ಒಂದೇ ಐಪಿಎಲ್ ಆವೃತ್ತಿಯಲ್ಲಿ 65 ಸಿಕ್ಸರ್ ಬಾರಿಸಿ ಗೇಲ್ ದಾಖಲೆ ಅಳಿಸಿದ ವೈಭವ್ ಸೂರ್ಯವಂಶಿ
ನ್ಯೂ ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಸೀಸನ್‌ನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ. ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ವೈಭವ್ ತನ್ನದಾಗಿಸಿಕೊಂಡಿದ್ದಾರೆ.
ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಅಕ್ಷರಶಃ ಆರ್ಭಟಿಸಿದ್ದಾರೆ. ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ವೈಭವ್, ಶತಕದ ಅಂಚಿನಲ್ಲಿ ಎಡವಿ 29 ಎಸೆತಗಳಲ್ಲಿ 97 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ಮೂಲಕ ಇವರು ಕ್ರಿಸ್ ಗೇಲ್ ಅವರ ವೇಗದ ಶತಕದ ಸನಿಹದಲ್ಲಿ ಎಡವಿದ್ದಾರೆ. ವೈಭವ್ 5 ಬೌಂಡರಿ ಹಾಗೂ ಭರ್ಜರಿ 12 ಸಿಕ್ಸರ್ ನೆರವಿನಿಂದ ಸನ್‌ಗೆ ಶಾಕ್ ನೀಡಿದ್ದಾರೆ. ಈ ಕ್ಲಾಸ್ ಇನಿಂಗ್ಸ್ ಮೂಲಕ ವೈಭವ್ ಹಲವು ದಿಗ್ಗಜರ ಆಲ್-ಟೈಮ್ ದಾಖಲೆಗಳನ್ನು ಪುಡಿಪುಡಿ ಮಾಡಿದ್ದಾರೆ.

ಈ ಅಮೋಘ ಇನಿಂಗ್ಸ್ ಸಹಾಯದಿಂದ ವೈಭವ್ ಸೂರ್ಯವಂಶಿ ಅವರು ಐಪಿಎಲ್ ಇತಿಹಾಸದಲ್ಲಿ ದೊಡ್ಡ ದಾಖಲೆಯನ್ನು ಅಳಿಸಿ ಹಾಕಿದರು. ವೈಭವ್ ಸುರ್ಯವಂಶಿ ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡರು. ಈ ಮೂಲಕ ವೈಭವ್ ಸೂರ್ಯವಂಶಿ ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.
ಒಂದೇ ಆವೃತ್ತಿಯಲ್ಲಿ 65 ಸಿಕ್ಸರ್
2012ರಲ್ಲಿ ಕ್ರಿಸ್ ಗೇಲ್ ಆರ್‌ಸಿಬಿ ಪರ ಆಡುವಾಗ ಒಂದೇ ಐಪಿಎಲ್ ಆವೃತ್ತಿಯಲ್ಲಿ 59 ಸಿಕ್ಸರ್ ಬಾರಿಸಿದ ಹಿರಿಮೆಯನ್ನು ಹೊಂದಿದ್ದರು. ಈಗ ಈ ದಾಖಲೆ ವೈಭವ್ ಸೂರ್ಯವಂಶಿ ಅವರದ್ದಾಗಿದೆ. ವೈಭವ್ 19ನೇ ಆವೃತ್ತಿಯ ಐಪಿಎಲ್‌ನಲ್ಲಿ
ಟ್ಟು 65 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
ಒಂದು ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
- ವೈಭವ್ ಸೂರ್ಯವಂಶಿ (2026): 65 ಸಿಕ್ಸರ್
- ಕ್ರಿಸ್ ಗೇಲ್ (2012): 59 ಸಿಕ್ಸರ್
- ಆಂಡ್ರೆ ರಸೆಲ್ (2019): 52 ಸಿಕ್ಸರ್
- ಕ್ರಿಸ್ ಗೇಲ್ (2013): 51 ಸಿಕ್ಸರ್
- ಜೋಸ್ ಬಟ್ಲರ್ (2022): 45 ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications