IPL 2025, RR vs GT: ರಾಯಲ್ಸ್ ಗೆಲುವಿನ ಯಶಸ್ಸಿನ ವೈಭವ್ ಇವರೇ...
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಯಿತು. ಸೋಮವಾರದ ನಡೆದ ಐಪಿಎಲ್ 2025 ರ 46ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ರಾಜಸ್ಥಾನ ರಾಯಲ್ಸ್ 8 ವಿಕೆಟ್‌ಗಳಿಂದ ಸೋಲಿಸಿತು. ರಾಜಸ್ಥಾನ ಪರ ಯುವ ಆರಂಭಿಕ ಬ್ಯಾಟರ್ಸ್ ಅಬ್ಬರಿಸಿದರು. ವೈಭವ್ ಸೂರ್ಯವಂಶಿ ಶತಕ ಬಾರಿಸುವ ಮೂಲಕ ರಾಜಸ್ಥಾನ ತಂಡದ ಗೆಲುವಿನ ಕೊಡುಗೆ ನೀಡಿದರು. ಅದರೆ ವೈಭವ್ ಸೂರ್ಯವಂಶಿಗೆ ಯಶಸ್ವಿ ಜೈಸ್ವಾಲ್ ಅವರು ಅದ್ಭುತ ಸಾಥ್ ನೀಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ಟೈಟನ್ಸ್ ಶುಭಮನ್ ಗಿಲ್ ಮತ್ತು ಜೋಶ್ ಬಟ್ಲರ್ ಅವರ ಬಿರುಸಿನ ಅರ್ಧಶತಕ ನೆರವಿನಿಂದ 210 ರನ್‌ಗಳ ಬೃಹತ್ಮೊತ್ತ ಕಲೆ ಹಾಕಿತು. ಗೆಲುವಿನ ಬೃಹತ್ ಮೊತ್ತ ಬೆನ್ನಟ್ಟಿದ ರಾಜಸ್ಥಾನ ತಂಡಕ್ಕೆ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಜೊತೆಯಾಟ ಗೆಲುವು ತಂದು ಕೊಟ್ಟಿತು. ರಾಜಸ್ಥಾನ ಕೇವಲ 15.5 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಚೇಸಿಂಗ್ ಶುರು ಮಾಡಿದ ರಾಜಸ್ಥಾನ ತಂಡದ ಪರ ಆರಂಭದಿಂದಲೇ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ವೈಭವ್ ಸೂರ್ಯವಂಶಿ ಅವರಂತೂ ಗುಜರಾತ್ ಟೈಟಾನ್ಸ್ ಬೌಲರ್ಸ್ ಅನ್ನು ತರಾಟೆಗೆ ತೆಗೆದುಕೊಂಡರು. ಅದ್ಭುತ ಫಾರ್ಮ್‌ನಲ್ಲಿ ಬ್ಯಾಟ್ ಬೀಸಿದ ವೈಭವ್ ಸೂರ್ಯವಂಶಿ ಅವರಿಗೆ ಮತ್ತೊಂದು ತುದಿ ನಿಂತು ಯಶಸ್ವಿ ಜೈಸ್ವಾಲ್ ಬೆಂಬಲ ನೀಡಿದರಿ. ಈ ಬೆಂಬಲದ ಬಲದಿಂದ ಸೂರ್ಯವಂಶಿ ಶತಕ ಸಿಡಿಸಲು ಸಾಧ್ಯವಾಯಿತು.
ಸೂರ್ಯವಂಶಿ ಒಂದೆಡೆ ಅಬ್ಬರಿಸುತ್ತಿದ್ದರೆ, ಜೈಸ್ವಾಲ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ರಾಜಸ್ಥಾನ ತಂಡದ ಗೆಲುವನ್ನು ಸುಲಭಗೊಳಿಸಿದರು. ಕೊನೆಯವರೆಗೂ ಜೈಸ್ವಾಲ್ ಕ್ರೀಸ್‌ನಲ್ಲಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಸತತ ಮೂರು ಪಂದ್ಯಗಳಲ್ಲಿ ರಾಜಸ್ಥಾನ ಗೆಲುವಿನ ಸನಿಹದಲ್ಲಿ ಸೋಲುಗಳನ್ನು ಎದುರಿಸಿತು. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ಮತ್ತೊಮ್ಮ ತನ್ನ ಹಳೆಯ ತಪ್ಪನ್ನು ಮಾಡಲಿಲ್ಲ. ಇದಕ್ಕೆ ಮುಖ್ಯ ಕಾರಣ ಯಶಸ್ವಿ ಜೈಸ್ವಾಲ್ ಕ್ರೀಸ್‌ನಲ್ಲಿ ನಿಂತು ಪಂದ್ಯವನ್ನು ಗೆಲ್ಲಿಸಿದರು.
ಯಶಸ್ವಿ ಜೈಸ್ವಾಲ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಗುಜರಾತ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜೈಸ್ವಾಲ್ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು. ಜೈಸ್ವಾಲ್ ಕೇವಲ 40 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಕಲೆ ಹಾಕಿದರು. ಪರಿಣಾಮ ರಾಜಸ್ಥಾನ ಕೇವಲ 15.5 ಓವರ್‍ಗಳಲ್ಲಿ ಗುರಿ ತಲುಪಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications