ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025 ರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿತು. ಆಸ್ಟ್ರೇಲಿಯಾದ ಅಪಾಯಕಾರಿ ವೇಗಿ ಜೋಶ್ ಹೇಜಲ್‌ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅದ್ಭುತ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಶ್ ಹೇಜಲ್‌ವುಡ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದರು.
ಜೋಶ್ ಹೇಜಲ್‌ವುಡ್ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಧೂಳಿಪಟ ಮಾಡಿದರು. ರಾಜಸ್ಥಾನ ರಾಯಲ್ಸ್ ವಿರುದ್ಧ ಜೋಶ್ ಹೇಜಲ್‌ವುಡ್ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಆರ್‌ಸಿಬಿಗೆ ಗೆಲುವು ತಂದು ಕೊಟ್ಟರು. ಹೇಜಲ್‌ವುಡ್ ತಮ್ಮ ಮಾರಕ ಬೌಲಿಂಗ್ ಮೂಲಕ ಪಂದ್ಯವನ್ನೇ ತಿರುಗಿಸಿದರು.

ರಾಜಸ್ಥಾನ ರಾಯಲ್ಸ್ ವಿರುದ್ಧ ಜೋಶ್ ಹೇಜಲ್‌ವುಡ್ 4 ಓವರ್ ಬೌಲಿಂಗ್ ಮಾಡಿ 33 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು. ಈ ಅದ್ಭುತ ಪ್ರದರ್ಶನಕ್ಕಾಗಿ ಜೋಶ್ ಹೇಜಲ್‌ವುಡ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಸಿಕ್ಕಿತು. ಈ ವೇಳೆ ಮಾತನಾಡಿದ ಅವರು ಯಶಸ್ಸಿನ ಮಂತ್ರವನ್ನು ತಿಳಿಸಿದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಮಾತನಾಡಿದ ಜೋಶ್ ಹೇಜಲ್‌ವುಡ್, ನ್ಯೂ ಸೌತ್ ವೇಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅನುಭವ ಇಲ್ಲಿ ಸಹಾಯಕ್ಕೆ ಬಂತು. ಅಲ್ಲದೆ, ಆಸ್ಟ್ರೇಲಿಯಾ ಪರ ಆಡುವ ಸಂದರ್ಭದಲ್ಲಿ ಇರುವ ರೀತಿಯ ಬ್ರೈನ್ ಕೂಡ ಇಲ್ಲಿ ಕೆಲಸ ಮಾಡಿತು. ಇದರಿಂದಾಗಿ ನಾನು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಜೋಶ್ ಹೇಜಲ್‌ವುಡ್ ಯಶಸ್ವಿ ಜೈಸ್ವಾಲ್ (49), ಶಿಮ್ರಾನ್ ಹೆಟ್ಮೆಯರ್ (11), ಧ್ರುವ್ ಜುರೆಲ್ (47) ಮತ್ತು ಜೋಫ್ರಾ ಆರ್ಚರ್ (0) ಅವರನ್ನು ಔಟ್ ಮಾಡಿದರು. ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಜೋಶ್ ಹೇಜಲ್‌ವುಡ್ ಪ್ರಮುಖ ಪಾತ್ರ ವಹಿಸಿದರು.
ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಪರ ಜೋಶ್ ಹೇಜಲ್‌ವುಡ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಅವರು ಸತತವಾಗಿ ಬ್ಯಾಟರ್ಸ್ ಔಟ್ ಮಾಡುವುದರಿಂದ ವಿಕೆಟ್ ಟೇಕರ್ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ, ಅವರು ಯಾವಾಗ ಅತ್ಯುತ್ತಮ ಪ್ರದರ್ಶನ ನೀಡಿದ್ದರೆ, ಆಗ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಮೂರು ಬಾರಿ ಹೇಜಲ್‌ವುಡ್ 3ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ ಅವರು 16 ವಿಕೆಟ್ ಪಡೆದಿದ್ದಾರೆ.