ಐಪಿಎಲ್ 2025 ರ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಜೈಪುರದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಲಕ್ನೋ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.
ಲಕ್ನೋ ತಂಡ ನೀಡಿದ 181 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ ಸೋಲು ಕಂಡಿತು. ರಾಜಸ್ಥಾನ 5 ವಿಕೆಟ್ ಕಳೆದುಕೊಂಡು ಕೇವಲ 178 ರನ್ ಗಳಿಸಲು ಶಕ್ತವಾಯಿತು. ಇದರೊಂದಿಗೆ ಲಕ್ನೋ ತಂಡ 2 ರನ್‌ಗಳ ರೋಚಕ ಗೆಲುವು ಸಾಧಿಸಿತು. ಕೊನೆಯ ಓವರ್ ವರೆಗೆ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನಲ್ಲಿ ಅವೇಶ್ ಖಾನ್ ಪ್ರಮುಖ ಪಾತ್ರವಹಿಸಿದರು. ಅವರೆಸೆದ ಕೊನೆಯ 20ನೇ ಪಂದ್ಯ ಮಹತ್ವದ ತಿರುವು ಕೊಟ್ಟಿತು.

ರಾಜಸ್ಥಾನ ರಾಯಲ್ಸ್ ಗೆಲ್ಲಲು ಕೊನೆಯ ಓವರ್‌ನಲ್ಲಿ 9 ರನ್ ಗಳಿಸಬೇಕಾಗಿತ್ತು. ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ್ ಜುರೆಲ್ ಕ್ರೀಸ್‌ನಲ್ಲಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಇದೇ ರೀತಿಯ ಸಂದರ್ಭವನ್ನು ರಾಜಸ್ಥಾನ ಎದುರಿಸಿತ್ತು. ಆಗ ರಾಜಸ್ಥಾನ ಕೇವಲ 9 ರನ್ ಗಳಿಸಬೇಕಾಗಿತ್ತು. ಹೆಟ್ಮೆಯರ್-ಜುರೆಲ್ ಕ್ರೀಸ್‌ನಲ್ಲಿದ್ದರು. ಆ ಪಂದ್ಯವು ಸೂಪರ್ ಓವರ್ ವರೆಗೆ ತಲುಪಿತು. ಆದರೆ ಡೆಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು. ಈ ಪಂದ್ಯವು ಸೂಪರ್ ಓವರ್‌ಗೆ ತಲುಪಲಿಲ್ಲ. ರಾಜಸ್ಥಾನ ತಂಡವು ಎರಡು ರನ್‌ಗಳಿಂದ ಪಂದ್ಯವನ್ನು ಸೋತಿತು.
ಮೊದಲನೇ ಎಸೆತ: ಅವೇಶ್ ಖಾನ್ ಎಸೆತದಲ್ಲಿ ಧ್ರುವ್ ಜುರೆಲ್ ಒಂದು ರನ್ ಗಳಿಸಿದರು.
ಎರಡನೇ ಎಸೆತ: ಶಿಮ್ರಾನ್ ಹೆಟ್ಮೆಯರ್ 2 ರನ್ ಗಳಿಸಿದರು.
ಮೂರನೇ ಎಸೆತ: ಅವೇಶ್ ಎಸೆತದಲ್ಲಿ ಹೆಟ್ಮೆಯರ್ ಕ್ಯಾಚ್ ಅನ್ನು ಶಾರ್ದೂಲ್ ಠಾಕೂರ್ ಪಡೆದರು.
ನಾಲ್ಕನೇ ಎಸೆತ: ಶುಭಂ ದುಬೆ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ.
ಐದನೇ ಎಸೆತ: ಡೇವಿಡ್ ಮಿಲ್ಲರ್ ಶುಭಂ ದುಬೆ ಕ್ಯಾಚ್ ಕೈಬಿಟ್ಟರು. ಈ ವೇಳೆ ರಾಜಸ್ಥಾನ ಎರಡು ರನ್ ಗಳಿಸಿತು.
ಆರನೇ ಎಸೆತ: ಶುಭಂ ದುಬೆ ಕೇವಲ ಒಂದು ರನ್ ಗಳಿಸದರು. ಈ ಮೂಲಕ ಪಂದ್ಯದಲ್ಲಿ ಲಕ್ನೋ ತಂಡ ಜಯಗಳಿಸಿತು.