Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಲಕ್ನೋ ಸೂಪರ್ ಜೈಂಟ್ಸ್‌ ತಂಡಕ್ಕೆ ಜಹೀರ್ ಖಾನ್ ಮೆಂಟರ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆರಂಭಕ್ಕೂ ಮೊದಲು ದೊಡ್ಡ ಬದಲಾವಣೆ ಆಗಿದೆ.
ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಿದೆ.

ಎಲ್‌ಎಸ್‌ಜಿಯಲ್ಲಿ ಗೌತಮ್ ಗಂಭೀರ್ ನಿರ್ಗಮನದ ನಂತರ ಮೆಂಟರ್ ಹುದ್ದೆ ಖಾಲಿ ಉಳಿದಿತ್ತು. ಇದೀಗ ಎಲ್‌ಎಸ್‌ಜಿ ನೂತನ ಮೆಂಟರ್ ಆಗಿ ಜಹೀರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಇಂದು ಲಕ್ನೋ ತಂಡ ಸಾಮಾಜಿಕ ಜಾಲತಾಣ ಟ್ವೀಟರ್ (ಎಕ್ಸ್)ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

IPL 2025 Zaheer Khan Mentor for Lucknow Super Giants

2 ವರ್ಷಗಳ ಬಳಿಕ ಐಪಿಎಲ್

ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಲಕ್ನೋ ಜಹೀರ್ ಖಾನ್ ಅವರನ್ನು ಮೆಂಟರ್ ಆಗಿ ನೇಮಿಸಿರುವುದು ತಂಡಕ್ಕೆ ಆನೆ ಬಲ ಬಂತಾಗಿದೆ. ಬುಧವಾರ ಕೋಲ್ಕತ್ತಾದ ಆರ್‌ಪಿಎಸ್‌ಜಿ ಗ್ರೂಪ್‌ನ ಪ್ರಧಾನ ಕಛೇರಿಯಲ್ಲಿ ಅಧಿಕೃತ ಘೋಷಣೆ ಮಾಡಲಾಗಿದೆ. ಜಹೀರ್ ಅವರನ್ನು ಮಾರ್ಗದರ್ಶಕರನ್ನಾಗಿ ಮಾಡುವಾಗ ಸಂಜೀವ್ ಗೋಯೆಂಕಾ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

45 ವರ್ಷದ ಜಹೀರ್ 2 ವರ್ಷಗಳ ನಂತರ ಐಪಿಎಲ್‌ಗೆ ಮರಳಲಿದ್ದಾರೆ. ಅವರು 2018 ರಿಂದ 2022 ರವರೆಗೆ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಜಹೀರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸಂಬಂಧವು ಉತ್ತಮವಾಗಿತ್ತು. ಆದರೆ ಅವರು ಮುಂಬೈ ತೊರೆದು ಲಕ್ನೋ ಸೇರಿರುವುದು ಅಚ್ಚರಿ ಮೂಡಿಸಿದೆ.

ಅದ್ಭುತ ಪ್ರದರ್ಶನ

ಭಾರತ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಜಹೀರ್ ಖಾನ್ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.
ಭಾರತದ ಪರ ಜಹೀರ್ ಖಾನ್ ಮೂರು ಮಾದರಿಗಳಲ್ಲಿ ಒಟ್ಟು 611 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ ಐಪಿಎಲ್‌ನಲ್ಲಿಯೂ ಅವರು ಅಮೋಘ ಪ್ರದರ್ಶನ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ (ಈಗ ದೆಹಲಿ ಕ್ಯಾಪಿಟಲ್ಸ್) ತಂಡಗಳ ಪರ ಆಡಿರುವ ಅವರು 107 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2017ರಲ್ಲಿ ಕೊನೆಯ ಬಾರಿ ಐಪಿಎಲ್‌ನಲ್ಲಿ ಆಡಿದ್ದಾರೆ. ಇದಾದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿದ್ದಾರೆ.

Story first published: Wednesday, August 28, 2024, 19:14 [IST]
Other articles published on Aug 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+