ಅಬುಧಾಬಿ: ಇಂಡಿಯನ್ ಪ್ರೀಮಿರ್ ಲೀಗ್ ಹರಾಜಿನಲ್ಲಿ ನಿರೀಕ್ಷೆಯಂತೆ ಸ್ಟಾರ್ ಆಟಗಾರರಿಗೆ ಮಾಲೀಕರು ಹಣವನ್ನು ಹೂಡಿದ್ದಾರೆ. ಈ ಬಾರಿಯ ಹರಾಜಿನಲ್ಲಿ ದುಬಾರಿ ಆಟಗಾರ ಎಂಬ ಹೆಗ್ಗಳಿಕೆ ಆಸ್ಟ್ರೇಲಿಯಾ ತಂಡದ ಕ್ಯಾಮರೂನ್ ಗ್ರೀನ್ ಅವರಿಗೆ ಸಲ್ಲುತ್ತದೆ. ಇವರಿಗೆ ಕೆಕೆಆರ್ 24.20 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಅಳೆದು ತೂಗಿ ಆಟಗಾರರಿಗೆ ಫ್ರಾಂಚೈಸಿಗಳು ಮಣೆ ಹಾಕಿದ್ದಾರೆ. ಇನ್ನು ಶ್ರೀಲಂಕಾದ ಮತೀಶ್ ಪತಿರಾಣಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ.
350ಕ್ಕೂ ಹೆಚ್ಚು ಆಟಗಾರರು ಇದ್ದ ಹರಾಜು ಪಟ್ಟಿಯಲ್ಲಿ ಮಾಲೀಕರು ಆಲ್‌ರೌಂಡರ್‌ಗಳನ್ನು ಗುರಿಯಾಗಿಸಿ ಹಣವನ್ನು ಹೂಡಿದ್ದಾರೆ. ಈ ವೇಳೆ ಆರ್‌ಸಿಬಿ ಸಹ ಭಾರತೀಯ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ 7 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಈ ಬಾರಿಯ ಹರಾಜಿನಲ್ಲಿ ಬಿಕರಿಯಾದ ಆಟಗಾರರ ಪಟ್ಟಿ ಇಲ್ಲಿದೆ.

1- ಡೇವಿಡ್ ಮಿಲ್ಲರ್, ₹2 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್
2- ಕ್ಯಾಮರೂನ್ ಗ್ರೀನ್, ₹24.20 ಕೋಟಿ, ಕೆಕೆಆರ್
3- ವನಿಂದು ಹಸರಂಗ, ₹2 ಕೋಟಿ, ಎಲ್‌ಎಸ್‌ಜಿ
4- ವೆಂಕಟೇಶ್ ಅಯ್ಯರ್, ₹7 ಕೋಟಿ, ಆರ್‌ಸಿಬಿ
5- ಕ್ವಿಂಟನ್ ಡಿಕಾಕ್, ₹1 ಕೋಟಿ, ಮುಂಬೈ
6- ಬೆನ್ ಡಕೆಟ್, ₹2 ಕೋಟಿ, ಡೆಲ್ಲಿ
7- ಫಿನ್ ಅಲೆನ್, ₹2 ಕೋಟಿ, ಕೆಕೆಆರ್
8- ಜಾಕೋಬ್ ಡಫಿ, ₹2 ಕೋಟಿ, ಆರ್‌ಸಿಬಿ
9- ಮತೀಶ್ ಪತಿರಾಣಾ, ₹18 ಕೋಟಿ, ಕೆಕೆಆರ್
