ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹರಾಜು ಪ್ರಕ್ರಿಯೆ ಇನ್ನೆನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಹರಾಜಿಗೆ 1355 ಆಟಗಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಬಿಸಿಸಿಐ ಈ ಆಟಗಾರರ ಪಟ್ಟಿಯನ್ನು ಪರಿಷ್ಕರಿಸಿ 350ಕ್ಕೆ ಇಳಿಸಿದರು. ಈ ಆಟಗಾರರು ಹರಾಜಿನ ಅಂಗಳ ಪ್ರವೇಶಿಸಲಿದ್ದಾರೆ. ಉಳಿದಂತೆ 1005 ಆಟಗಾರರನ್ನು ಹರಾಜು ಪಟ್ಟಿಯಿಂದ ಕೈಬಿಡಲಾಗಿದೆ. ಸೇರಿಸಲಾದ ಪಟ್ಟಿಯಲ್ಲಿ ಒಟ್ಟು 35 ಹೊಸ ಮುಖಗಳು ಕಾಣಿಸಿಕೊಳ್ಳಲಿವೆ. ಈ ಆಟಗಾರರು ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಐಪಿಎಲ್ ಹರಾಜು ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರ ಹೆಸರನ್ನು ಕೊನೆಯ ಕ್ಷಣದಲ್ಲಿ ಸೇರಿಸಲಾಗಿದೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೀಡಿದ್ದ ನಿವೃತ್ತಿ ಹಿಂಪಡೆದಿದ್ದಾರೆ. ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇವರ ಈ ಪ್ರದರ್ಶನ ಇವರನ್ನು ಹರಾಜು ಅಂಗಳ ಪ್ರವೇಶಿಸುವಂತೆ ಮಾಡಿದೆ. ಕಳೆದ ಬಾರಿಗೆ ಹೋಲಿಸಿದರೆ ಡಿಕಾಕ್ ತಮ್ಮ ಮೂಲ ಬೆಲೆಯನ್ನು 1 ಕೋಟಿ ರೂ.ಗೆ ಇಳಿಸಿಕೊಂಡಿದ್ದಾರೆ. ಕಳೆದ ಬಾರಿ ಇವರ ಮೂಲ ಬೆಲೆ 2 ಕೋಟಿ ರೂ. ಆಗಿತ್ತು.

ಹರಾಜಿನಲ್ಲಿ ಒಟ್ಟು 240 ಭಾರತೀಯ ಆಟಗಾರರು, 110 ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ 224 ಭಾರತದ ಅನ್‌ಕ್ಯಾಪ್ಡ್ ಆಟಗಾರರು, 14 ವಿದೇಶಿ ಅನ್‌ಕ್ಯಾಪ್ಡ್ ಆಟಗಾರರು ಸಹ ಸೇರಿದ್ದಾರೆ. ಒಟ್ಟು 77 ಸ್ಥಾನಗಳಿಗೆ ಹರಾಜು ನಡೆಯಲಿದೆ. ಇದರಲ್ಲಿ 31 ವಿದೇಶಿ ಆಟಗಾರರು ಸೇರಿದ್ದಾರೆ. ಒಟ್ಟು 40 ಆಟಗಾರರ ಮೂಲ ಬೆಲೆ 2 ಕೋಟಿ ಆಗಿದೆ.
ಈ ಬಾರಿಯ ಐಪಿಎಲ್ ಹರಾಜು ಅಬುದಾಬಿಯಲ್ಲಿ ಡಿಸೆಂಬರ್ 16 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಆರಂಭದಲ್ಲಿ ಮಾರ್ಕಿ ಪ್ಲೇಯರ್‌ಗಳ ಹೆಸರುಗಳು ಹರಾಜು ಅಂಗಳ ಪ್ರವೇಶಿಸಲಿವೆ. ಬಳಿಕ ಬ್ಯಾಟರ್ಸ್, ಆಲ್‌ರೌಂಡರ್ಸ್, ವಿಕೆಟ್ ಕೀಪರ್/ ಬ್ಯಾಟರ್ಸ್, ವೇಗದ ಬೌಲರಗಳು, ಸ್ಪಿನ್ ಬೌಲರ್ಸ್‌ಗಳ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲ ಮಾಲೀಕರ ಕಣ್ಣುಗಳು ಆಸ್ಟ್ರೇಲಿಯಾ ಕ್ಯಾಮರೂನ್ ಗ್ರೀನ್ ಅವರ ಮೇಲೆ ನೆಟ್ಟಿರಲಿವೆ. ಇವರನ್ನು ಕೊಳ್ಳಲು ಫ್ರಾಂಚೈಸಿಗಳು ಹಣದ ಹೊಳೆ ಹರಿಸಬಹುದಾಗಿದೆ.
ಕ್ಯಾಪ್ಡ್ ಭಾರತೀಯ ಆಟಗಾರರು, 16
ಕ್ಯಾಪ್ಡ್ ವಿದೇಶಿ ಆಟಗಾರರು, 96
ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು, 224
ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು, 14
2 ಕೋಟಿ ರೂ.- 40 ಆಟಗಾರರು
1.50 ಕೋಟಿ ರೂ.- 9 ಆಟಗಾರರು
1.25 ಕೋಟಿ ರೂ.- 4 ಆಟಗಾರರು
1 ಕೋಟಿ ರೂ.- 17 ಆಟಗಾರರು
75 ಲಕ್ಷ ರೂ.- 42 ಆಟಗಾರರು
50 ಲಕ್ಷ ರೂ.- 4 ಆಟಗಾರರು
40 ಲಕ್ಷ ರೂ.- 7 ಆಟಗಾರರು
30 ಲಕ್ಷ ರೂ.- 227 ಆಟಗಾರರು