IPL 2025: ಎಲ್‌ಎಸ್‌ಜಿ ಹೊಸ ನಾಯಕ ಬಗ್ಗೆ ನಿಕೋಲಸ್ ಪೂರನ್ ಹೇಳಿದ್ದೇನು?
ಐಪಿಎಲ್ 2025ರಲ್ಲಿ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಅದೃಷ್ಟ ಪರೀಕ್ಷೆಗೆ ಇಳಿದಿದ್ದ ರಿಷಭ್ ಪಂತ್ ಅವರನ್ನು ಲಕ್ನೋ ಫ್ರಾಂಚೈಸಿ 27 ಕೋಟಿ ರೂ. ಗಳಿಗೆ ಬಿಡ್ ಮಾಡಿತ್ತು. ನಂತರ ಕೆಎಲ್ ರಾಹುಲ್ ಅವರಿಂದ ಖಾಲಿಯಾಗಿದ್ದ ನಾಯಕನ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ನೇಮಿಸಲಾಯಿತು. ಈಗ ಮೆಗಾ ಲೀಗ್ ಆರಂಭಕ್ಕೂ ಮುನ್ನ ಎಲ್‌ಎಸ್‌ಜಿ ತಂಡದ ನೂತನ ನಾಯಕ ರಿಷಭ್ ಪಂತ್ ಅವರಿಗೆ ನಿಕೋಲಸ್ ಪೂರನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 2025ರ ಸೀಸನ್‌ನಲ್ಲಿ ಪ್ರಶಸ್ತಿ ಗೆಲ್ಲಲು ಲಕ್ನೋ ಸಮತೋಲಿತ ತಂಡವನ್ನು ಹೊಂದಿದೆ. ರಿಷಭ್ ಪಂತ್ ಕೂಡ ಪ್ರತಿಭೆಯುಳ್ಳ ಆಟಗಾರರ ಎಂದು ನಿಕೋಲಸ್ ಪೂರನ್ ಹೇಳಿದ್ದಾರೆ.

ರಿಷಭ್ ಪಂತ್ ಅವರನ್ನು ಎಲ್‌ಎಸ್‌ಜಿ ನಾಯಕನನ್ನಾಗಿ ನೇಮಿಸಿದ ಬಗ್ಗೆ ಮಾತನಾಡಿದ ಪೂರನ್, ತಂಡದಲ್ಲಿ ಮತ್ತೊಮ್ಮೆ, ಉತ್ತಮ, ಫ್ರೆಶ್ ಏರ್ ಇದೆ. ರಿಷಭ್ ಪಂತ್ ಅವರು ತಮ್ಮ ಅನುಭವಗಳೊಂದಿಗೆ, ಕೌಶಲ್ಯ ಮತ್ತು ಪ್ರತಿಭೆಯೊಂದಿಗೆ ಬರುತ್ತಾರೆ. ಅವರು ಹೇಗೆ ಆಡುತ್ತಾರೆ ಎಂಬುದನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ. ಮೈದಾನದ ಒಳಗೆ ಮತ್ತು ಹೊರಗೆ ಅವರಿಗೆ ನಮ್ಮ 100% ಬೆಂಬಲವಿದೆ. ಮಾತುಗಳಿಗಿಂತ ಕ್ರಿಯೆಗಳು ಜೋರಾಗಿ ಮಾತನಾಡುತ್ತವೆ, ಆದ್ದರಿಂದ ಅದು ಹೇಗೆ ನಡೆಯುತ್ತದೆ ಎಂದು ನೋಡೋಣ" ಎಂದು ಹೇಳಿದ್ದಾರೆ.
ಐಪಿಎಲ್ ಪ್ರಶಸ್ತಿ ಗೆಲ್ಲಲು ನಮಗೆ ಉತ್ತಮ ಅವಕಾಶವಿದೆ. ನಮ್ಮಲ್ಲಿ ಅನುಭವಿ ಮತ್ತು ಯುವ ಆಟಗಾರರನ್ನು ಹೊಂದಿರುವ ಸಮತೋಲಿತ ತಂಡವಿದೆ. ಅನುಭವಿ ಆಟಗಾರರೊಂದಿಗೆ ಮುನ್ನಡೆಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಪೂರನ್ ತಿಳಿಸಿದ್ದಾರೆ.
ಟಿ20 ಮಾದರಿಯಲ್ಲಿ ಯುವ ಆಟಗಾರರ ಪ್ರದರ್ಶನವನ್ನು ಪೂರನ್ ಶ್ಲಾಘಿಸಿದ್ದಾರೆ. "ಖಂಡಿತ, ನಿಯಮಗಳು ಬದಲಾಗಿವೆ. ಬ್ಯಾಟರ್‍ಗಳು ಮತ್ತು ಬೌಲರ್‌ಗಳು ಇಬ್ಬರೂ ಸಹ ಉತ್ತಮವಾಗಿದ್ದಾರೆ. ಕಿರಿಯ ಆಟಗಾರರು ಅತ್ಯಂತ ಪ್ರತಿಭಾನ್ವಿತರಾಗಿದ್ದಾರೆ. ಟೂರ್ನಿ ಪ್ರಾರಂಭವಾದ ಕ್ಷಣದಿಂದಲೇ ಪ್ರಾಬಲ್ಯ ಸಾಧಿಸಿದ್ದಾರೆ. ಆದ್ದರಿಂದ ಆಟ ಬದಲಾಗಿದೆ. ನಿಯಮಗಳು ಬದಲಾಗಿವೆ ಎಂದು ಪೂರನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡವು ಮಾರ್ಚ್ 24 ರಂದು ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ಐಪಿಎಲ್ 2025ರ ಅಭಿಯಾನವನ್ನು ಆರಂಭಿಸಲಿದೆ. ಡೆಲ್ಲಿ ತಂಡವನ್ನು ಅಕ್ಸರ್ ಪಟೇಲ್ ಮುನ್ನಡೆಸುತ್ತಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ: ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಆಯುಷ್ ಬದೋನಿ, ಹಿಮ್ಮತ್ ಸಿಂಗ್, ಮ್ಯಾಥ್ಯೂ ಬ್ರೀಟ್ಜ್‌ಕೆ, ರಿಷಬ್ ಪಂತ್, ನಿಕೋಲಸ್ ಪೂರನ್, ಆರ್ಯನ್ ಜುಯಲ್, ಅಬ್ದುಲ್ ಸಮದ್, ಮಿಚೆಲ್ ಮಾರ್ಷ್, ಶಹಬಾಜ್ ಅಹ್ಮದ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ, ರವಿ ಬಿಷ್ಣೋಯ್, ಎಂ ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಆಕಾಶ್ ದೀಪ್, ಅವೇಶ್ ಖಾನ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications