For Quick Alerts
ALLOW NOTIFICATIONS  
For Daily Alerts
 

IPL 2025: ಲಕ್ನೋ ಬೌಲರ್‌ಗಳಿಗೆ ಕಾಡಿದ ಪವರ್ ಹಿಟ್ಟರ್ ಅನಿಕೇತ್ ವರ್ಮಾ ಯಾರು?

ಐಪಿಎಲ್ 2025 ರ 7 ನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಈ ಪಂದ್ಯದಲ್ಲಿ 23 ವರ್ಷದ ಯುವ ಬ್ಯಾಟರ್ ತನ್ನ ಸ್ಫೋಟಕ ಬ್ಯಾಟಿಂಗ್‌ನಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈ ಬ್ಯಾಟರ್ 250 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿ ಎಲ್ಲರ ಗಮನ ಸೆಳೆದರು. ಒಂದೇ ಇನ್ನಿಂಗ್ಸ್‌ನಲ್ಲಿ ಐದು ಭರ್ಜರಿ ಸಿಕ್ಸರ್ ಬಾರಿಸಿ ಮಿಂಚಿದರು. ಈ ಪವರ್ ಹಿಟ್ಟರ್‍‌ನ ಅದ್ಭುತ ಪ್ರದರ್ಶನದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ 190 ರನ್‌ಗಳನ್ನು ತಲುಪುವಲ್ಲಿ ಯಶಸ್ವಿಯಾಯಿತು. ಈ ಪವರ್ ಹಿಟ್ಟರ್ ಬೇರೆ ಯಾರು ಅಲ್ಲ, ಎಸ್‌ಆರ್‍‌ಹೆಚ್ ತಂಡದ ಸ್ಪೋಟಕ ಬ್ಯಾಟರ್ ಅನಿಕೇತ್ ವರ್ಮಾ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಹೈದರಾಬಾದ್ ತಂಡಕ್ಕೆ ಅನಿಕೇತ್ ವರ್ಮಾ ನೆರವಾದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಅನಿಕೇತ್ ವರ್ಮಾ ಹೈದರಾಬಾದ್ ತಂಡವನ್ನು ಸವಾಲಿನ ಗುರಿ ಕಡೆಗೆ ಸಾಗಿಸಿದರು.

IPL 2025 Who is the power hitter Aniket Verma who impressed in match against Lucknow Supergiants

ಪವರ್ ಹಿಟ್ಟರ್ ಯಾರು?

ಸನ್‌ರೈಸರ್ಸ್ ಹೈದರಾಬಾದ್ ಪರ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ರೆಡ್ಡಿ ಮತ್ತು ಹೆನ್ರಿಕ್ ಕ್ಲಾಸೆನ್‌ರಂತಹ ಅಪಾಯಕಾರಿ ಬ್ಯಾಟರ್‍‌ಗಳಿಗೆ ಈ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಉತ್ತಮ ಮೊತ್ತ ತಲುಪಲು ಎಸ್‌ಆರ್‍‌ಹೆಚ್ ತಂಡಕ್ಕೆ ರನ್‌ಗಳು ಬೇಕಾಗಿದ್ದವು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಅನಿಕೇತ್ ವರ್ಮಾ ತಮ್ಮ ಎರಡನೇ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಇದಾದ ನಂತರ, ಅವರು ಕೇವಲ ಸಿಕ್ಸರ್‌ಗಳನ್ನು ಮಾತ್ರ ಸಿಡಿಸಿದರು. ಅವರು ಎದುರಿಸಿದ 13 ಎಸೆತಗಳಲ್ಲಿ 5 ಸಿಕ್ಸರ್‌ಗಳೊಂದಿಗೆ 36 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 276.92 ಆಗಿತ್ತು. ಅವರ ಇನ್ನಿಂಗ್ಸ್‌ನಿಂದಾಗಿ ತಂಡವು ಒಟ್ಟು 190 ರನ್‌ಗಳನ್ನು ತಲುಪುವಲ್ಲಿ ಯಶಸ್ವಿಯಾಯಿತು.

