೇಶ್‌ ಅಯ್ಯರ್‌ ಏಕೆ ಟಚ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು. ಆದರೆ ಈಗ ಈ ಪ್ರಶ್ನೆಗೆ ವೆಂಕಟೇಶ್‌ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ ಶೈಲಿಯಿಂದ ಉತ್ತರ ನೀಡಿದ್ದಾರೆ. ಐಪಿಎಲ್‌ ಮೆಗಾ ಹರಾಜಿನಲ್ಲಿ ಭಾರೀ ಮೊತ್ತವನ್ನು ನೀಡಿ ಕೆಕೆಆರ್‌ ಇವರಿಗೆ ಮಣೆ ಹಾಕಿತ್ತು. ಆದರೆ ಇವರು ಆಡಿದ ಮೊದಲ ಮೂರು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ತೋರಿಸಿದರು.

ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಟಾಸ್‌ ಸೋತರೂ ಕೆಕೆಆರ್‌ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆಯಿತು. ಓಪನರ್ಸ್‌ ರನ್‌ ಕಲೆ ಹಾಕುವಲ್ಲಿ ವಿಫಲರಾದರೂ, ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ, ಅಗ್‌ಕ್ರಿಶ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧರವಾದರು. ಆದರೆ ಡೆತ್‌ ಓವರ್‌ಗಳಲ್ಲಿ ವೆಂಕಟೇಶ್‌ ಅಯ್ಯರ್ ಮೈಚಳಿ ಬಿಟ್ಟು ಬ್ಯಾಟ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು.

IPL 2025 Venkatesh Iyer s Blazing 60 Off 29 Balls Powers KKR to Victory Over SRH

ಕೆಕೆಆರ್‌ ತಂಡದ ನಾಯಕ ಅಜಿಂಕ್ಯ ರಹಾನೆ ತಮ್ಮ ಧಾಮಾಕೆದಾರ್ ಬ್ಯಾಟಿಂಗ್‌ನಿಂದ ರನ್‌ಗಳನ್ನು ಗುಡ್ಡೆ ಹಾಕಿ ಔಟ್ ಆದರು. ಇವರು ಔಟ್ ಆಗ್ತಾ ಇದ್ದಂತೆ ಕ್ರೀಸ್‌ಗೆ ಬಂದವರೇ ವೆಂಕಟೇಶ್‌ ಅಯ್ಯರ್‌. ಇವರು ಆರಂಭದಲ್ಲಿ ಕೊಂಚ ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಏನಪ್ಪಾ ಇವರಿಗೆ ಇಷ್ಟು ಹಣ ನೀಡಿದ್ರಾ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿರುವಾಗಲೇ, ಅಪ್‌ಡೇಟ್‌ ವರ್ಷನ್‌ನಲ್ಲಿ ವೆಂಕಟೇಶ್‌ ಬ್ಯಾಟ್‌ ಬೀಸಿ ಕೆಕೆಆರ್‌ ತಂಡಕ್ಕೆ ಆಧಾರವಾದರು.

ನಿಧಾನಗತಿಯ ಬ್ಯಾಟಿಂಗ್

ವೆಂಕಟೇಶ್‌ ಅಯ್ಯರ್ ಸುಮಾರು 16 ಎಸೆತಗಳನ್ನು ಎದುರಿಸಿ ತಾಳ್ಮೆ ತೋರಿಸಿದರು. ಈ ಅವಧಿಯಲ್ಲಿ ಇವರು ಯಾವುದೇ ಲೂಸ್‌ ಶಾಟ್ ಪ್ರಯೋಗಿಸಲೇ ಇಲ್ಲ. ಪಿಚ್‌ ಮರ್ಮವನ್ನು ಅರಿತುಕೊಂಡ ಮೇಲೆ ಬೌಲರ್‌ಗಳ ಚಳಿ ಬಿಡಿಸಿದರು. ಒಂದು ಹಂತದಲ್ಲಿ ಕೆಕೆಆರ್‌ 18 ಓವರ್‌ಗಳ ಮುಕ್ತಾಯಕ್ಕೆ 160 ರನ್‌ಗಳ ಆಸು ಪಾಸಿನಲ್ಲಿ ಇತ್ತು. 19ನೇ ಓವರ್‌ನಲ್ಲಿ ವೆಂಕಟೇಶ್‌ ಅಯ್ಯರ್, ವಿಶ್ವದ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಪ್ಯಾಟ್‌ ಕಮಿನ್ಸ್‌ಗೆ ಕಾಟ ನೀಡಿದರು.

ಕಮಿನ್ಸ್‌ಗೆ ಮೈ ಚಳಿ ಬಿಡಿಸಿ ವೆಂಕಟೇಶ್

19ನೇ ಓವರ್‌ನ ಮೊದಲ ಎಸೆತವನ್ನು ಕೀಪರ್‌ ತಲೆಯ ಮೇಲೆ ಬಾರಿಸಿ ಬೌಂಡರಿ ಪಡೆದರು. ಎರಡನೇ ಎಸೆತದಲ್ಲಿ ಡೀಪ್‌ ಸ್ಕ್ವೇರ್‌ ಲೆಗ್‌ ಮೇಲಿನಿಂದ ಬೊಂಬಾಟ್ ಸಿಕ್ಸರ್‌ ಸಿಡಿಸಿದರು. ಮೂರು ಹಾಗೂ ನಾಲ್ಕನೇ ಎಸೆತದಲ್ಲೂ ಬೌಂಡರಿ ಬಾರಿಸಿ ಕಮಿನ್ಸ್‌ಗೆ ದಂಡಿಸಿದರು. 19ನೇ ಓವರ್ ಮುಕ್ತಾಯಕ್ಕೆ ಕೆಕೆಆರ್‌ 4 ವಿಕೆಟ್‌ ನಷ್ಟಕ್ಕೆ 187 ರನ್‌ ಕಲೆ ಹಾಕಿತು. ಇದೇ ಬ್ಯಾಟಿಂಗ್ ಧಾಟಿಯನ್ನು ವೆಂಕಟೇಶ್‌ ಅಯ್ಯರ್‌ ಕೊನೆಯ ಓವರ್‌ನಲ್ಲೂ ಮುಂದುವರೆಸಿದರು. ಹರ್ಷಲ್‌ ಎಸೆದ ಮೊದಲೆರಡು ಎಸೆತದಲ್ಲಿ 10 ರನ್ ಕಲೆ ಹಾಕಿ ಬಳಿಕ ಔಟ್ ಆದರು.

IPL 2025 Venkatesh Iyer s Blazing 60 Off 29 Balls Powers KKR to Victory Over SRH

ವೆಂಕಟೇಶ್‌ ಅಯ್ಯರ್ 29 ಎಸೆತಗಳಲ್ಲಿ 60 ರನ್‌ಗಳನ್ನು 206 ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದರು. ಈ ವೇಳೆ 7 ಬೌಂಡರಿ ಹಾಗೂ 3 ಸಿಕ್ಸರ್‌ಸಹ ಸೇರಿವೆ. ಇವರ ಅಮೋಘ ಆಟದ ಫಲವಾಗಿಯೇ ಕೆಕೆಆರ್‌ ಪಂದ್ಯ ಗೆಲ್ಲಲು ಕಾರಣವಾಯಿತು. ಪರಿಣಾಮ ಇವರು ಪಂದ್ಯದ ಮೋಸ್ಟ್ ವ್ಯಾಲ್ಯೂಬೆಲ್ ಪ್ಲೇಯರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

Story first published: Thursday, April 3, 2025, 23:26 [IST]
Other articles published on Apr 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+