For Quick Alerts
ALLOW NOTIFICATIONS  
For Daily Alerts
 

IPL 2025: ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಅಶ್ವಿನ್ ಕುಮಾರ್ ಯಾರು?

ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ತನ್ನ ಮೊದಲ ಮೂರು ಪಂದ್ಯಗಳಲ್ಲಿ ಮೂವರು ಅಪರಿಚಿತ ಆಟಗಾರರಿಗೆ ಅವಕಾಶ ನೀಡಿದೆ. ವಿಘ್ನೇಶ್ ಪುತ್ತೂರು ಮತ್ತು ಸತ್ಯನಾರಾಯಣ ರಾಜು ನಂತರ, ಮುಂಬೈ ಇಂಡಿಯನ್ಸ್ ತಂಡವು ಈಗ ಅಶ್ವನಿ ಕುಮಾರ್‌ ಅವರಿಗೆ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಲು ಅವಕಾಶ ಕಲ್ಪಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2025 ರ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಡುವ ಹನ್ನೊಂದರ ಬಳಗದಲ್ಲಿ ಅಶ್ವನಿ ಅವರನ್ನು ಸೇರಿಸಿಕೊಂಡಿತು.

ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಎಡಗೈ ವೇಗದ ಬೌಲರ್ ಅಶ್ವನಿ ಕುಮಾರ್ ಎದುರಾಳಿ ಕೆಕೆಆರ್ ತಂಡದ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಅವರು ತಮ್ಮ ಐಪಿಎಲ್ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡುವ ಮೂಲಕ ದಾಖಲೆ ಸೃಷ್ಟಿಸಿದರು. ಅಶ್ವನಿ ಐಪಿಎಲ್‌ನ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ 10ನೇ ಆಟಗಾರ ಎನಿಸಿಕೊಂಡರು. 2022 ರಲ್ಲಿ ಶುಭಮನ್ ಗಿಲ್ ಅವರನ್ನು ಔಟ್ ಮಾಡಿದಾಗ ಮಥೀಷ ಪತಿರಾನ ಈ ಸಾಧನೆ ಮಾಡಿದ ಕೊನೆಯ ಆಟಗಾರರಾಗಿದ್ದರು.

IPL 2025 Who is Ashwani kumar who took wicket in the first ball of the debut match

ಕೆಕೆಆರ್ ತಂಡದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಅಶ್ವನಿ ಕುಮಾರ್ ಅವರನ್ನು ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಕರೆದರು. ನಾಯಕ ಭರವಸೆಯನ್ನು ಗಮನದಲ್ಲಿಟ್ಟುಕೊಂಡು ಬೌಲಿಂಗ್ ಮಾಡಿದ ಅಶ್ವನಿ ಕುಮಾರ್ ಕೆಕೆಆರ್ ತಂಡವನ್ನು ಕಟ್ಟಿ ಹಾಕಿದರು. ಅಜಿಂಕ್ಯ ರಹಾನೆ ನಂತರ, ಅಶ್ವಿನ್ ರಿಂಕು ಸಿಂಗ್ ಮತ್ತು ಮನೀಶ್ ಪಾಂಡೆ ಅವರ ವಿಕೆಟ್‌ಗಳನ್ನು ಸಹ ಪಡೆದರು. ಅಶ್ವಿನಿ ತಮ್ಮ ಮೊದಲೆರಡು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಸಂಚಲನ ಮೂಡಿಸಿದರು. ನಂತರ ಅವರು ತಮ್ಮ ಮೂರನೇ ಓವರ್‌ನಲ್ಲಿ ಅಪಾಯಕಾರಿ ಬ್ಯಾಟರ್ ಆಂಡ್ರೆ ರಸೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಶ್ವನಿ ಕುಮಾರ್ ಕೇವಲ 3 ಓವರ್‍‌ಗಳಲ್ಲಿ 24 ರನ್‌ ನೀಡಿ 4 ವಿಕೆಟ್ ಕಬಳಿಸಿದರು.

ಅಶ್ವಿನ್ ಕುಮಾರ್ ಯಾರು?

ಅಶ್ವನಿ ಕುಮಾರ್ ಪಂಜಾಬ್ ಮೂಲದವರಾಗಿದ್ದು, ಅಪಾಯಕಾರಿ ಬೌನ್ಸರ್‌ ಎಸೆತಗಳನ್ನು ಹಾಕುವುದಕ್ಕೆ ಹೆಸರುವಾಸಿಯಾಗಿದ್ದಾರೆ. ವಿಭಿನ್ನ ಎಸೆತಗಳನ್ನು ಹಾಕುವ ಅಶ್ವನಿ ನಿಖರವಾಗಿ ವೈಡ್ ಯಾರ್ಕರ್ ಅನ್ನು ಎಸೆಯಬಲ್ಲರು. 2024 ರಲ್ಲಿ ಶೇರ್ ಇ ಪಂಜಾಬ್ ಟಿ20 ಟ್ರೋಫಿಯಲ್ಲಿ ಅಶ್ವನಿ ತಮ್ಮ ಡೆತ್ ಬೌಲಿಂಗ್ ಪ್ರದರ್ಶನದ ಮೂಲಕ ಮುಂಬೈ ಇಂಡಿಯನ್ಸ್ (ಎಂಐ) ಸ್ಕೌಟ್ಸ್‌ಗಳ ಗಮನ ಸೆಳೆದಿದ್ದರು.

23 ವರ್ಷದ ಅಶ್ವನಿ ಕುಮಾರ್ ಅವರು 2022 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಪಾದಾರ್ಪಣೆ ಮಾಡಿದರು. ಆದರೆ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಅವರು 8.50 ರ ಎಕಾನಮಿಯೊಂದಿಗೆ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಅಲ್ಲದೆ, ಅವರು ಪಂಜಾಬ್ ಪರ ಎರಡು ಪ್ರಥಮ ದರ್ಜೆ ಮತ್ತು ನಾಲ್ಕು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗಳಿಗೆ ಬಿಡ್ ಮಾಡಿತ್ತು.

ಇಂದು ಐಪಿಎಲ್‌ನಲ್ಲಿ ಅಶ್ವನಿ ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 3/37 ಮತ್ತು ಟಿ20 ಕ್ರಿಕೆಟ್‌ನಲ್ಲಿ 1/19 ಅವರ ಹಿಂದಿನ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು. ಈಗ ಐಪಿಎಲ್‌ ಇತಿಹಾಸದಲ್ಲಿ ಚೊಚ್ಚಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Story first published: Monday, March 31, 2025, 23:00 [IST]
Other articles published on Mar 31, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+