IPL 2025: ಆರ್‌ಸಿಬಿ ಪರ ಆಡುವ ಬಗ್ಗೆ ಮೂರು ಪದಗಳಲ್ಲಿ ಉತ್ತರಿಸಿದ ಕೆಎಲ್ ರಾಹುಲ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರೀ ಕುತೂಹಲ ಹೆಚ್ಚಿಸಿದೆ. ಈ ಆವೃತ್ತಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಲಕ್ನೋ ಸೂಪರ್ ಜೆಂಟ್ಸ್ ನಾಯಕ ಕೆಎಲ್ ರಾಹುಲ್ ತಂಡವನ್ನು ತೊರೆಯುವ ಸಾಧ್ಯತೆ ಹೆಚ್ಚಿದೆ.
ಈ ಋತುವಿನ ಐಪಿಎಲ್‌ನಲ್ಲಿ ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು ನಡೆದು ಕೊಂಡ ನಡೆಯಿಂದ ಬೇಸರಗೊಂಡಿರುವ ಕೆಎಲ್ ರಾಹುಲ್ ಅವರು ತಂಡದಿಂದ ಹೊರ ಬರುವುದು ಪಕ್ಕ ಎನ್ನಲಾಗುತ್ತಿದೆ. ಮತ್ತೊಂದೆಡೆ ಕೆಎಲ್ ರಾಹುಲ್ ಮರಳಿ ತವರಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೇರಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.

ಈ ಎಲ್ಲದರ ನಡುವೆ ಕೆಎಲ್ ರಾಹುಲ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅಭಿಮಾನಿಯೊಬ್ಬರು ಐಪಿಎಲ್ 2025ರಲ್ಲಿ ಆರ್‌ಸಿಬಿಗೆ ಮರಳುವ ಬಗ್ಗೆ ಕೆಎಲ್ ರಾಹುಲ್ ಅವರಿಗೆ ಪ್ರಶ್ನೆ ಕೇಳಿದ್ದು, ಇದಕ್ಕೆ ಅವರು ಮೂರು ಪದಗಳಲ್ಲಿ ಉತ್ತರಿಸಿದ್ದಾರೆ. ಇದಾದ ನಂತರ ಆರ್‌ಸಿಬಿ ಫ್ಯಾನ್ಸ್ ಸಂತಸಗೊಂಡಿದ್ದಾರೆ.
ಕೆಎಲ್ ರಾಹುಲ್ ಹೇಳಿದ್ದೇನು?
ವಿಡಿಯೋದಲ್ಲಿ ಕೆಎಲ್ ರಾಹುಲ್ ಅವರಿಗೆ ಅಭಿಮಾನಿಯೊಬ್ಬರು "ನಾನು ಆರ್‌ಸಿಬಿಯ ಡೈ ಹಾರ್ಡ್ ಫ್ಯಾನ್. ನಾನು ಬಹಳ ಹಿಂದಿನಿಂದಲೂ ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿದ್ದೇನೆ. ಈ ಹಿಂದೆ ನೀವು ಆರ್‌ಸಿಬಿಯಲ್ಲಿ ಆಡಿದ್ದು, ಈಗ ಮತ್ತೊಮ್ಮೆ ಖಂಡಿತವಾಗಿಯೂ ಆರ್‌ಸಿಬಿಗೆ ಆಡುವ ವದಂತಿಗಳಿವೆ. ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ ನೀವು ಆರ್‌ಸಿಬಿಗೆ ಬಂದು ಆಡಬೇಕೆಂದು ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಕೆಎಲ್ ರಾಹುಲ್ 'ಲೆಟ್ಸ್ ಹೋಪ್ ಸೋ' ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂರು ಪದಗಳ ಮೂಲಕ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡುವ ಬಗ್ಗೆ ದೊಡ್ಡ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಕೆಎಲ್ ರಾಹುಲ್ ಪಯಾಣ
ಐಪಿಎಲ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಕೆಎಲ್ ರಾಹುಲ್ ಒಬ್ಬರು. ಅವರು 2013ರಲ್ಲಿ ತಮ್ಮ ಚೊಚ್ಚಲ ಆವೃತ್ತಿಯನ್ನು ಆರ್‌ಸಿಬಿಯೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಇದಾದ ನಂತರ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು. ಬಳಿಕ ಅವರು 2016ರಲ್ಲಿ ಆರ್‌ಸಿಬಿಗೆ ಮರಳಿದರು. ಈ ಆವೃತ್ತಿಯಲ್ಲಿ ಅವರು ಆರ್‌ಸಿಬಿ ಪರ ಭರ್ಜರಿ ಪ್ರದರ್ಶನ ನೀಡಿದ್ದ. ಒಟ್ಟು 397 ರನ್‌ಗಳನ್ನು ಗಳಿಸುವ ಮೂಲಕ ಆರ್‌ಸಿಬಿಗೆ ಮೂರನೇ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದರು.
ಭುಜದ ಗಾಯದಿಂದಾಗಿ ಕೆಎಲ್ ರಾಹುಲ್ 2017ರ ಆವೃತ್ತಿಯನ್ನು ಕಳೆದುಕೊಂಡರು. ನಂತರ ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಿತ್ತು. ಆರ್‌ಸಿಬಿಯಿಂದ ಹೊರ ಬಂದ ಮೇಲೆ ಪಂಜಾಬ್ ಕಿಂಗ್ಸ್ ಪರ ನಾಯಕನಾಗಿ ಆಡಿದ್ದರು. ಬಳಿಕ ಅವರು ಐಪಿಎಲ್ 2022ರ ಮೆಗಾ ಹರಾಜಿಗೆ ಮುಂಚಿತವಾಗಿ 17 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡರು. ಐಪಿಎಲ್‌ನಲ್ಲಿ ರಾಹುಲ್ ಇದುವರೆಗೆ 132 ಪಂದ್ಯಗಳಲ್ಲಿ 4638 ರನ್ ಗಳಿಸಿದ್ದಾರೆ. ಅವರು 37 ಅರ್ಧ ಶತಕಗಳು ಮತ್ತು 4 ಶತಕಗಳನ್ನು ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications