ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಮಂಗಳವಾರ (ಡಿ.16) ನಡೆಯಲಿದೆ. ಈ ಹರಾಜಿನಲ್ಲಿ350ಕ್ಕೂ ಹೆಚ್ಚು ಆಟಗಾರರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿಸಲು ಮಾಲೀಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದೇ ವೇಳೆ ದೇಶೀಯ ಟೂರ್ನಿಯಲ್ಲಿ ಹೆಸರು ಮಾಡಿದ ಯುವ ಆಟಗಾರರಿಗೂ ಫ್ರಾಂಚೈಸಿಗಳು ಹಣವನ್ನು ಹೂಡಲು ಸಿದ್ಧತೆ ನಡೆಸಿದ್ದಾರೆ. ಹಾಗಿದ್ದರೆ ಈ ಬಾರಿಯ ಹರಾಜಿನಲ್ಲಿ ಯಾವೆಲ್ಲಾ ಅನ್ಕ್ಯಾಪ್ಡ್ ಆಟಗಾರರು ದೊಡ್ಡ ಮೊತ್ತವನ್ನು ಪಡೆಯಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಜಮ್ಮು ಕಾಶ್ಮೀರ್ ತಂಡದ ಅಕಬ್ ನಬಿಗೆ ಸ್ಥಾನ. ಇವರು ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರು 19.98ರ ಸರಾಸರಿಯಲ್ಲಿ 125 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ 12 ಬಾರಿ ಐದಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಲ್ಲದೆ 9 ರಣಜಿ ಪಂದ್ಯಗಳಲ್ಲಿ ಅಕಬ್ 29 ವಿಕೆಟ್ ಉರುಳಿಸಿದ್ದಾರೆ. ಇವರು ಬ್ಯಾಟಿಂಗ್ ಮಾಡುವ ಕ್ಷಮತೆಯನ್ನು ಸಹ ಹೊಂದಿದ್ದಾರೆ. ಹೀಗಾಗಿ ಮಾಲೀಕರು ಇವರಿಗೆ ಹಣವನ್ನು ಹೂಡಬಹುದು.

ಅಕಬ್ ನಬಿಗೆ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಬಾಜಿ ಕಟ್ಟಬಹುದು ಎಂದು ಅಂದಾಜಿಸಲಾಗಿದೆ. ಇವರು ಸ್ವಿಂಗ್ ಬೌಲಿಂಗ್ನಿಂದ ತಂಡಕ್ಕೆ ನೆರವಾಗಬಲ್ಲ ಪ್ರತಿಭೆ.
ರಾಜಸ್ಥಾನ ತಂಡದ ಕಾರ್ತಿಕ್ ಶರ್ಮಾ ಸಹ ಈ ಬಾರಿಯ ಹರಾಜಿನಲ್ಲಿ ಸದ್ದು ಮಾಡಬಹುದು. ಇವರು ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ. ಇವರು ತಂಡಗಳಲ್ಲಿ ಸಮತೋಲನ ತರಬಹುದು. ಇವರು ವಿಕೆಟ್ ಕೀಪರ್ ಬ್ಯಾಟರ್ ಆಗಿ ಗಮನ ಸೆಳೆಯಬಹುದು.
ತಮಿಳುನಾಡು ಮೂಲದ ತುಷಾರ್ ರಾಹೇಜ್ ಅವರ ಮೇಲೂ ಎಲ್ಲರೂ ಒಂದು ಕಣ್ಣು ನೆಟ್ಟಿವೆ. ಇವರು ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಒಳ್ಳೆಯ ಭಾರತೀಯ ಆರಂಭಿಕ ಆಟಗಾರರನ್ನು ಹುಡುಕುತ್ತಿರುವ ತಂಡಗಳಿಗೆ ಇವರು ಬೆಸ್ಟ್ ಚಾಯ್ಸ್ ಆಗಬಹುದು.
ಪಂಜಾಬ್ ತಂಡದ ಅನ್ಮೋಲ್ ಪ್ರೀತ್ ಸಿಂಗ್ ಇವರು ದೇಶೀಯ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ನಿಂದ ಹೆಸರುವಾಸಿ. ಇವರು ಟಾಪ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ. ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಇವರಿಗೆ ದೊಡ್ಡ ಮೊತ್ತ ಸಿಗುವ ಸಾಧ್ಯತೆ ಇದೆ. ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆರ್ಭಟಿಸಿದ್ದಾರೆ. ಹೀಗಾಗಿ ಇವರ ಮೇಲೆ ಹರಾಜಿನಲ್ಲಿ ಫ್ರಾಂಚೈಸಿಗಳು ಹಣವನ್ನು ಹೂಡಬಹುದು.
ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ ಅಶೋಕ್ ಶರ್ಮಾ, ಐಪಿಎಲ್ 2026 ಹರಾಜಿನಲ್ಲಿ ಗಮನ ಸೆಳೆಯ ಬಹುದಾದ ಪ್ಲೇಯರ್. ಇವರು ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಭಾರತೀಯ ವೇಗಿಯನ್ನು ಹುಡುಕುತ್ತಿರುವ ಫ್ರಾಂಚೈಸಿಗಳ ಪಟ್ಟಿಯಲ್ಲಿ ಇವರಿಗೂ ಸ್ಥಾನ.