ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ರಿಟೇನ್ ಪಟ್ಟಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಏಕೆಂದರೆ ರಾಜಸ್ಥಾನ ಫ್ರಾಂಚೈಸಿ ತನ್ನ ಪ್ರಮುಖ ಬ್ಯಾಟರ್ ಅನ್ನು ಉಳಿಸಿಕೊಂಡಿಲ್ಲ.
ಈ ಬ್ಯಾಟರ್ ಕಳೆದ 7 ಆವೃತ್ತಿಗಳಿಂದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಶಕ್ತಿಯಾಗಿದ್ದರು. ಅವರು ಬೇರೆ ಯಾರೂ ಅಲ್ಲ, ಇಂಗ್ಲೆಂಡ್ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್. ರಾಜಸ್ಥಾನ ಪರ ಬಟ್ಲರ್ ಬಹಳ ಸಮಯದಿಂದ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೂ ಅವರನ್ನು ರಾಜಸ್ಥಾನ ಫ್ರಾಂಚೈಸಿ ಉಳಿಸಿಕೊಂಡಿಲ್ಲ.

ರಾಜಸ್ತಾನ ಫ್ರಾಂಚೈಸಿ ಬಟ್ಲರ್ ಅವರನ್ನು ಉಳಿಸಿಕೊಳ್ಳತ್ತದೆ ಎಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅಕ್ಟೋಬರ್ 31 ರಂದು ರಾಜಸ್ಥಾನ ರಾಯಲ್ಸ್ ತನ್ನ ರಿಟೇನ್ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಅದರಲ್ಲಿ ಬಟ್ಲರ್ ಹೆಸರು ಇರಲಿಲ್ಲ. ಇದು ಅಭಿಮಾನಿಗಳಿಗೆ ಸಾಕಷ್ಟು ಆಶ್ಚರ್ಯವನ್ನುಂಟು ಮಾಡಿತ್ತು.
ಇದೀಗ ರಾಜಸ್ಥಾನ ರಾಯಲ್ಸ್ ತಂಡದ ನೂತನ ಹೆಡ್‌ಕೋಚ್ ರಾಹುಲ್ ದ್ರಾವಿಡ್ ಸಂದರ್ಶನದಲ್ಲಿ ಜೋಸ್ ಬಟ್ಲರ್ ಅವರನ್ನು ಕೈ ಬಿಟ್ಟಿರುವ ಬಗ್ಗೆ ತಿಳಿಸಿದ್ದಾರೆ. ರಾಹುಲ್ ದ್ರಾವಿಡ್ ಅವರು ಹೇಳಿಕೆ ಈ ಭಾರೀ ಸದ್ದು ಮಾಡಿದೆ.
ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಆಟಗಾರರ ರಿಟೇನ್ ನೀತಿಯ ಪ್ರತಿಯೊಂದು ನಿರ್ಧಾರದಲ್ಲೂ ತಂಡದ ನಾಯಕ ಸಂಜು ಸ್ಯಾಮ್ಸನ್ ಸಂಪೂರ್ಣ ಭಾಗವಹಿಸಿದ್ದರು ಎಂದು ರಾಹುಲ್ ಹೇಳಿದ್ದಾರೆ. ಹೀಗಿರುವಾಗ ನಾಯಕ ಸುಂಜ್ ಸ್ಯಾಮ್ಸನ್ ತಂಡಕ್ಕೆ ಜೋಸ್ ಬಟ್ಲರ್ ಬೇಡವಾದರಾ? ಫ್ರಾಂಚೈಸಿ ಜೊತೆಗೆ ನಾಯಕನೂ ಬಟ್ಲರ್ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ.
ರಾಹುಲ್ ದ್ರಾವಿಡ್ ಹೇಳಿಕೆ ಪ್ರಕಾರ, 'ಆಟಗಾರರನ್ನು ಸಂಜು ಸ್ಯಾಮ್ಸನ್ ಉಳಿಸಿಕೊಳ್ಳುವಲ್ಲಿ ದೊಡ್ಡ ಪಾತ್ರ ವಹಿಸಿದ್ದು, ಆಯ್ಕೆ ವಿಚಾರವಾಗಿ ಅವರಿಗೂ ಕಷ್ಟವಾಗಿರಬಹುದು. ನಾಯಕನಾಗಿ ಸಂಜು ಆಟಗಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಜೋಸ್ ಬಟ್ಲರ್ ಅವರನ್ನು ತಂಡದಿಂದ ಕೈ ಬಿಡುವುದರಲ್ಲಿ ಸಂಜು ಪಾತ್ರ ಮಹತ್ವದಾಗಿದೆ. ರಾಜಸ್ಥಾನ ರಾಯಲ್ಸ್ ಅಳೆದು ತೂಗಿ ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಸಂದೀಪ್ ಶರ್ಮಾ (ಅನ್‌ಕ್ಯಾಪ್ಡ್), ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ್ ಜುರೆಲ್ ಅವರನ್ನು ಉಳಿಸಿಕೊಂಡಿದೆ.
ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಉಳಿಸಿಕೊಳ್ಳದಕ್ಕೆ ಜೋಸ್ ಬಟ್ಲರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಆರ್‌ಆರ್ ಪರ 7 ಆವೃತ್ತಿಗಳಲ್ಲಿ ಆಡಿರುವುದಕ್ಕೆ ಜೋಸ್ ಬಟ್ಲರ್ ಧನ್ಯವಾದ ಹೇಳಿದ್ದಾರೆ. ಕ್ಯಾಪ್ಟನ್ ಸಂಜು ಸಮನ್ಸ್ ಕೂಡ ಬಟ್ಲರ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಸಂಜು ಕಾಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಬ್ರೇಕ್ ಎಮೋಜಿ ಹಾಕಿದ್ದಾರೆ.
ಬಟ್ಲರ್ 2016 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಬಟ್ಲರ್ ಅವರನ್ನು 2018 ರಲ್ಲಿ ಸೇರಿಸಿಕೊಂಡಿತ್ತು. ಅಲ್ಲಿಂದ ಆರ್‌ಆರ್ ಪರ ಅವರು 7 ಶತಕ ಮತ್ತು 18 ಅರ್ಧ ಶತಕಗಳೊಂದಿಗೆ 3055 ರನ್ ಗಳಿಸಿದ್ದಾರೆ. ಅವರು ಐಪಿಎಲ್ 2022ರ ಆವೃತ್ತಿಯಲ್ಲಿ ಆರ್‌ಆರ್ ಪರ ಗರಿಷ್ಠ 863 ರನ್ ಬಾರಿಸಿದ್ದರು. ಐಪಿಎಲ್‌ನಲ್ಲಿ ಇದುವರೆಗೆ ಬಟ್ಲರ್ 107 ಪಂದ್ಯಗಳಲ್ಲಿ 7 ಶತಕ ಮತ್ತು 19 ಶತಕಗಳ ನೆರವಿನಿಂದ 3582 ರನ್ ಗಳಿಸಿದ್ದಾರೆ.