Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಗೆಲುವಿನ ಹುಡುಕಾಟದಲ್ಲಿ 5 ಬಾರಿ ಚಾಂಪಿಯನ್ಸ್‌

ಚೆನ್ನೈ: 19ನೇ ಆವೃತ್ತಿ ಐಪಿಎಲ್‌ನ 44ನೇ ಪಂದ್ಯದಲ್ಲಿ ದಾಖಲೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಹಾಗೂ ಮುಂಬೈ ಇಂಡಿಯನ್ಸ್‌ (ಎಂಐ) ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಈ ಬಾರಿಯ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿವೆ. ಇನ್ನು ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್‌ ಕನಸು ಕಷ್ಟಕರವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ಆಡಿದ 8 ಪಂದ್ಯಗಳಲ್ಲಿ 3 ಜಯ, 5 ಸೋಲು ಕಂಡಿದ್ದು, 6 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್‌ 8 ಪಂದ್ಯಗಳಲ್ಲಿ 2 ಜಯ, 6 ಸೋಲು ಕಂಡಿದ್ದು, 4 ಅಂಕಗಳೊಂದಿಗೆ, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಹೀಗಾಗಿ ಉಭಯ ತಂಡಗಳಿಗೆ ಪ್ಲೇ ಆಫ್‌ ಪ್ರವೇಶಿಸಲು ಮುಂದಿನ ಎಲ್ಲ ಪಂದ್ಯಗಳು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

IPL 2026

ಉಭಯ ತಂಡಗಳು ಹಿಂದಿನ ಪಂದ್ಯದಲ್ಲಿ ಸೋಲು ಕಂಡಿವೆ. ಚೆನ್ನೈ ಸೂಪರ್ ಕಿಂಗ್ಸ್‌ 8 ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್‌ ವಿರುದ್ಧ ನಿರಾಸೆ ಅನುಭವಿಸಿದರೆ, ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್‌ಗಳಿಂದ ಸನ್‌ ರೈಸರ್ಸ್‌ ಹೈದರಾಬಾದ್ ವಿರುದ್ಧ ಸೋಲು ಕಂಡಿದೆ. ಎರಡೂ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು, ಲಯಕ್ಕಾಗಿ ಪರದಾಟ ನಡೆಸುತ್ತಿದ್ದಾರೆ.

1
4-2026

ಲಯಕ್ಕೆ ಮರಳುವ ಅನಿವಾರ್ಯತೆ

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಲಯದಲ್ಲಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 304 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕಗಳನ್ನು ಸಿಡಿಸಿದ್ದಾರೆ. ಟಾಪ್‌ ಆರ್ಡರ್‌ನಲ್ಲಿ ಕಾಣಿಸಿಕೊಳ್ಳುವ ರುತುರಾಜ್ ಗಾಯಕ್ವಾಡ್‌ (178 ರನ್), ಶಿವಂ ದುಬೆ (150 ರನ್), ಸರ್ಫರಾಜ್ ಖಾನ್‌ (161) ರನ್‌ ಕಲೆ ಹಾಕುತ್ತಿದ್ದಾರೆ. ಆದರೆ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಈ ಆಟಗಾರರು ಮುಂಬೈ ಇಂಡಿಯನ್ಸ್‌ ವಿರುದ್ಧ ಅಬ್ಬರಿಸಿದರೆ ಮಾತ್ರ ದೊಡ್ಡ ಜಯದ ಕನಸು ನನಸಾಗುತ್ತದೆ.

IPL 2026

ಚೆನ್ನೈ ತಂಡದ ವೇಗದ ಬೌಲರ್‌ ಅನ್ಶುಲ್ ಕಾಂಬೋಜ್ (14 ವಿಕೆಟ್‌), ಜೇಮಿ ಓವರ್‌ಟನ್‌ (9 ವಿಕೆಟ್‌) ವೇಗದ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಸ್ಪಿನ್ ಬೌಲರ್‌ ನೂರ್ ಅಹ್ಮದ್ ಹಾಗೂ ಅಕೇಲ್ ಹೊಸೈನ್ ವಿಕೆಟ್‌ ಬೇಟೆ ನಡೆಸಿ ತಂಡಕ್ಕೆ ಆಧಾರವಾಗಬಲ್ಲರು.

ಒತ್ತಡದಲ್ಲಿ ಮುಂಬೈ

ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಒತ್ತಡದಲ್ಲಿದ್ದಾರೆ. ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ರನ್‌ ಕಲೆ ಹಾಕುವಲ್ಲಿ ಎಡವಿದ್ದಾರೆ. ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ ಅವರಂತಹ ಸ್ಟಾರ್ ಆಟಗಾರರು ರನ್‌ ಕಲೆ ಹಾಕುವಲ್ಲಿ ಎಡವಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೋಲ್ಟ್‌, ಜಸ್ಪ್ರೀತ್ ಬುಮ್ರಾ, ವಿಕೆಟ್‌ ಬೇಟೆ ನಡೆಸುವಲ್ಲಿ ವಿಫಲರಾಗಿದ್ದಾರೆ. ಇನ್ನು ಸ್ಪಿನ್ ಬೌಲರ್‌ಗಳು ಸಹ ಬಿಗುವಿನ ದಾಳಿ ಸಂಘಟಿಸಬೇಕಿದೆ.

Story first published: Friday, May 1, 2026, 18:47 [IST]
Other articles published on May 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+