10- ಆನ್ರಿಕ್ ನೋಕಿಯಾಮ ₹2 ಕೋಟಿ, ಎಲ್‌ಎಸ್‌ಜಿ
11- ರವಿ ಬಿಷ್ಣೋಯ್, ₹ 7.20 ಕೋಟಿ, ರಾಜಸ್ಥಾನ
12- ಅಕೇಲ್ ಹೊಸೈನ್, ₹2 ಕೋಟಿ, ಸಿಎಸ್‌ಕೆ
13- ಅಕಿಬ್ ದಾರ್, ₹8.40 ಕೋಟಿ, ಡೆಲ್ಲಿ
14- ಪ್ರಶಾಂತ್ ವೀರ್, ₹14.20 ಕೋಟಿ, ಸಿಎಸ್‌ಕೆ
15- ಶಿವಂಗ್ ಕುಮಾರ್, ₹30 ಲಕ್ಷ, ಎಸ್‌ಆರ್‌ಎಚ್
16- ಕಾರ್ತಿಕ್ ಶರ್ಮಾ, ₹14.20 ಕೋಟಿ, ಸಿಎಸ್‌ಕೆ
17- ಮುಕುಲ್ ಚೌಧರಿ, ₹2.60 ಕೋಟಿ, ಎಲ್‌ಎಸ್‌ಜಿ
18- ತೇಜಸ್ವಿ ಸಿಂಗ್, ₹3 ಕೋಟಿ, ಕೆಕೆಆರ್
19- ಅಶೋಕ್ ಶರ್ಮಾ, ₹90 ಲಕ್ಷ, ಗುಜರಾತ್
20- ಕಾರ್ತಿಕ್ ತ್ಯಾಗಿ, ₹30 ಲಕ್ಷ, ಕೆಕೆಆರ್
21- ನಮನ್ ತಿವಾರಿ, ₹1 ಕೋಟಿ, ಎಲ್‌ಎಸ್‌ಜಿ
22- ಸುಶಾಂತ್ ಮಿಶ್ರಾ, ₹90 ಲಕ್ಷ, ರಾಜಸ್ಥಾನ
23- ಯಶ್ ರಾಜ್ ಪುನಿಯಾ, ₹30 ಲಕ್ಷ, ರಾಜಸ್ಥಾನ
24- ಪ್ರಶಾಂತ್ ಸಾಳುಂಕೆ, ₹30 ಲಕ್ಷ, ಕೆಕೆಆರ್
25- ವಿಗ್ನೇಶ್ ಪುತ್ತೂರು, ₹30 ಲಕ್ಷ, ರಾಜಸ್ಥಾನ
26- ಪಾತುಮ್ ನಿಸ್ಸಾಂಕ, ₹ 4 ಕೋಟಿ, ಡೆಲ್ಲಿ
27- ರಾಹುಲ್ ತ್ರಿಪಾಠಿ, ₹ 75 ಲಕ್ಷ, ಕೆಕೆಆರ್
28- ಜೇಸನ್ ಹೋಲ್ಡರ್, ₹7 ಕೋಟಿ, ಗುಜರಾತ್
29- ಮ್ಯಾಥ್ಯೂ ಶಾರ್ಟ್, ₹1.50 ಕೋಟಿ, ಸಿಎಸ್ಕೆ
30- ಟಿಮ್ ಸಿಫರ್ಟ್, ₹1.50 ಕೋಟಿ, ಕೆಕೆಆರ್
31- ಮುಷ್ತಾಫಿಜುರ್ ರಹಮಾನ್, ₹9.2 ಕೋಟಿ, ಕೆಕೆಆರ್
32- ಡ್ಯಾನಿಶ್ ಮಾಲೆವಾರ್, ₹30 ಲಕ್ಷ, ಮುಂಬೈ
33- ಅಕ್ಷತ್ ರಘುವಂಶಿ, ₹2.2 ಕೋಟಿ, ಎಲ್ಎಸ್ಜಿ
34- ಸಾತ್ವಿಕ್ ದೇಸ್ವಾಕ್, ₹30 ಲಕ್ಷ, ಆರ್‌ಸಿಬಿ
35- ಅಮನ್ ಖಾನ್, ₹40 ಲಕ್ಷ, ಸಿಎಸ್‌ಕೆ
36- ಮಂಗೇಶ್ ಯಾದವ್, ₹5.20 ಕೋಟಿ, ಆರ್‌ಸಿಬಿ
37- ಸಲೀಲ್ ಅರೋರಾ, ₹1.40 ಕೋಟಿ, ಎಸ್ಆರ್‌ಎಚ್
38- ರವಿ ಸಿಂಗ್, ₹95 ಲಕ್ಷ, ರಾಜಸ್ಥಾನ
39- ಸಾಕಿಬ್ ಹುಸೇನ್, ₹30 ಲಕ್ಷ, ಎಸ್ಆರ್ಎಚ್
40- ಮೊಹಮ್ಮದ್ ಇಝಾರ್, ₹30 ಲಕ್ಷ, ಮುಂಬೈ
41- ಓಂಕಾರ್ ತರ್ಮಲೆ, ₹30 ಲಕ್ಷ, ಎಸ್ಆರ್‌ಎಚ್
42- ಕೂಪರ್ ಕೊನೊಲಿ, ₹3 ಕೋಟಿ, ಪಂಜಾಬ್
43- ಅಮಿತ್ ಕುಮಾರ್, ₹30 ಲಕ್ಷ, ಎಸ್‌ಆರ್‌ಎಚ್
44- ಅಥರ್ವ ಅಂಕೋಲೇಕರ್, ₹30 ಲಕ್ಷ, ಮುಂಬೈ
45- ಆಯುಷ್ ಹಿಂಗೆ, ₹30 ಲಕ್ಷ, ಎಸ್‌ಆರ್‌ಎಚ್
46- ಕ್ರೈನ್ಸ್ ಫುಲೆಟ್ರಾ, ₹30 ಲಕ್ಷ, ಎಸ್‌ಆರ್‌ಎಚ್
47- ಸಾರ್ಥಕ್ ರಂಜನ್, ₹30 ಲಕ್ಷ, ಕೆಕೆಆರ್
48- ದಕ್ಷ ಕಮ್ರಾ, ₹30 ಲಕ್ಷ, ಕೆಕೆಆರ್
49- ಲಿಯಾಮ್ ಲಿವಿಂಗ್‌ಸ್ಟೋನ್, ₹13 ಕೋಟಿ, ಎಸ್‌ಆರ್‌ಎಚ್
50- ರಚಿನ್ ರವೀಂದ್ರ, ₹2 ಕೋಟಿ, ಕೆಕೆಆರ್
51- ಆಕಾಶ್ ದೀಪ್, ₹1 ಕೋಟಿ, ಕೆಕೆಆರ್
52- ಮ್ಯಾಟ್ ಹೆನ್ರಿ, ₹2 ಕೋಟಿ, ಸಿಎಸ್‌ಕೆ
53- ಶಿವಂ ಮಾವಿ, ₹75 ಲಕ್ಷ, ಎಸ್‌ಆರ್‌ಎಚ್
54- ರಾಹುಲ್ ಚಹಾರ್, ₹5.2 ಕೋಟಿ, ಸಿಎಸ್ಕೆ
55- ಬೆನ್ ದ್ವಾರ್ಶುಯಿಸ್, ₹4.4 ಕೋಟಿ, ಪಂಜಾಬ್
56- ಜೋರ್ಡಾನ್ ಕಾಕ್ಸ್, ₹75 ಲಕ್ಷ, ಆರ್ಸಿಬಿ,
57- ಜೋಶ್ ಇಂಗ್ಲೀಷ್, ₹8.6 ಕೋಟಿ, ಲಕ್ನೋ
58- ಲುಂಗಿ ಎನ್ಗಿಡಿ, ₹2 ಕೋಟಿ, ಡೆಲ್ಲಿ
59- ಅಮನ್ ರಾವ್ ಪರ್ಲ್, ₹30 ಲಕ್ಷ, ರಾಜಸ್ಥಾನ
60- ಮಯಾಂಕ್ ರಾವತ್, ₹ 30 ಲಕ್ಷ, ಮುಂಬೈ
61- ಪ್ರವೀಣ್ ದುಬೆ, ₹ 30 ಲಕ್ಷ, ಪಂಜಾಬ್
62- ಸಾಹಿಲ್ ಪ್ರಕಾಶ್, ₹30 ಲಕ್ಷ, ಡೆಲ್ಲಿ
63- ವಿಶಾಲ್ ನಿಶಾದ್, ₹30 ಲಕ್ಷ, ಪಂಜಾಬ್
64- ಬ್ರಿಜೇಶ್ ಶರ್ಮಾ, ₹30 ಲಕ್ಷ, ರಾಜಸ್ಥಾನ
65- ಜ್ಯಾಕ್ ಎಡ್ವರ್ಡ್ಸ್, ₹ 3 ಕೋಟಿ, ಹೈದರಾಬಾದ್