For Quick Alerts
ALLOW NOTIFICATIONS  
For Daily Alerts
 

Virender Sehwag: ಇಶಾನ್ ಕಿಶನ್ ನಡೆಗೆ ಛೀಮಾರಿ ಹಾಕಿದ ಸೆಹ್ವಾಗ್

ಬುಧವಾರ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಐಪಿಎಲ್ 2025ರ 42ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸನ್ ರೈಸರ್ಸ್ ತಂಡವು ತನ್ನ ತವರಿನಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದ ವೇಳೆ ವಿವಾದವೊಂದು ಹುಟ್ಟುಕೊಂಡಿದೆ. ಅಂಪೈರ್ ಹೈದರಾಬಾದ್ ತಂಡದ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ತಪ್ಪಾಗಿ ಔಟ್ ಎಂದು ಘೋಷಿಸಿದರು. ಇಶಾನ್ ಕಿಶಣ್ ಕೂಡ ರಿವ್ಯೂ ತೆಗೆದುಕೊಳ್ಳಲಿಲ್ಲ. ಇದಾದ ನಂತರ, ಅಂಪೈರ್ ಮತ್ತು ಇಶಾನ್ ಕಿಶನ್ ಇಬ್ಬರ ಮೇಲೂ ಹಲವು ಪ್ರಶ್ನೆಗಳು ಎದ್ದಿವೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಮೂರನೇ ಓವರ್‍‌ನ ಮೊದಲ ಎಸೆತದಲ್ಲಿ ಲೆಗ್ ಸ್ಟಂಪ್‌ನಿಂದ ಬಹಖ ದೂರದಲ್ಲಿ ಆಡಲು ಇಶಾನ್ ಕಿಶನ್ ಪ್ರಯತ್ನಿಸಿದರು. ಚೆಂಡು ಬ್ಯಾಟ್‌ಗೆ ತಗುಲದೆ ವಿಕೆಟ್‌ ಕೀಪರ್ ಕೈಗೆ ಹೋಯಿತು. ಮುಂಬೈ ವಿಕೆಟ್‌ ಕೀಪರ್ ರಯಾನ್ ರಿಕಲ್ಟನ್ ಹಿಂದಿನಿಂದ ಯಾವುದೇ ಮನವಿ ಮಾಡಲಿಲ್ಲ. ಬೌಲರ್ ದೀಪಕ್ ಚಹಾರ್ ಕೂಡ ಮನವಿ ಮಾಡಿ ಸುಮ್ಮನಾದರು. ಆದಾಗ್ಯೂ ಸ್ವಲ್ಪ ಸಮಯ ಹಿಂಜರಿದ ನಂತರ ಅಂಪೈರ್ ಇಶಾನ್ ಕಿಶನ್ ಔಟ್ ಎಂದು ಘೋಷಿಸಿದರು.

IPL 2025 Virender Sehwag slams Ishan Kishan for his move

ಇಶಾನ್ ಕಿಶನ್ ಚೆಂಡು ಬ್ಯಾಟ್‌ಗೆ ತಗುಲಿದೆ ಎಂದು ಪೆವಿಲಿಯನ್ ಕಡೆ ನಡೆದರು. ನಂತರ ಮರುಪಂದ್ಯ ನೋಡಿದಾಗ ಇಶಾನ್ ಕಿಶನ್ ಔಟಾಗಿರಲಿಲ್ಲ. ಚೆಂಡು ಬ್ಯಾಟ್‌ಗೆ ತಾಗಿರಲಿಲ್ಲ, ಆದರೂ ಇಶಾನ್ ಕಿಶನ್ ಪೆವಿಲಿಯನ್ ಸಾಗಿದ ನಡೆಗೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಬ್ಯಾಟರ್ ವೀರೇಂದರ್ ಸೆಹ್ವಾಗ್ ಛೀಮಾರಿ ಹಾಕಿದ್ದಾರೆ.

ಸೆಹ್ವಾಗ್ ಕಿಡಿ

ಇಶಾನ್ ಕಿಶನ್ ಅವರಿಗೆ ಡಿಆರ್‌ಎಸ್ ತೆಗೆದುಕೊಳ್ಳುವ ಆಯ್ಕೆ ಇತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನಂತರ ಅದು ವೈಡ್ ಬಾಲ್ ಎಂದು ತಿಳಿದುಬಂದಿದೆ. ಇಶಾನ್ ಕಿಶನ್ ಔಟಾಗದಿದ್ದರೂ ಕ್ರೀಸ್‌ನಿಂದ ಹೊರನಡೆದರು. ಅವರು ತಮ್ಮ ಕೆಲಸ ಮಾಡಲು ಸಂಬಳ ಪಡೆಯುವುದರಿಂದ, ಅವರು ಕಾಯಬೇಕಿತ್ತು. ಮೈದಾನದಲ್ಲಿರುವ ಅಂಪೈರ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿ. ಆದರೆ ಇಶಾನ್ ಕಿಶನ್ ನಡೆ ಸರಿಯಲ್ಲ ಎಂದು ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ.

ಆಕಾಶ್ ಚೋಪ್ರಾ ಹೇಳಿದ್ದೇನು?

ಇಶಾನ್ ಕಿಶನ್ ನಡೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಈ ಸಂಬಂಧ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇಶಾನ್ ಕಿಶನ್ ಔಟ್ ಆಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ನಿಖರವಾಗಿ ಏನಾಯಿತು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇಶಾನ್ ಕಿಶನ್ ತಾನಾಗಿಯೇ ಹೊರನಡೆದರು. ಅವರು ನಡೆಯುವುದನ್ನು ಅಂಪೈರ್ ನೋಡಿದಾಗ, ಅವನು ತನ್ನ ಬೆರಳನ್ನು ಎತ್ತಲು ಪ್ರಾರಂಭಿಸಿದರು. ಇದಾದ ನಂತರ ಯಾರೂ ಮನವಿ ಮಾಡುತ್ತಿಲ್ಲ ಎಂದು ಅವರು ಅರಿತುಕೊಂಡರು. ಬಳಿಕವಷ್ಟೇ ಮನವಿ ಸಲ್ಲಿಸಲಾಯಿತು.

ನಿಯಮಗಳ ಪ್ರಕಾರ, ಮೇಲ್ಮನವಿ ಸಲ್ಲಿಸದ ಹೊರತು ಅಂಪೈರ್ ನಿಮ್ಮನ್ನು ಔಟ್ ಎಂದು ಘೋಷಿಸಲು ಸಾಧ್ಯವಿಲ್ಲ. ಆದರೆ, ಬ್ಯಾಟರ್ ಸ್ವತಃ ಕ್ರೀಸ್ ತೊರೆದರೆ ಅವರು ಔಟ್ ಎಂದು ನೀವು ಹೇಳಬೇಕು. ಸಮಯ ಕೆಟ್ಟದಾಗಿದ್ದಾಗ ಹೀಗೆಯೇ ಆಗುತ್ತದೆ. ಬ್ಯಾಟ್‌ನ ಅಂಚು ಚೆಂಡನ್ನು ತಗುಲಿದೆ ಎಂದು ಇಶಾನ್ ಕಿಶನ್ ಭಾವಿಸಿದ್ದರಿಂದ ಅದು ಅಂಪೈರ್‌ನ ತಪ್ಪಲ್ಲ ಎಂದು ಆಕಾಶ ಚೋಪ್ರಾ ತಿಳಿಸಿದ್ದಾರೆ.

Story first published: Thursday, April 24, 2025, 15:26 [IST]
Other articles published on Apr 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+