Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Unsung Hero: ಗುಜರಾತ್ ಹ್ಯಾಟ್ರಿಕ್ ಗೆಲುವಿನಲ್ಲಿ ಹೀರೋ ಆದ ವಾಷಿಂಗ್ಟನ್ ಸುಂದರ್

ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಏಳು ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ ಮಣಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಐಪಿಎಲ್ 2025 ರಲ್ಲಿ ಸತತ ಮೂರನೇ ಗೆಲುವು ದಾಖಲಿಸಿತು. ಶುಭಮನ್ ಗಿಲ್ ಅವರ ಅಜೇಯ ಅರ್ಧಶತಕ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಗೆಲುವಿನ ನಗೆ ಬೀರಿತು. ಆದರೆ ಗುಜರಾತ್ ತಂಡದ ಚೇಸಿಂಗ್‌ನಲ್ಲಿ ಬೆನ್ನೆಲುಬಾಗಿ ನಿಂತವರು ವಾಷಿಂಗ್ಟನ್ ಸುಂದರ್.

ಪವರ್‌ಪ್ಲೇ ಒಳಗೆ ಗುಜರಾತ್ 17 ರನ್‌ಗಳಿಗೆ 2 ವಿಕೆಟ್ ಕಳೆದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಪಂದ್ಯದ ಮೇಲೆ ಸನ್‌ ರೈಸರ್ಸ್ ಹೈದರಾಬಾದ್ ಹಿಡಿತ ಸಾಧಿಸಿತು. ಜೋಸ್ ಬಟ್ಲರ್ ಮತ್ತು ಸಾಯಿ ಸುದರ್ಶನ್ ಇಬ್ಬರೂ ಪ್ಯಾಟ್ ಕಮ್ಮಿನ್ಸ್ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು.

IPL 2025 Washington Sundar becomes unsung hero in Gujarat Titans hat-trick win

ವಾಷಿಂಗ್ಟನ್ ಸುಂದರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಆಫ್-ಸ್ಪಿನ್ನಿಂಗ್ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಅವರಿಗೆ ಇದು ವಿಶಿಷ್ಟ ಪಾತ್ರವಾಗಿರಲಿಲ್ಲ. ಆದರೆ ತಂಡಕ್ಕೆ ಜವಾಬ್ದಾರಿಯುತ ಇನ್ನಿಂಗ್ಸ್ ಆಡುವುದು ಮುಖ್ಯವಾಗಿತ್ತು. ಶುಭಮನ್ ಗಿಲ್ ಜೊತೆಗೂಡಿದ ಸುಂದರ್ 95 ರನ್ ಗಳ ನಿರ್ಣಾಯಕ ಜೊತೆಯಾಟದ ಕಾಣಿಕೆ ನೀಡಿದರು.

ಹೈದರಾಬಾದ್ ಬೌಲರ್‍‌ಗಳನ್ನು ಸುಂದರ್ ಸಮರ್ಥವಾಗಿ ಎದುರಿಸಿದರು. ಹೈದರಾಬಾದ್ ವಿರುದ್ಧ ಸುಂದರ್ ಅವರ ಬ್ಯಾಟಿಂಗ್ ಪ್ರದರ್ಶನ ಮಾಸ್ಟರ್ ಕ್ಲಾಸ್ ಆಗಿತ್ತು. ಸಿಮರ್ಜೀತ್ ಸಿಂಗ್ ಅವರ ಒಂದೇ ಓವರ್‍‌ನಲ್ಲಿ ಎರಡು ಬೌಂಡರಿಗಳು ಮತ್ತು ಎರಡು ಸಿಕ್ಸರ್ ಗಳನ್ನು ಒಳಗೊಂಡಂತೆ ಸುಂದರ್ 20 ರನ್ ಬಾರಿಸಿದರು. ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು.

ಬಿರುಸಿನ ಬ್ಯಾಟಿಂಗ್ ಮಾಡಿದ ಸುಂದರ್ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 49 ರನ್‌ಗಳಿಸಿ ಅರ್ಧಶತಕ ಹೊಸ್ತಿಲಲ್ಲಿ ವಿಕೆಟ್ ಕಳೆದುಕೊಂಡರು. ಸುಂದರ್ ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು. ಆದರೆ ಆ ಹೊತ್ತಿಗೆ ಪಂದ್ಯವು ಸಂಪೂರ್ಣವಾಗಿ ಗುಜರಾತ್ ಟೈಟಾನ್ಸ್ ಪರ ಆಗಿತ್ತು. ಇದಕ್ಕೆ ಪ್ರಮುಖ ಕಾರಣ ಸುಂದರ ಅವರ ಅಮೋಘ ಇನ್ನಿಂಗ್ಸ್.

ಪಂದ್ಯ ಫಲಿತಾಂಶ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 152 ರನ್‌ಗಳಿಗೆ ಕಟ್ಟಿ ಹಾಕಿತು. ನಂತರ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಸ್ಪೋಟಲ ಬ್ಯಾಟಿಂಗ್ ನೆರವಿನಿಂದ ಗುಜರಾತ್‌ ತಂಡದ ಗೆಲುವಿನ ನಗೆ ಬೀರಿತು. ಕೇವಲ 16.4 ಓವರ್‌ಗಳಲ್ಲಿ 153 ರನ್‌ಗಳನ್ನು ಗಳಿಸಿ ಜಯ ಕಂಡಿತು. ಗುಜರಾತ್ ಪರ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ನಾಲ್ಕು ಓವರ್‍‌ಗಳ ಕೋಟಾದಲ್ಲಿ 17 ರನ್‌ಗೆ 4 ವಿಕೆಟ್ ಉರುಳಿಸಿದರು. ಇದರೊಂದಿಗೆ ಅವರು ಐಪಿಎಲ್ 100 ವಿಕೆಟ್ ಪಡೆದ ಸಾಧನೆ ಮಾಡಿದರು.

Story first published: Monday, April 7, 2025, 1:23 [IST]
Other articles published on Apr 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+