ಕಳೆದ ಕೆಲವು ದಿನಗಳಿಂದ ಆರ್‌ಸಿಬಿ ಅಭಿಮಾನಿಗಳ ಮನದಲ್ಲಿ ಇದ್ದ ಪ್ರಶ್ನೆ ಒಂದೇ. ಈ ಬಾರಿ ಬೆಂಗಳೂರು ತಂಡದ ನಾಯಕ ಯಾರು? ಈ ಪ್ರಶ್ನೆಗೆ ಎಲ್ಲರೂ ತಮ್ಮ ತಮ್ಮ ವಿವೇಚನೆಗೆ ಹಲವು ಉತ್ತರಗಳನ್ನು ನೀಡುತ್ತಾ ಇದ್ದರು. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಮಾತ್ರ ಇದಕ್ಕೆ ತನ್ನದೇ ಆದ ಉತ್ತರವನ್ನು ಹುಡುಕಿತ್ತು. ಆದರೆ ಬಹಿರಂಗ ಪಡಿಸಿದಿಲ್ಲ. ಆದರೆ ಗುರುವಾರ ಆರ್‌ಸಿಬಿ ಮುಂದಿನ ನಾಯಕ ಯಾರು ಬಹಿರಂಗ ಪಡಿಸಿದೆ. ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಮಧ್ಯ ಪ್ರದೇಶದ ಸ್ಟಾರ್ ಆಟಗಾರ ರಜತ್ ಪಾಟಿದಾರ್ ಅವರ ಮುಂದಾಳತ್ವದಲ್ಲಿ ಕಣಕ್ಕೆ ಇಳಿಯಲಿದೆ. ಈ ಮೂಲಕ ಹಲವು ಊಹಾಪೋಹಗಳಿಗೆ ತೆರೆ ಬಿದ್ದಿದೆ.
ವಿರಾಟ್ ಕೊಹ್ಲಿ ಅವರಿಗೆ ಪಟ್ಟ ಕಟ್ಟ ಬೇಕು ಎಂದು ಹಲವು ಸ್ಟಾರ್ ಆಟಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದರು. ಆದರೆ ಟೀಮ್ ಮ್ಯಾನೇಜ್ಮೆಂಟ್ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಮನಸ್ಸೇ ಮಾಡಲಿಲ್ಲ. ಆರ್‌ಸಿಬಿ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿತ್ತು. ಅಲ್ಲದೆ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ನಾಯಕತ್ವದ ಗುಣಗಳನ್ನು ಇರುವ ಆಟಗಾರರಿಗೆ ಮಣೆ ಹಾಕಲಿಲ್ಲ. ಆಗಲೇ ಚರ್ಚೆಗಳು ಆರಂಭವಾದವು. ಆಗ ಅಭಿಮಾನಿಗಳಲ್ಲಿ ಇದ್ದಿದ್ದು, ಎರಡೇ ಹೆಸರು. ಮೊದಲನೇಯದ್ದು ವಿರಾಟ್ ಕೊಹ್ಲಿ, ಎರಡನೇ ಅವರು ರಜತ್ ಪಾಟಿದಾರ.

ರಜತ್ ಪಾಟಿದಾರವನ್ನು ತಂಡ ಐಪಿಎಲ್ ಮೆಗಾ ಹರಾಜಿನ ಅಂಗಳಕ್ಕೆ ಬಿಡಲಿಲ್ಲ. ಇವರು ತಂಡದ ಎರಡನೇ ಆಯ್ಕೆಯ ಆಟಗಾರ ಆಗಿ ತಂಡದಲ್ಲಿ ಉಳಿದಿದ್ದರು. ಆಗಲೇ ಊಹಾಪೋಹಗಳು ಆರಂಭವಾದವು.
