IPL Auction 2026: ಹರಾಜಾದ ಕನ್ನಡಿಗರು ಎಷ್ಟು? ಅನ್‌ಸೋಲ್ಡ್ ಆದವರು ಯಾರು?
ಅಬುಧಾಬಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹರಾಜು ಪ್ರಕ್ರಿಯೆ ಮುಗಿದಿದೆ. ಈ ಹರಾಜಿನಲ್ಲಿ ಸ್ಟಾರ್ ವಿದೇಶಿ ಆಟಗಾರರಿಗೆ ಮಾಲೀಕರು ಹಣದ ಹೊಳೆಯನ್ನು ಹರಿಸಿದೆ. ಇನ್ನು ದೇಶೀಯ ಯುವ ಆಟಗಾರರಿಗೆ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಕರ್ನಾಟಕದ ಆಟಗಾರರು ಇದ್ದರು. ಹರಾಜಿನಲ್ಲಿ ಸೇಲ್ ಆದ ಕರ್ನಾಟಕದ ಆಟಗಾರರು ಯಾರು? ಅನ್‌ಸೋಲ್ಡ್ ಆದ ಆಟಗಾರರು ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅವರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಭಾರೀ ಮೊತ್ತವನ್ನು ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇವರಿಗೆ 25.20 ಕೋಟಿ ರೂ. ನೀಡಿದ ಕೆಕೆಆರ್ ತಂಡಕ್ಕೆ ಬರಮಾಡಿಕೊಂಡಿದೆ. ಇನ್ನು ಸಿಎಸ್‌ಕೆ ತಂಡ ದೇಶೀಯ ಆಟಗಾರರಾದ ರಾಜಸ್ಥಾನದ ಕಾರ್ತಿಕ್ ಶರ್ಮಾ, ಉತ್ತರ ಪ್ರದೇಶದ ಪ್ರಶಾಂತ್ ವೀರ್‌ಗೆ 14.20 ಕೋಟಿ ರೂ. ನೀಡಿ ಖರೀದಿಸಿದೆ. ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರು ಇದ್ದರು. ಈ ವೇಳೆ 32 ವರ್ಷದ ಪ್ರವೀಣ್ ದುಬೆ ಅವರಿಗೆ ಪಂಜಾಬ್ ಕಿಂಗ್ಸ್ ಮಣೆ ಹಾಕಿದೆ.

ಕರ್ನಾಟಕದ ಬೌಲರ್ ಪ್ರವೀಣ್ ದುಬೆ ಅವರಿಗೆ ಪಂಜಾಬ್ ಮೂಲ ಬೆಲೆ 30 ಲಕ್ಷ ರೂ. ನೀಡಿದೆ. ಇವರು ಐಪಿಎಲ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿ 2 ವಿಕೆಟ್ ಕಬಳಿಸಿದ್ದಾರೆ. ಇವರ ಮೇಲೆ ಪಂಜಾಬ್ ವಿಶ್ವಾಸವಿಟ್ಟಿದೆ.
ಉಳಿದಂತೆ ಕರ್ನಾಟಕದ ಯಾವೊಬ್ಬ ಆಟಗಾರನಿಗೂ ಮಾಲೀಕರು ಮಣೆ ಹಾಕಿಲ್ಲ. ಇದರಲ್ಲಿ ಕಳೆದ ಬಾರಿ ಆರ್‌ಸಿಬಿ ಪರ ನಾಕೌಟ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿದ ಮಯಾಂಕ್ ಅಗರ್‌ವಾಲ್, ಎಸ್‌ಆರ್‌ಎಚ್ ತಂಡದ ಪರ ಕೆಲವು ಪಂದ್ಯಗಳಲ್ಲಿ ಸ್ಫೋಟಕ ಆಟವಾಡಿದ ಅಭಿನವ್ ಮನೋಹರ್ ಸೇರಿದ್ದಾರೆ. ಹರಾಜಿನಲ್ಲಿದ್ದ ಕರ್ನಾಟಕದ ಆಟಗಾರರಲ್ಲಿ ಪ್ರವೀಣ್ ದುಬೇ ಮಾತ್ರ ಸೇಲ್ ಆಗಿದ್ದಾರೆ.
ಅನ್ ಸೋಲ್ಡ್ ಆದ ಕರ್ನಾಟಕದ ಆಟಗಾರರ ಪಟ್ಟಿ
ಮಯಾಂಕ್ ಅಗರವಾಲ್, ₹75 ಲಕ್ಷ
ಅಭಿನವ್ ಮನೋಹರ್, ₹30 ಲಕ್ಷ
ವಿದ್ವತ್ ಕಾವೇರಪ್ಪ, ₹30 ಲಕ್ಷ
ವಿದ್ಯಾಧರ ಪಾಟೀಲ, ₹30 ಲಕ್ಷ
ಕೆ.ಸಿ. ಕರಿಯಪ್ಪ, ₹30 ಲಕ್ಷ
ಮನೋಜ ಭಾಂಡಗೆ, ₹30 ಲಕ್ಷ
ಜಗದೀಶ ಸುಚಿತ್, ₹30 ಲಕ್ಷ
ಕೆ.ಎಲ್. ಶ್ರೀಜಿತ್, ₹30 ಲಕ್ಷ
ಅಭಿಲಾಷ್ ಶೆಟ್ಟಿ, ₹30 ಲಕ್ಷ
ಶ್ರೀವತ್ಸ ಆಚಾರ್ಯ, ₹30 ಲಕ್ಷ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications