ಆಗಸ್ಟ್ 20 ಮಂಗಳವಾರ, ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಎಲ್ಲಾ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಈ ವರ್ಷ ಮೆಗಾ ಹರಾಜು ಪ್ರತಿಕ್ರಿಯೆ ಕೂಡ ನಡೆಯಲಿದೆ. ಹೀಗಾಗಿ ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಖರೀದಿಲು ತೆರೆಮರೆಯಲ್ಲಿ ಯೋಜನೆಗಳು ರೂಪುಗೊಳ್ಳುತ್ತಿವೆ.
ಆಟಗಾರರಿಗಿಂತ ಮೊದಲು ಕೋಚಿಂಗ್ ಸಿಬ್ಬಂದಿ ಬದಲಾವಣೆಯ ಹಂತ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಹೊಸ ಕೋಚ್‌ಗಾಗಿ ಎದುರು ನೋಡುತ್ತಿವೆ.

ಡೆಲ್ಲಿ ರಿಕಿ ಪಾಂಟಿಂಗ್ ಅವರನ್ನು ಮತ್ತು ಪಂಜಾಬ್ ಟ್ರೆವರ್ ಬೇಲಿಸ್ ಅವರನ್ನು ತೆಗೆದು ಹಾಕುವ ಸಾಧ್ಯತೆಗಳು ಹೆಚ್ಚಿವೆ. ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು ಹೊಸ ಮೆಂಟರ್‌ಗಾಗಿ ಹುಡುಕುತ್ತಿವೆ.
ಟೀಮ್ ಇಂಡಿಯಾ ಹೆಡ್ ಮುಖ್ಯ ಆಗುವ ಮೊದಲ ಗೌತಮ್ ಗಂಭೀರ್, ಕೆಕೆಆರ್ ಮತ್ತು ಎಲ್‌ಎಸ್‌ಜಿ ಎರಡು ತಂಡಗಳಿಗೆ ಮಾರ್ಗದರ್ಶಕರಾಗಿದ್ದರು. 2022 ಮತ್ತು 2023ರ ಐಪಿಎಲ್ ಸೀಸನ್‌ಗಳಲ್ಲಿ ಲಕ್ನೋದ ಮಾರ್ಗದರ್ಶಕರಾಗಿದ್ದರು. ಇದಾದ ಬಳಿಕ ನಂತರ ಅವರು 2024ರಲ್ಲಿ ಕೋಲ್ಕತ್ತಾ ಸೇರಿ ತಂಡವನ್ನು ಚಾಂಪಿಯನ್ ಮಾಡಿದ್ದರು.
ಗಂಭೀರ್ ಲಕ್ನೋ ತೊರೆದ ಮೇಲೆ ಮಾರ್ಗದರ್ಶಕರಾಗಿ ಫ್ರಾಂಚೈಸಿ ಯಾರನ್ನು ನೇಮಕ ಮಾಡಿಲ್ಲ. ಈ ಕಾರಣ ಲಕ್ನೋ ತಂಡದಲ್ಲೊ ತಂಡದಲ್ಲಿ ಈ ಹುದ್ದೆಯು 2023 ರಿಂದ ಖಾಲಿಯಾಗಿದೆ. ಈಗ ಈ ಸ್ಥಾನವನ್ನು ತುಂಬಲು ಲಕ್ನೋ ದೊಡ್ಡ ಹೆಜ್ಜೆಯನ್ನಿಟ್ಟಿದ್ದು, ಟೀಮ್ ಇಂಡಿಯಾದ ಮಾಜಿ ದಿಗ್ಗಜ ವೇಗದ ಬೌಲರ್ ಜಹೀರ್ ಖಾನ್ ಜೊತೆ ಮಾತುಕತೆ ನಡೆಸಿದ್ದಾರೆ.
ಕ್ರಿಕ್‌ಬಜ್ ವರದಿ ಪ್ರಕಾರ, ಜಹೀರ್ ಖಾನ್ ಅವರು ಲಕ್ನೋ ಫ್ರಾಂಚೈಸಿ ಜೊತೆಗೆ ಮಾರ್ಗದರ್ಶಕರ ಹುದ್ದೆಗಾಗಿ ಮಾತುಕತೆ ನಡೆಸುತ್ತಿದ್ದಾರೆ. 2023 ರಲ್ಲಿ ಗೌತಮ್ ಗಂಭೀರ್ ಕೋಲ್ಕತ್ತಾಗೆ ತೆರಳಿದ ನಂತರ ಲಕ್ನೋ ತಂಡದಲ್ಲಿ ಮಾರ್ಗದರ್ಶಕರಿಲ್ಲ.
ಅಲ್ಲದೆ, ಇದೀಗ ದಕ್ಷಿಣ ಆಫ್ರಿಕಾ ವೇಗಿ ಮೋರ್ನೆ ಮೊರ್ಕೆಲ್ ಅವರು ನೂತನ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೌಲಿಂಗ್ ಕೋಚ್ ಸ್ಥಾನ ಕೂಡ ಖಾಲಿಯಾಗಿದೆ. ಹೀಗಾಗಿ ಗಂಭೀರ್ ಪಾತ್ರಕ್ಕೆ ಜಹೀರ್ ಅವರನ್ನು ನೇಮಕ ಮಾಡಿದರೆ, ಅವರು ಬೌಲಿಂಗ್ ಕೋಚ್ ಸಹಾ ಆಗಬಹುದು.
ಬಿಸಿಸಿಐ ಭಾರತ ತಂಡದ ನೂತನ ಕೋಚ್ ಹುಡುಕಾಟದಲ್ಲಿದ್ದಾಗ ಜಹೀರ್ ಖಾನ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಇದು ಆಗಲಿಲ್ಲ. ಗಂಭೀರ್ ಅವರ ಶಿಫಾರಸಿನ ಮೇರೆಗೆ ಬಿಸಿಸಿಐ ಮೊರ್ಕೆಲ್‌ಗೆ ಆದ್ಯತೆ ನೀಡಿತ್ತು. ಇದರಿಂದ ಜಹೀರ್ ಭಾರತ ತಂಡದ ಬೌಲಿಂಗ್ ಕೋಚ್ ಆಗಲಿಲ್ಲ.
ಐಪಿಎಲ್‌ನಲ್ಲಿ ಜಹೀರ್ ಬೌಲಿಂಗ್ ಕೋಚ್ ಆಗಿ ಅಪಾರ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡದೊಂದಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಒಂದು ವೇಳೆ ಜಹೀರ್ ಲಕ್ನೋ ತಂಡದ ಮೆಂಟರ್ ಆದರೆ, ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಶಾಕ್ ಕಾದಿದೆ.
ಹಲವು ವರ್ಷಗಳಿಂದ ಮುಂಬೈ ಜೊತೆಗೆ ಪ್ರಯಾಣಿಸುತ್ತಿರುವ ಜಹೀರ್ ತಂಡದ ನ್ಯೂನತೆ ಮತ್ತು ಬಲದ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹೀಗಾಗಿ ಅವರು ಲಕ್ನೋ ಸೇರಿಕೊಂಡರೆ, ಮುಂಬೈ ತಂಡದ ಬಲ ಕುಗ್ಗಲಿದೆ. ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಅವರು ಪ್ರತಿನಿಧಿಸಿದ್ದು, ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು 2017ರಲ್ಲಿ ಆಡಿದ್ದರು.