ನಿಶ್ಚಿತವಾಗಿ ಆರ್‌ಸಿಬಿ ಈ ಬಾರಿ ಹೊಸ ತಂಡದೊಂದಿಗೆ ಕಣಕ್ಕೆ ಇಳಿಯಲಿದೆ. ಈ ಬಾರಿ ತಂಡದಲ್ಲಿ ಇರುವ ಹಳಬ ಆಟಗಾರರು ಎಂದರೆ ಇಬ್ಬರೇ. ಉಳಿದಂತೆ ಎಲ್ಲ ಆಟಗಾರರು ಸಹ ಹೊಸಬರೆ ಇದ್ದಾರೆ. ನವ ಉತ್ಸಾಹದಲ್ಲಿ ಆರ್‌ಸಿಬಿ ಈ ಬಾರಿ ಕಣಕ್ಕೆ ಇಳಿಯಲಿದೆ. ಈ ಹಿಂದೆ ಆರ್‌ಸಿಬಿ ಇನ್ನು ಹೊಸ ಅಧ್ಯಾಯ ಆರಂಭ ಎಂದು ತಿಳಿಸಿತ್ತು. ಆದರೆ ಈ ಅಧ್ಯಾಯ ಈ ವರ್ಷ ಆರಂಭವಾಗಲಿದೆ ಎಂದು ಅನಿಸುತ್ತಿದೆ.
ಖಂಡಿತವಾಗಿಯೂ ಆರ್‌ಸಿಬಿ ಮ್ಯಾನೇಜ್ಮೆಂಟ್ ಭವಿಷ್ಯದ ದೃಷ್ಟಿಯಿಂದ ಚಿಂತೆ ಮಾಡಿದೆ. ವಿರಾಟ್ ಅವರಿಗೆ 37 ವರ್ಷ. ರಜತ್‌ಗೆ 31 ವರ್ಷ. ಇವರು ಇನ್ನು ಸಾಕಷ್ಟು ಸಮಯ ತಂಡದ ಪರ ಕಳಿಯಬಹುದು. ಅಲ್ಲದೆ ವಿರಾಟ್ ಕೊಹ್ಲಿ ಮುಂದಿನ ಸರಣಿಯಲ್ಲಿ ಮೈ ಚಳಿ ಬಿಟ್ಟು ಮಾಡಲು ಅನುವು ಮಾಡಿಕೊಡಲು ಈ ನಿರ್ಧಾರ ಮಹತ್ವದಾಗಿದೆ. ಅಲ್ಲದೆ ಈಗಾಗಲೇ ದೇಶೀಯ ಟೂರ್ನಿಯಲ್ಲಿ ಭರ್ಜರಿ ನಾಯಕತ್ವದ ಗುಣಗಳನ್ನು ತೊರಿಸಿರುವ ರಜತ್ ಸೂಕ್ತ ಆಯ್ಕೆ.

ವಿರಾಟ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಹಲವು ವರ್ಷಗಳ ಕಾಲ ನಾಯಕತ್ವವನ್ನು ಮಾಡಿದ್ದಾರೆ. ಇವರ ನಾಯಕತ್ವದಲ್ಲಿ ಆರ್‌ಸಿಬಿ ಒಮ್ಮೆ ಫೈನಲ್‌ಗೆ ಪ್ರವೇಶಿಸಿತ್ತು. ಯುವ ಆಟಗಾರರಿಗೆ ಮಣೆ ಹಾಕುವ ದೃಷ್ಟಿಯಿಂದ ಆರ್‌ಸಿಬಿ ಈ ನಿರ್ಧಾರ ಕೈಗೊಂಡಿದೆ. ಇನ್ನು ವಿರಾಟ್ ಯಾವುದೇ ಒತ್ತಡ ಇಲ್ಲದೆ ಐಪಿಎಲ್‌ನಲ್ಲಿ ಬ್ಯಾಟ್ ಮಾಡಲು ಈ ನಿರ್ಧಾರ ಸಹಾಯಕವಾಗಲಿದೆ.
ಮೇಲ್ನೋಟಕ್ಕೆ ರಜತ್ ಪಾಟಿದಾರ ನಾಯಕತ್ವವನ್ನು ವಹಿಸಿಕೊಂಡರೂ, ವಿರಾಟ್ ಈ ತಂಡದ ಸೂತ್ರಧಾರ. ಕೀಲಿ ರಜತ್ ಆದರೆ, ಕೀಲಿ ಕೈ ವಿರಾಟ್. ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವಾಗ ವಿರಾಟ್ ಅವರ ನಿರ್ಣಯವೂ ಮಹತ್ವದಾಗಿರುತ್ತದೆ.