For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2025: ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಜೊತೆ ರೋಹಿತ್ ಶರ್ಮಾ ಆಡ್ತಾರಾ?; ಹಿಟ್‌ಮ್ಯಾನ್‌ ಬೆಲೆ ಎಷ್ಟು ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2025ರ ಆವೃತ್ತಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಆರಂಭದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಫ್ರಾಂಚೈಸಿ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ನಿಯಮಗಳನ್ನು ಹೊರಡಿಸಿದೆ. ಫ್ರಾಂಚೈಸಿಗಳು ಅಕ್ಟೋಬರ್ 31 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ಕಳೆದ ಐಪಿಎಲ್‌ನಲ್ಲಿ ಅವರು ನಾಯಕತ್ವ ಕಳೆದುಕೊಂಡಿದ್ದರು. ಮುಂಬೈ ಇಂಡಿಯನ್ಸ್ ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿತ್ತು. ಇದಾದ ನಂತರ ಮುಂಬೈ ಇಂಡಿಯನ್ಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ. ಈ ನಡುವೆ ರೋಹಿತ್ ಶರ್ಮಾ ಮುಂದಿನ ನಡೆ ಏನು ಎಂಬುದು ಅವರ ಅಭಿಮಾನಿಗಲ್ಲಿ ಕುತೂಹಲ ಮೂಡಿಸಿದೆ.

IPL 2025 Will Rohit Sharma play with Virat Kohli at RCB

ಈ ಬಾರಿ ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಎಲ್ಲ 10 ತಂಡಗಳು ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು. ಆದರೆ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಅವರನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಮುಂಬೈ ಫ್ರಾಂಚೈಸಿ ರೋಹಿತ್ ಅವರನ್ನು ಉಳಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ತಂಡಗಳು ರೋಹಿತ್ ಶರ್ಮಾ ಅವರನ್ನು ಬಿಡ್ ಮಾಡಲು ಯೋಜನೆಗಳನ್ನು ರೂಪಿಸಿವೆ. ಈ ಪೈಕಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೆಸರುಗಳು ಮುನ್ನೆಲೆಗೆ ಬಂದಿವೆ.

ಹಿಟ್‌ಮ್ಯಾನ್ ಬೆಲೆ ಎಷ್ಟು?

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಒಂದೇ ತಂಡದಲ್ಲಿ ಆಡುವ ಬಗ್ಗೆ ಕೇಳಿದಾಗ, ಅವರು ತಮಾಷೆಯ ಉತ್ತರಿಸಿದ್ದಾರೆ. ಮೆಗಾ ಹರಾಜಿನಲ್ಲಿ ರೋಹಿತ್‌ಗಾಗಿ ಆರ್‌ಸಿಬಿ ಕನಿಷ್ಠ 20 ಕೋಟಿ ರೂಪಾಯಿ ಇಡಬೇಕಾಗುತ್ತದೆ ಎಂದು ಅಶ್ವಿನ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಕ್ರಿಯಿಸಿರುವ ಆರ್‌ಸಿಬಿ ಅಭಿಮಾನಿಗಳು ರೋಹಿತ್ ಶರ್ಮಾ ಅವರನ್ನು ಬಿಡ್ ಮಾಡಲು ತಮ್ಮ ನೆಚ್ಚಿನ ಫ್ರಾಂಚೈಸಿಯನ್ನು ಒತ್ತಾಯಿಸುತ್ತಿದ್ದಾರೆ.

ಆರ್‌ಸಿಬಿಗೆ ಚಾಂಪಿಯನ್ ನಾಯಕನ ಅಗತ್ಯ

ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಆರ್‌ಸಿಬಿ ಹೊಂದಿದೆ. ಆದರೆ ಒಮ್ಮೆಯೂ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ತಂಡ ಫೈನಲ್ ತಲುಪಿದ್ದು, ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಮುಂಬರುವ 2025ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಲು ಉತ್ತಮ ಅವಕಾಶವನ್ನು ಹೊಂದಿದೆ. ಆದರೆ ತಂಡಕ್ಕೆ ಚಾಂಪಿಯನ್ ಮಾಡುವ ನಾಯಕನ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಮೆಗಾ ಹರಾಜಿನಲ್ಲಿ ಬಂದರೆ ಆರ್‌ಸಿಬಿಗೆ ಉತ್ತಮ ಆಯ್ಕೆಯಾಗಬಹುದು.

2011ರ ಐಪಿಎಲ್‌ಗೂ ಮುನ್ನ ರೋಹಿತ್ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡಿದ್ದರು. ಅವರು ತಂಡವನ್ನು ಐದು ಬಾರಿ ಐಪಿಎಲ್ ಚಾಂಪಿಯನ್ ಮಾಡಿದ್ದರು. ಒಂದು ವೇಳೆ ಆರ್‌ಸಿಬಿಗೆ ರೋಹಿತ್ ಶರ್ಮಾ ಬಂದರೆ ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕೀಳಿಯಬಹುದು. ಜೊತೆಗೆ ಅವರಿಗೆ ಆರ್‌ಸಿಬಿ ತಂಡದ ನಾಯಕನ ಜವಾಬ್ದಾರಿ ಸಿಗಲಿದೆ. ಇದಲ್ಲದೇ ಆರ್‌ಸಿಬಿ ಅಭಿಮಾನಿಗಳಿಗೆ ಈ ಜೋಡಿಯ ಆಟವನ್ನು ನೋಡಿ ಕಣ್ತುಂಬಿಕೊಳ್ಳುವ ಅವಕಾಶವೂ ಸಿಗಲಿದೆ.

Story first published: Tuesday, October 15, 2024, 14:09 [IST]
Other articles published on Oct 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+