ಚೊಚ್ಚಲ ಐಪಿಎಲ್ ಸೀಸನ್ ಆಡುತ್ತಿರುವ ಅನಿಕೇತ್ ವರ್ಮಾ ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದಾರೆ. ಈಗ ಐಪಿಎಲ್‌ನಲ್ಲಿ ಅನಿಕೇತ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಅನಿಕೇತ್ ಅವರನ್ನು ಎಸ್‌ಆರ್‍‌ಹೆಚ್‌ 30 ಲಕ್ಷ ರೂ.ಗಳಿಗೆ ಬಿಡ್ ಮಾಡಿತ್ತು. ಭರವಸೆಯ ಬಲಗೈ ಬ್ಯಾಟರ್ ಮಾತ್ರವಲ್ಲ, ಬಲಗೈ ಬೌಲರ್ ಕೂಡ ಅನಿಕೇತ್ ಆಗಿದ್ದಾರೆ.

ಅನಿಕೇತ್ ವರ್ಮಾ 2000, ಫೆಬ್ರುವರಿ 5 ರಂದು ಉತ್ತರಪ್ರದೇಶದ ಝೂನ್ಸಿಯಲ್ಲಿ ಜನನಿಸಿದರು. ಐಪಿಎಲ್‌ನಂತಹ ವೇದಿಕೆಗೆ ಕರೆದೊಯ್ಯುವಲ್ಲಿ ಅವರ ಚಿಕ್ಕಪ್ಪ ದೊಡ್ಡ ಕೊಡುಗೆ ನೀಡಿದ್ದರು. ಅನಿಕೇತ್ ಅವರ ಆರಂಭಿಕ ಜೀವನವು ಹೋರಾಟಗಳಿಂದ ತುಂಬಿತ್ತು. ಅವನಿಗೆ ಕೇವಲ ಮೂರು ವರ್ಷದವನಿದ್ದಾಗ ಅವನ ತಾಯಿ ತೀರಿಕೊಂಡರು. ಇದಾದ ನಂತರ ಅವರ ತಂದೆ ಮತ್ತೆ ಮದುವೆಯಾದರು. ಅನಿಕೇತ್‌ನ ಚಿಕ್ಕಪ್ಪ ಅವನನ್ನು ಬೆಳೆಸಿ ಕ್ರಿಕೆಟಿಗನನ್ನಾಗಿ ಮಾಡಿದರು. ಅನಿಕೇತ್ 10 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಬ ಮತ್ತು ಅದರ ನಂತರ ಅವರು ಹಿಂತಿರುಗಿ ನೋಡಲಿಲ್ಲ.

ಅನಿಕೇತ್ ಮೂಲತಃ ಉತ್ತರ ಪ್ರದೇಶದವರಾಗಿದ್ದರೂ, ತಮ್ಮ ಕ್ರಿಕೆಟ್ ಪ್ರಯಾಣವನ್ನು ಮಧ್ಯಪ್ರದೇಶದಲ್ಲಿ ಪ್ರಾರಂಭಿಸಿದರು. ಮಧ್ಯಪ್ರದೇಶ ಪ್ರೀಮಿಯರ್ ಲೀಗ್‌ನಲ್ಲಿ ಅನಿಕೇತ್ 32 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ. ಇದಾದ ನಂತರ, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 30 ಲಕ್ಷ ರೂ.ಗೆ ಸೇರಿಸಿಕೊಳ್ಳುವ ಮೂಲಕ ಅನಿಕೇತ್ ಅವರನ್ನು ಅದೃಷ್ಟ ಬದಲಾಯಿಸಿತು. ಐಪಿಎಲ್ 2025ರ ಟೂರ್ನಿಗೂ ಮುನ್ನ, ಅಭ್ಯಾಸ ಪಂದ್ಯದಲ್ಲಿ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಮ್ ಮ್ಯಾನೇಜ್ಮೆಂಟ್ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

Story first published: Friday, March 28, 2025, 13:22 [IST]
Other articles published on Mar 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+