ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಆವೃತ್ತಿಗೂ ಮುನ್ನ, 10 ತಂಡಗಳಲ್ಲಿ 8 ತಂಡಗಳ ನಾಯಕರನ್ನು ಘೋಷಣೆ ಮಾಡಲಾಗದೆ. ಇತ್ತೀಚೆಗೆ ಭಾರೀ ಕುತೂಹಲ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ಟಾರ್ ಬ್ಯಾಟರ್ ರಜತ್ ಪತಿದಾರ್ ಅವರನ್ನು ನಾಯಕನನ್ನಾಗಿ ಮಾಡುವ ಮೂಲಕ ಆರ್‌ಸಿಬಿ ಫ್ರಾಂಚೈಸಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳಬಹುದು ಎಂಬ ಮಾತು ಕೇಳಿಬಂದಿತ್ತು. ಆದರೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಫ್ರಾಂಚೈಸಿ ರಜತ್‌ಗೆ ನಾಯಕತ್ವವನ್ನು ಹಸ್ತಾಂತರಿಸಿದೆ.
ಈಗ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕರು ಯಾರು ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿದೆ. ರಿಷಭ್ ಪಂತ್ ನಿರ್ಗಮನದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನ ಹೆಸರನ್ನು ಘೋಷಿಸಿಲ್ಲ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಹೊರ ನಡೆದ ಬಳಿಕ ಕೋಲ್ಕತ್ತಾ ಹೊಸ ನಾಯಕನನ್ನು ಘೋಷಣೆ ಮಾಡಿಲ್ಲ.

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವಕ್ಕೆ ಮೂವರು ಸಂಭಾವ್ಯ ಆಟಗಾರರನ್ನು ಹೆಸರಿಸಿದ್ದಾರೆ. ಅಕ್ಸರ್ ಪಟೇಲ್, ಕೆಎಲ್ ರಾಹುಲ್ ಮತ್ತು ಫಾಫ್ ಡು ಪ್ಲೆಸಿಸ್ ಓಟದಲ್ಲಿ ಮುಂದಿದ್ದಾರೆ ಇತ್ತೀಚೆಗೆ ಟೀಮ್ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಅಕ್ಸರ್ ಪಟೇಲ್ ಡೆಲ್ಲಿ ನಾಯಕನಾಗುವ ಸಾಧ್ಯತೆ ಎಂದು ಆಕಾಶ್ ಭವಿಷ್ಯ ನುಡಿದ್ದಾರೆ.
ಕಳೆದ ವರ್ಷದ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ತಂಡ ಅಕ್ಸರ್ ಅವರನ್ನು 16.50 ಕೋಟಿ ರೂ.ಗೆ ಉಳಿಸಿಕೊಂಡಿದ್ದು, ಅವರ ಸಾಮರ್ಥ್ಯದ ಮೇಲಿನ ಅವರ ವಿಶ್ವಾಸವನ್ನು ತೋರಿಸಿದೆ. ಹರಾಜಿನಲ್ಲಿ ಡೆಲ್ಲಿ ತಂಡ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂ.ಗೆ ಮತ್ತು ಫಾಫ್ ಡು ಪ್ಲೆಸಿಸ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿದೆ.
ಅಕ್ಸರ್ ಪಟೇಲ್ ಭಾರತ ಟಿ20 ತಂಡದ ಉಪನಾಯಕರೂ ಆಗಿದ್ದಾರೆ. ಅವರು ಚಾಂಪಿಯನ್ಸ್ ಟ್ರೋಫಿಯನ್ನೂ ಆಡಲಿದ್ದಾರೆ. ಭಾರತ ಏಕದಿನ ತಂಡದಲ್ಲಿ ಅವರಿಗೆ ಬಹಳ ಮುಖ್ಯವಾದ ಪಾತ್ರವನ್ನು ನೀಡಲಾಗಿದೆ.. ಅವನಿಗೆ ಆಟದ ನಾಡಿಮಿಡಿತ ಅರ್ಥವಾಗುತ್ತದೆ. ಅವರು ತಂಡವನ್ನು ತನಗಿಂತ ಮುಂದೆ ಇಟ್ಟರೆ, ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅವರು ಉತ್ತಮ ಆಯ್ಕೆಯಾಗಬಹುದು ಎಂದು ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನಾಯಕನ ಆಯ್ಕೆಗೆ ಕೆಎಲ್ ರಾಹುಲ್ ಅವರ ನಾಯಕತ್ವದ ಅನುಭವ ಪ್ಲಸ್ ಆಗಬಹುದು. ಅವರಿಗೆ ಕೆಲವು ನಾಯಕತ್ವದ ಅರ್ಹತೆಗಳಿವೆ. ಅವರು ಭಾರತ, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಮೂರು ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಎರಡು ವರ್ಷಗಳ ಕಾಲ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದಾರೆ. ಆದ್ದರಿಂದ ಅವರು ನಾಯಕರಾಗಬಹುದು ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಅಕ್ಸರ್ ಮತ್ತು ರಾಹುಲ್ ಬಿಟ್ಟು ಫಾಫ್ ಡು ಪ್ಲೆಸಿಸ್ ಒಂದು ಆಯ್ಕೆಯಾಗಿರಬಹುದು ಎಂದು ಆಕಾಶ್ ಚೋಪ್ರಾ ಸೂಚಿಸಿದರು.